Himalayan Viagra: ಕಾಮ ಕೆರಳಿಸೋ ಹಿಮಾಲಯನ್ ವಯಾಗ್ರ ಅನ್ವೇಷಣೆಗೆ ತೆರಳಿದ 4 ಮಹಿಳೆಯರ ತಂಡ ನಾಪತ್ತೆ, ಅಷ್ಟಕ್ಕೂ ಅಲ್ಲಿ ನಡೆದದ್ದೇನು ?

Himalayan Viagra: Missing five members after they went to search the Himalayan viagra

Himalayan Viagra: ಇತ್ತೀಚೆಗೆ ಪಾಕಿಸ್ತಾನದಲ್ಲಿ ವಯಾಗ್ರ ಮಾತ್ರೆಯನ್ನು ನಿಷೇಧಿಸಲಾಗಿದ್ದು, ಹಲ್ಲಿ ಬಾಲದಲ್ಲಿರೋ ಲೈಂಗಿಕ ಸಾಮರ್ಥ್ಯ ಹೆಚ್ಚಿಸೋ ತೈಲಕ್ಕೆ ಭಾರೀ ಬೇಡಿ ಉಂಟಾಗಿ ಸಖತ್ ವೈರಲ್ ಆಗಿತ್ತು. ಆದರೆ ಇಲ್ಲೊಂದೆಡೆ ಇದೀಗ ಹಿಮಾಲಯನ್ ವಯಾಗ್ರ ಒಂದು ಸುದ್ಧಾಯಾಗ್ತಿದೆ. ಸುದ್ಧಿ ಮಾತ್ರ ಅಲ್ಲ, ಅದನ್ನರಸಿ ನೇಪಾಳಕ್ಕೆ ಹೋದ ಐವರು ನಾಪತ್ತೆಯಾದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಹಿಮಾಲಯನ್ ವಯಾಗ್ರ (Himalayan Viagra)ಹುಡುಕಲು ನೇಪಾಳಕ್ಕೆ ತೆರಳಿದ್ದ ಐವರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ನೇಪಾಳದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಹಿಮದೊಳಗೆ ಸಿಲುಕಿರಬಹುದು ಎನ್ನಲಾಗುತ್ತಿದೆ. ಕಾಮೋತ್ತೆಜಕ ಔಷಧಿ ಗಿಡಮೂಲಿಕೆಯಾದ ‘ಹಿಮಾಲಯನ್ ವಯಾಗ್ರ’ವನ್ನು ಹುಡುಕಲು ಹೋದ ಐವರಲ್ಲಿ ಒಬ್ಬ ಪುರುಷ ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ಅವರೆಲ್ಲ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು 8 ತಂಡಗಳ ಕಾರ್ಯಾಚರಣೆ ನಡೆದಿದೆ’ ಎಂದು ಡಾರ್ಕುಲಾ ಎಸ್‌ಪಿ ಪ್ರದೀಪ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಬ್ಯಾನಸ್ ಎಂಬ ಹಳ್ಳಿಯ ಪರ್ವತ ಪ್ರದೇಶದಲ್ಲಿ ಹಿಮ ಕುಸಿತವಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಹಿಮಾಲಯನ್ ವಯಾಗ್ರ ಹೆಕ್ಕಲು ಹೋಗಿದ್ದ ಐವರು ಹಿಮ ಕುಸಿತಕ್ಕೆ ಸಿಲುಕಿದ್ದಾರೆ ಎಂದು ಧಾಮಿ ತಿಳಿಸಿದ್ದಾರೆ.

ಅಂದಹಾಗೆ ಪ್ರಪಂಚದಾದ್ಯಂತ ಜನರು ತಿನ್ನುವ ವಿವಿಧ ರೀತಿಯ ಕೀಟಗಳಿದ್ದರೂ, ಹಿಮಾಲಯದಲ್ಲಿ ಕಂಡುಬರುವ ಈ ಹುಳುವು ಲಕ್ಷಗಳಲ್ಲಿ ಮಾರಾಟವಾಗುತ್ತದೆ. ಇಡೀ ಜಗತ್ತಿನ ಕಳ್ಳಸಾಗಾಣಿಕೆದಾರರ ಕಣ್ಣು ಈ ಕೀಟದ ಮೇಲೆಯೇ ಉಳಿಯುವಷ್ಟು ವಿಶೇಷವೇನು ಗೊತ್ತಾ. ಹಿಮಾಲಯದ ಬೆಟ್ಟಗಳಲ್ಲಿ ಕಂಡುಬರುವ ಈ ಕಂದು ವರ್ಮ್ ಒಂದು ರೀತಿಯ ಶಿಲೀಂಧ್ರವಾಗಿದೆ. ಟಿಬೆಟ್‌ನಲ್ಲಿ ಇದನ್ನು ಚಳಿಗಾಲದ ವರ್ಮ್‌ವುಡ್ ಎಂದು ಕರೆಯಲಾಗುತ್ತದೆ ಮತ್ತು ಉತ್ತರಾಖಂಡದಲ್ಲಿ ವರ್ಮ್‌ವುಡ್‌ನ ನಿಜವಾದ ಹೆಸರು ಯರ್ಸಗುಂಬಾ. ಇದು ಪ್ರಪಂಚದಾದ್ಯಂತ ಕಳ್ಳಸಾಗಣೆಯಾಗುತ್ತಿದೆ, ಅದಕ್ಕೆ ಕಾರಣ ಅದರಿಂದ ತಯಾರಿಸಿದ ವಿಶಿಷ್ಟ ಔಷಧ. ದೈಹಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸದಲ್ಲಿ ಇದನ್ನು ಬಳಸಲಾಗುತ್ತದೆ.

ಹಿಮಾಲಯನ್ ವಯಾಗ್ರವು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಸಿಗುವಂತ ಔಷಧಿ ಸಸ್ಯವಾಗಿದ್ದು, ಯರ್ಸ್‌ಗುಂಬಾ ಎಂಬ ಅಣಬೆ ಜಾತಿಯ ಪರಾವಲಂಬಿ ಸಸ್ಯ. ನೇಪಾಳದಲ್ಲಿ ಮೇ ತಿಂಗಳಲ್ಲಿ ಸ್ಥಳೀಯರು ಯರ್ಸ್‌ಗುಂಬಾ ಉತ್ಸವ ಎಂದು ಆಚರಿಸಿ ಈ ಸಸ್ಯವನ್ನು ಆಯಲು ಪರ್ವತ ಪ್ರದೇಶಗಳಲ್ಲಿ ಅಲೆಯುತ್ತಾರೆ. . ಇದನ್ನು ಸಂಪ್ರದಾಯಿಕ ಚೀನಿ ಔಷಧಿ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಇದಕ್ಕೆ ಹೆಚ್ಚು ಬೆಲೆಯಿದ್ದು, ಕಾಮೋತ್ತೆಜಕ ಮಾತ್ರೆಗಳಲ್ಲಿ ಹಾಗೂ ಹೃದಯ, ಮೂತ್ರಪಿಂಡ ಸಮಸ್ಯೆಗಳಲ್ಲಿ ಬಳಸುತ್ತಾರೆ.

ವಿಜ್ಞಾನಿಗಳ ಪ್ರಕಾರ, ಯರ್ಸಗುಂಬದಲ್ಲಿ ವಿಟಮಿನ್ ಬಿ-12, ಮೆಂಥಾಲ್, ಕಾರ್ಡಿಸೆಪಿಕ್ ಆಸಿಡ್, ಎರ್ಗೋಸ್ಟಾಲ್ ಜೊತೆಗೆ 25 ರಿಂದ 32 ಪ್ರತಿಶತದಷ್ಟು ಕಾರ್ಡೋಸ್ಪಿನ್ ಮತ್ತು ಡಪೋಕ್ಸಿನೋಪಿನ್ ಇದೆ. ಇದನ್ನು ಲೈಂಗಿಕ ವರ್ಧಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಯರ್ಸಗುಂಬುವನ್ನು ಚೀನಾದಲ್ಲಿ ಮತ್ತು ಚೀನಾ ಆಕ್ರಮಿತ ಟಿಬೆಟ್‌ನಲ್ಲಿ ನಿಷೇಧಿಸಲಾಗಿಲ್ಲ. ಇದನ್ನು ಅಲ್ಲಿನ ಸಾಮಾನ್ಯ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಲೈಂಗಿಕ ಕಾಯಿಲೆಗಳಿಗೆ ಔಷಧದ ಜೊತೆಗೆ ಸಂಧಿವಾತ, ಸಂಧಿವಾತ ಮತ್ತಿತರ ಔಷಧಗಳನ್ನು ಅಲ್ಲಿ ತಯಾರಿಸಲಾಗುತ್ತದೆ. ಜನರು ಅದರ ರಸವನ್ನು ಬಿಯರ್ ಮತ್ತು ಜ್ಯೂಸ್‌ನಲ್ಲಿ ಬೆರೆಸಿ ಕುಡಿಯುತ್ತಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈ ರೋಡ್​ ಟ್ರಿಪ್​ ಹೋಗೋದನ್ನು ಮಿಸ್​ ಮಾಡ್ಲೇಬೇಡಿ!

Leave A Reply

Your email address will not be published.