Sumalata Ambrish: ನನ್ನ ಸಂಪೂರ್ಣ ಬೆಂಬಲ ಬಿಜೆಪಿಗೆ ಎನ್ನುತ್ತ, ಕೊನೆ ಗಳಿಗೆಯಲ್ಲಿ ಕೈಕೊಟ್ಟ ‘ಸ್ವಾಭಿಮಾನಿ ಸಂಸದೆ’ ಸುಮಲತಾ! ಮಂಡ್ಯದಲ್ಲಿ ಬಿಜೆಪಿಗರ ಆಕ್ರೋಶ!

Sumalatha gave up at the last moment for BJP

Sumalatha Ambrish: ಕಳೆದ ಲೋಕಸಭಾ ಚುನಾವಣೆಯಲ್ಲಿ(Parliment Election) ಮಂಡ್ಯ (Mandya) ದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದ, ಸ್ವಾಭಿಮಾನಿ ಸಂಸದೆ ಎಂದು ಹೇಳಿಕೊಳ್ಳುವ ಸುಮಲತಾ ಅಂಬರೀಷ್ (Sumalatha Ambrish) ಇದೀಗ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ.

 

ಸ್ವಾಭಿಮಾನಿ ಸಂಸದೆ ಎಂದು ಹೇಳಿಕೊಳ್ಳುವ ಮಂಡ್ಯಾ ಸಂಸದೆ ಸುಮಲತಾ ಅಂಬರೀಷ್​ ಅವರ ದ್ವಂದ್ವ ನಿಲುವು ಇದೀಗ ಬಯಲಾಗಿದೆ. ಇತ್ತೀಚೆಗೆ ಕೆಲ ದಿನಗಳಿಂದ ನನ್ನ ಸಂಪೂರ್ಣ ಬೆಂಬಲ ಬಿಜೆಪಿ (BJP) ಗೆ ಎಂದು ಎಲ್ಲೆಂದರಲ್ಲಿ ಹೇಳುತ್ತಾ, ಪ್ರಧಾನಿ ಮೋದಿಯವರ ಸಮಾವೇಶಗಳಲ್ಲಿ ಕಾಣಿಸುತ್ತಾ, ಅಬ್ಬರದ ಪ್ರಚಾರ ಮಾಡುತ್ತಾ, ವಿರೋಧ ಪಕ್ಷಗಳನ್ನು ಟೀಕಿಸುತ್ತ ರಾಜ್ಯದಲ್ಲಿ ಸುದ್ದಿಯಾಗಿದ್ದ ಸುಮಲತಾ ಇದೀಗ ಬಿಜೆಪಿಗೆ ಕೈ ಕೊಟ್ಟಿದ್ದಾರೆ.

ಹೌದು, ಸುಮಲತಾ ತನ್ನ ಸಂಪೂರ್ಣ ಬೆಂಬಲ ಬಿಜೆಪಿಗೆ ಅಂತ ಹೇಳಿದ್ದರೂ ಇದೀಗ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿಲ್ಲ! ಋಣ ಸಂದಾಯ ನೆಪದಲ್ಲಿ ಬಿಜೆಪಿ ಅಭ್ಯರ್ಥಿಗೆ ರೆಬೆಲ್​ ಲೇಡಿ ಕೈ ಕೊಟ್ಟಿದ್ದಾರೆ. ಮೇಲುಕೋಟೆ (Melukote) ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲು ರೈತ ಸಂಘದ ಅಭ್ಯರ್ಥಿ ಅಭ್ಯರ್ಥಿ ದರ್ಶನ್ ಪುಟ್ಟಣಯ್ಯ(Darshan Puttanayya) ಗೆ ಸುಮಲತಾ ಬೆಂಬಲ ಘೋಷಣೆ ಮಾಡಿದ್ದಾರೆ. ಇತ್ತ ಸುಮಲತಾ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿಗೆ ಶಾಕ್ ಆಗಿದೆ. ಯಸ್, ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್​ಗೆ ಕೊನೆಯ ಕ್ಷಣದಲ್ಲಿ ಸುಮಲತಾ ಅವರು ಕೈ ಕೊಟ್ಟಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಹಾಗೂ ರೈತ ಸಂಘ ಬಹಿರಂಗವಾಗಿ ಬೆಂಬಲ ನೀಡಿತ್ತು. ಹಿಂಬಾಗಿಲಿನಿಂದ ಸುಮಲತಾ ಗೆಲುವಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಸಹ ಶ್ರಮಿಸಿದ್ದರು. ಆದರೆ, ಇತ್ತೀಚೆಗೆ ಸುಮಲತಾ ಅವರು ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ ಎಂದು ಘೋಷಿಸಿದ್ದರು. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ ಎಂದು ಎಲ್ಲ ಕಡೆ ಹೇಳಿಕೊಂಡು ಬರುತ್ತಿದ್ದರು. ಆದರೀಗ ಬಿಜೆಪಿಗೆ ತಿರುಮಂತ್ರ ಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಹೇಳುತ್ತಿದ್ದಾರೆ.

ಸುಮಲತಾರ ಈ ದ್ವಂದ್ವ ನಡೆಯಿಂದ, ಏಕಾಏಕಿ ನಿಲುವಿನಿಂದ ಮೇಲುಕೋಟೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸುಮಲತಾಗೆ ನಾವು ಬೆಂಬಲ ಕೊಟ್ಟಿರಲಿಲ್ವ? ಇಷ್ಟು ದಿನ ನಮಗೇ ಬೆಂಬಲ ಎಂದು ಎಲ್ಲಾ ಕಡೆ ಹೇಳಿ ಇದೀಗ ಸಡನ್ ಯೂ ಟರ್ನ್ ಹೊಡೆದರೆ ಹೇಗೆ? ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿ, ಸುಮಲತಾ ವಿರುದ್ಧ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ಅಯ್ಯಯ್ಯೋ.. ಅನುಷ್ಕಾ ಶರ್ಮಾ ಚಡ್ಡಿ ಹಾಕಲ್ವಾ ? ವಿರಾಟ್ ಕೊಹ್ಲಿ, ಹೆಂಡ್ತಿಗೊಂದು ಚಡ್ಡಿ ಕೊಡಿಸಿ ಎಂದ ನೆಟ್ಟಿಗರು !

Leave A Reply

Your email address will not be published.