Duplicate Voter ID Card: ವೋಟರ್ ಐಡಿ ಕಳೆದು ಹೋಗಿದ್ದರೆ ಚಿಂತೆ ಬೇಡ! ಹೀಗೆ ಡುಪ್ಲಿಕೇಟ್ ಐಡಿ ಪಡೆದುಕೊಳ್ಳಿ!
if you have lost voter ID will get a duplicate voter ID Card
Duplicate Voter ID Card: ಕೇವಲ ಬೆರಳೆಣಿಕೆಯ ದಿನಗಳಲ್ಲಿ ಅಂದರೆ ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದೆ.
ಆದರೆ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕಿದ್ದರೆ ಚುನಾವಣಾ ಆಯೋಗ (Election Commission) ನಮಗೆ ನೀಡಿರುವ ವೋಟರ್ ಐಡಿ (Voter ID) ಬಹಳ ಮುಖ್ಯ. ವೋಟರ್ ಐಡಿ ಆಧಾರದಲ್ಲಿಯೇ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ವೋಟರ್ ಐಡಿ ಕಳೆದುಹೋಗಿದ್ದಲ್ಲಿ ಪರ್ಯಾಯ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಆದರೆ, ನೆನಪಿರಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರಲೇಬೇಕು. ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು ಇದ್ದು, ವೋಟರ್ ಐಡಿ ಕಳೆದುಹೋದ ಸಂದರ್ಭದಲ್ಲಿ ಡುಪ್ಲಿಕೇಟ್ ವೋಟರ್ ಐಡಿಗೆ (Duplicate Voter ID card) ಅರ್ಜಿ ಸಲ್ಲಿಸಬಹುದಾಗಿದೆ.
ಡುಪ್ಲಿಕೇಟ್ ವೋಟರ್ ಐಡಿ ಪಡೆಯಲು ಮೊದಲು ಈ ಕೆಳಗಿನ ದಾಖಲೆಗಳು ಸಿದ್ಧವಿರಬೇಕು :
ವೋಟರ್ ಐಡಿ ಕಳೆದುಹೋಗಿರುವುದಕ್ಕೆ ಸಂಬಂಧಿಸಿದ ಎಫ್ಐಆರ್ ಪ್ರತಿ
ಸಹಿ ಮಾಡಿದ ಫಾರ್ಮ್ EPIC-002
ನಿಮ್ಮ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋಗಳು
ಗುರುತಿನ ಮತ್ತು ವಿಳಾಸ ಪುರಾವೆಗಳಾದ ಆಧಾರ್ ಕಾರ್ಡ್, ಪಾಸ್ಪೋರ್ಟ್, ವಿದ್ಯುತ್ ಬಿಲ್ ಇತ್ಯಾದಿ
ಸದ್ಯ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿ ತಿಳಿಸಲಾಗಿದೆ.
ಡುಪ್ಲಿಕೇಟ್ ವೋಟರ್ ಐಡಿಗಾಗಿ ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನ :
ಸಮೀಪದ ಚುನಾವಣಾ ಕಚೇರಿಗೆ ಭೇಟಿ ನೀಡಿ ಫಾರ್ಮ್ EPIC-002 ನೀಡುವಂತೆ ಕೇಳಿ, ಆ ಅರ್ಜಿಯಲ್ಲಿ ನಿಮ್ಮ ಹೆಸರು, ಮೂಲ ಮತದಾರರ ಗುರುತಿನ ಚೀಟಿ ಸಂಖ್ಯೆ, ಲಿಂಗ ಮತ್ತು ವಯಸ್ಸು, ಮನೆಯ ವಿಳಾಸ, ವಾಸಸ್ಥಳದ ಪ್ರದೇಶ, ಪೊಲೀಸ್ ಠಾಣೆ ವಿವರ ಇತ್ಯಾದಿ ವಿಚಾರಗಳನ್ನು ನಮೂದಿಸಿ. ಜತೆಗೆ, ಹಾನಿಗೊಳಗಾದ ಮತದಾರರ ಗುರುತಿನ ಚೀಟಿಯನ್ನು ಹಿಂದಿರುಗಿಸಲು ಮತ್ತು ಕಳೆದುಹೋದ ಮತದಾರರ ಗುರುತಿನ ಚೀಟಿಯನ್ನು ಮರಳಿ ಪಡೆದ ನಂತರ ಡುಪ್ಲಿಕೇಟ್ ಐಡಿಯನ್ನು ಹಿಂದಿರುಗಿಸುವುದಕ್ಕೆ ಸಂಬಂಧಿಸಿದ ಆಯ್ಕೆಗಳಿಗೆ ಬಲ ಬದಿಗೆ ಟಿಕ್ ಮಾರ್ಕ್ ಮಾಡಿ.
ನಂತರ ಅದನ್ನು ಚುನಾವಣಾ ಕಚೇರಿಯಲ್ಲಿ ಆಧಾರ್ ಕಾರ್ಡ್ ಎಫ್ಐಆರ್ ಪ್ರತಿ, ಯುಟಿಲಿಟಿ ಬಿಲ್ಗಳು ಮುಂತಾದ ಸಂಬಂಧಿತ ದಾಖಲೆಗಳ ಜತೆ ಸಲ್ಲಿಸಿ.
ಅರ್ಜಿಯನ್ನು ಸಲ್ಲಿಸಿದ ಬಳಿಕ ರೆಫರೆನ್ಸ್ ಐಡಿ ಸಂಖ್ಯೆ ನೀಡುತ್ತಾರೆ. ಅರ್ಜಿಯ ಸ್ಥಿತಿಗತಿ ತಿಳಿಯುವುದಕ್ಕೆ ಇದು ಅಗತ್ಯ. ಅರ್ಜಿ ಸ್ವೀಕೃತಗೊಂಡ ನಂತರ ಡುಪ್ಲಿಕೇಟ್ ವೋಟರ್ ಐಡಿ ನಿಮಗೆ ನೀಡಲಾಗುತ್ತದೆ.
ಡುಪ್ಲಿಕೇಟ್ ವೋಟರ್ ಐಡಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :
ಚೀಫ್ ಎಲೆಕಟ್ಟೋರಲ್ ಆಫೀಸರ್ಸ್ ವೆಬ್ಸೈಟ್ನಿಂದ ಫಾರ್ಮ್ EPIC-002 ಅನ್ನು ಡೌನ್ಲೋಡ್ ಮಾಡಿ. ಇದು ಡುಪ್ಲಿಕೇಟ್ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಇರುವ ಅರ್ಜಿ ನಮೂನೆ ಆಗಿದೆ. ಅದರಲ್ಲಿ ನಿಮ್ಮ ಹೆಸರು, ಸಂಬಂಧಿಕರ ಹೆಸರು, ವಸತಿ ವಿಳಾಸ, ಪ್ರದೇಶ ಇತ್ಯಾದಿ ಅಗತ್ಯ ವಿವರಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ.
ನಂತರ ಸರಿಯಾಗಿ ಸಹಿ ಮಾಡಿದ ಅರ್ಜಿ ಮತ್ತು ವೋಟರ್ ಐಡಿ ಕಳೆದುಹೋಗಿರುವ ಬಗ್ಗೆ ದೂರು ನೀಡಿದ್ದಕ್ಕೆ ಸಂಬಂಧಿಸಿದ ಎಫ್ಐಆರ್ನ ಪ್ರತಿ, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಲು ನಿಮ್ಮ ಹತ್ತಿರದ ಚುನಾವಣಾ ಕಚೇರಿಗೆ ಭೇಟಿ ನೀಡಿ. ಅರ್ಜಿಯನ್ನು ಸಲ್ಲಿಸಿದ ಬಳಿಕ ರೆಫರೆನ್ಸ್ ಐಡಿ ಸಂಖ್ಯೆ ನೀಡುತ್ತಾರೆ. ಅರ್ಜಿಯ ಸ್ಥಿತಿಗತಿ ತಿಳಿಯುವುದಕ್ಕೆ ಇದು ಅಗತ್ಯ. ಅರ್ಜಿ ಸ್ವೀಕೃತಗೊಂಡ ನಂತರ ಡುಪ್ಲಿಕೇಟ್ ವೋಟರ್ ಐಡಿ ಸ್ವೀಕರಿಸಲು ಚುನಾವಣಾ ಕಚೇರಿಯಿಂದ ನಿಮಗೆ ಸಂದೇಶ ಬರುತ್ತದೆ.
ಈ ರೀತಿಯಾಗಿ ವೋಟರ್ ಐಡಿ ಕಳೆದುಹೋದ ಸಂದರ್ಭದಲ್ಲಿ ಡುಪ್ಲಿಕೇಟ್ ವೋಟರ್ ಐಡಿಗೆ (Duplicate Voter ID) ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಮಯದಲ್ಲಿ ಫ್ಲ್ಯಾಶ್ ಲೈಟ್ ಹಾಕಿಸಲು ಕಾರಣವೇನು?