EPFO Extends Deadline: ಹೆಚ್ಚಿನ ಪಿಂಚಣಿ’ಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ!

epfo extends deadline for retired employees to apply for higher pension

EPFO Extends Deadline : ಸುಪ್ರೀಂ ಕೋರ್ಟ್ (Supreme court) 2022ರಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ ಇಪಿಎಫ್‌ಒ(EPFO) ತನ್ನ ಸದಸ್ಯರಿಗೆ ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಈ ಗಡುವನ್ನು ವಿಸ್ತರಿಸಲಾಗಿದೆ‌ (EPFO Extends Deadline).

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ನೌಕರರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಗಡುವನ್ನು ಜೂನ್ 26 ರವರೆಗೆ ವಿಸ್ತರಿಸಿದೆ.

ಈ ಯೋಜನೆಯಡಿ ಹೆಚ್ಚಿನ ಪಿಂಚಣಿ ಪಡೆಯಲು ಅರ್ಹತೆ ಇದ್ದು, ಅರ್ಜಿ ಸಲ್ಲಿಸದ ನೌಕರರು ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಇಪಿಎಫ್‌ಒ ತನ್ನ ವ್ಯಾಪ್ತಿಯಲ್ಲಿ ಬರುವ ಸಂಬಳ ಪಡೆಯುವ ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಜೂನ್ 26 ರವರೆಗೆ ವಿಸ್ತರಿಸಿದೆ.

ಪಿಂಚಣಿದಾರರು ಹಾಗೂ ಕಾರ್ಮಿಕರು ಹೆಚ್ಚಿನ ಪಿಂಚಣಿಗಾಗಿ ಆನ್ನೈನ್ ಅರ್ಜಿ ಸಲ್ಲಿಸಲು ತಾಂತ್ರಿಕ ನಿರ್ಬಂಧಗಳು ಮತ್ತು ಇಪಿಎಫ್‌ಒ ಖಾತೆಯ ಸರ್ವರ್ ಸಮಸ್ಯೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಪಿಂಚಣಿದಾರರು, ಕಾರ್ಮಿಕರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ಸಿಬಿಟಿ ಸದಸ್ಯರು ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸುವಂತೆ ಇಪಿಎಫ್‌ಒ ಆಯುಕ್ತರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇದೀಗ ಗಡುವನ್ನು ವಿಸ್ತರಿಸಲಾಗಿದೆ.

ಇದನ್ನೂ ಓದಿ: ಶುಂಠಿ ಟೀ ರುಚಿಯಾಗಿರುವುದರಿಂದ ಪದೇ ಪದೇ ಕುಡಿಯುತ್ತಿದ್ದೀರಾ? ಈ ರೋಗಗಳು ಬರ್ಬೋದು ಹುಷಾರ್

Leave A Reply

Your email address will not be published.