Karnataka Assembly Election 2023: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡೋದು ಹೇಗೆ? ಇಲ್ಲಿದೆ ಉತ್ತರ!

Karnataka assembly election 2023 How to Check if Your Name is in the Electoral Roll

Karnataka Assembly Election 2023: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಘಟಾನುಘಟಿಗಳು ಸ್ಪರ್ಧೆಗೆ ಇಳಿದಿದ್ದು, ಪಕ್ಷಗಳು ಭಾರೀ ಪ್ರಚಾರ ನಡೆಸುತ್ತಿವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇನ್ನು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡೋದು ಹೇಗೆ? ಇದಕ್ಕೆ ಇಲ್ಲಿದೆ ಉತ್ತರ!

ಭಾರತದ ಚುನಾವಣಾ ಆಯೋಗವು ನವೀಕರಿಸಿದ ಮತದಾರರ ಪಟ್ಟಿಯನ್ನು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂಬುದನ್ನು ನೀವು ಆನ್’ಲೈನ್​ ಮೂಲಕ ತಿಳಿದುಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ? ಇಲ್ಲವೋ? ಎಂಬುದನ್ನು ಚುನಾವಣೆಗೆ 10 ದಿನಗಳ ಮೊದಲು ಪರಿಶೀಲಿಸಬೇಕು. ಯಾಕೆಂದರೆ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಲು ಸಮಯಾವಕಾಶ ಇರುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡೋದು ಹೇಗೆ?

• ಎಪಿಕ್​ ಸಂಖ್ಯೆ ವಿಧಾನದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡಬಹುದು.
http://electoralsearch.in ವೆಬ್ ಸೈಟ್​ಗೆ ಭೇಟಿ ನೀಡಿ, ‘ಸರ್ಚ್​ ಬೈ ಎಪಿಕ್ ’ ಆಯ್ಕೆ ಮಾಡಿರಿ.
• ನಿಮ್ಮ ಗುರುತಿನ ಚೀಟಿಯ ಸಂಖ್ಯೆ, ರಾಜ್ಯ, ಕ್ಯಾಪ್ಚಾ ಕೋಡ್​ನ್ನು ನಮೂದಿಸಿ.
• ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಪರದೆಯ ಕೆಳಭಾಗದಲ್ಲಿ ಮಾಹಿತಿ ಕಾಣಿಸುತ್ತದೆ.

• ಸಾಮಾನ್ಯ ವಿಧಾನದಲ್ಲೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಚೆಕ್ ಮಾಡಬಹುದು.
http://electoralsearch.in ವೆಬ್ಸೈಟ್​ ಗೆ ಭೇಟಿ ನೀಡಿ ‘ಸರ್ಚ್​ ಬೈ ಡೀಟೇಲ್ಸ್’ ಅನ್ನು ಆಯ್ಕೆ ಮಾಡಿರಿ.
• ನಿಮ್ಮ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಕ್ಯಾಪ್ಚಾ ಕೋಡ್​ ನಮೂದಿಸಿ.
• ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ ಪರದೆಯ ಕೆಳಭಾಗದಲ್ಲಿ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: KPSC ಇಂಜಿನಿಯರ್, ಡಾಟಾ ಎಂಟ್ರಿ ಅಪರೇಟರ್ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಕೀ ಉತ್ತರ ಪ್ರಕಟ!!!

Leave A Reply

Your email address will not be published.