Government office work timings: ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲು: ಇನ್ಮುಂದೆ ಬೆಳಿಗ್ಗೆ 7.30 ಕ್ಕೇ ಸರ್ಕಾರಿ ಕಚೇರಿ ಸ್ಟಾರ್ಟ್ !

Government office work timings: punjab government switch to new timings

Government office work timings: ಸರಕಾರಿ ನೌಕರರಿಗೆ ಇದೊಂದು ಖುಷಿಯ ಸುದ್ದಿ ಹೇಳಬಹುದೋ ಅಥವಾ ಬೇಸರ ಪಡುವ ಸುದ್ದಿ ಎಂದು ಹೇಳಬಹುದೋ ಗೊತ್ತಿಲ್ಲ. ಏಕೆಂದರೆ ಸರಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ (Government office work timings) ಮಹತ್ವದ ಬದಲಾವಣೆಯಾಗಿದೆ. ಇನ್ನು ಮುಂದೆ ಸರಕಾರಿ ನೌಕರರು 9-5 ಗಂಟೆಯ ಬದಲಾಗಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಬೇಕು. ಆದರೆ ಇದು ಕರ್ನಾಟಕದ ಸರಕಾರಿ ಕಚೇರಿಗಳಿಗೆ ಅನ್ವಯಿಸುವುದಿಲ್ಲ. ಬದಲಾಗಿ ಇದು ಜಾರಿಗೆ ಬಂದಿರುವು ಪಂಜಾಬ್‌ನಲ್ಲಿ. ಅಲ್ಲಿನ ಸರಕಾರ ಈ ನಿಯಮ ತಂದಿದೆ. ಈ ಹೊಸ ವೇಳಾಪಟ್ಟಿಯಲ್ಲಿ ಭಗವಂತ್‌ ಮಾನ್‌ ಸರಕಾರವು ಅರ್ಧ ಗಂಟೆ ಊಟದ ಸಮಯದ ಕೂಡಾ ಇಲ್ಲ. ಹಾಗಾಗಿ ನೌಕರರು ಒಂದು ಗಂಟೆ ಕಡಿಮೆ ಕೆಲಸ ಮಾಡುತ್ತಾರೆ ಎಂದು ಅಲ್ಲಿನ ಸರಕಾರ ಹೇಳಿದೆ.

 

ಈ ನಿಯಮ ಬದಲಾವಣೆ ಮಾಡಲು ಕಾರಣ ಏನು?
ಪಂಜಾಬ್‌ ಸರಕಾರವು ವಿದ್ಯುತ್‌ ವೆಚ್ಚ ಹಾಗೂ ಉತ್ಪಾದಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ಹೊಸ ಕಚೇರಿ ಸಮಯನ್ನು ಘೋಷಿಸಿದೆ. ಈ ಹೊಸ ಕೆಲಸದ ಅವಧಿ ಜುಲೈ 15ರವರೆಗೆ ಇರಲಿದೆ ಹಾಗೂ ಇದರಿಂದಾಗಿ 40-42 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂಬ ಅಂದಾಜು ಅಧಿಕಾರಿಗಳದ್ದು.

ಚಂಡೀಗಢದ ಸಿವಿಲ್ ಸೆಕ್ರೆಟರಿಯೇಟ್‌ಗೆ ಬೆಳಿಗ್ಗೆ 7:28 ಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಮುಖ್ಯಮಂತ್ರಿ ಮುಖ್ಯಮಂತ್ರಿ ಭಗವಂತ್ ಮಾನ್ ಆಗಮಿಸಿದ್ದರು. ಹೊಸ ಕೆಲಸದ ಸಮಯವು ಸರ್ಕಾರಿ ಕಚೇರಿಗಳಲ್ಲಿ ಗರಿಷ್ಠ ಸೂರ್ಯನ ಬೆಳಕನ್ನು ಬಳಸಬಹುದಾಗಿದೆ. ಈ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅಥವಾ ಕಾರ್ಯಗತ ಮಾಡಿಕೊಳ್ಳುವ ಮೊದಲು ಇದರ ಬಗ್ಗೆ ನೌಕರರ ಜೊತೆ ಮತ್ತು ಜನರೊಂದಿಗೆ ಸಂವಾದ ನಡೆಸಿದ್ದೇವೆ ಎಂದು ಅಲ್ಲಿನ ಮುಖ್ಯಮಂತ್ರಿ ಭಗವಂತ್‌ ಮಾನ್‌ ಹೇಳಿದ್ದಾರೆ. ಇದರಲ್ಲಿ ವಿದ್ಯುತ್‌ ಉಳಿತಾಯ ಬಹಳಷ್ಟು ಮಟ್ಟಿಗೆ ಆಗಲಿದೆ, ಹಾಗೂ ಈ ಸಮಸ್ಯೆ ಆದಷ್ಟು ಕಡಿಮೆಯಾಗಲಿದೆ ಎಂದ ಅವರು ಹೇಳಿದ್ದಾರೆ. ವಿದ್ಯುತ್‌ ಸಮಸ್ಯೆ ಅತಿ ದೊಡ್ಡ ಸಮಸ್ಯೆಯಾಗಿದ್ದು ಇದನ್ನು ಹೋಗಲಾಡಿಸಬಹುದು ಎಂದು ಹೇಳಿದ್ದಾರೆ.

ಪಂಜಾಬ್‌ನ ಹಲವು ಸ್ಥಳಗಳಲ್ಲಿ ಬೆಳಿಗ್ಗೆ 7.30ರ ಮೊದಲು ಸರಕಾರಿ ನೌಕರರು, ಐಎಎಸ್‌, ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಸೂಪರಿಂಟೆಂಡೆಂಟ್‌ಗಳು, ಪ್ಯೂನ್‌ಗಳವೆರೆಗೆ ತಮ್ಮ ಕಚೇರಿಗಳಿಗೆ ಹೋಗುವುದು ಕಂಡು ಬಂದಿದೆ.

ಇದನ್ನೂ ಓದಿ:Curd Benefits: ಮೊಸರಿನಲ್ಲಿ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಿದರೆ, ಆರೋಗ್ಯ ಸಮಸ್ಯೆಯೇ ಬರೋದಿಲ್ಲ!

Leave A Reply

Your email address will not be published.