D V Sadananda Gowda: ಪುತ್ತೂರಿಗೆ ಡಿವಿ ಸದಾನಂದ ಗೌಡ ಬಂದದ್ದು ಯಾಕೆ ? ಬಿಜೆಪಿ ಸೋಲಿಸಲಾ, ಅಥ್ವಾ ಸಖ ಅಶೋಕ ರೈನ ಗೆಲ್ಲಿಸಲಾ ?: ಪುತ್ತಿಲರ ಶನಿ ಬಿಡಿಸಿದ ಕಥೆಯ ಹಿಂದಿದೆ ರೋಚಕ ಕಹಾನಿ !
D V Sadananda Gowda Visits Puttur
D V Sadananda Gowda: ಪುತ್ತೂರು ರಾಜಕೀಯಕ್ಕೆ ಹುಳುಕು ಹಲ್ಲಿನ ಹುಸಿ ನಗೆಯ ನಾಯಕನ ಎಂಟ್ರಿ ಆಗಿದೆ. ಪುತ್ತೂರಿನಲ್ಲಿ ನಿನ್ನೆ ಬಿಜೆಪಿ ಪರವಾಗಿ ಡಿ ವಿ ಸದಾನಂದ ಗೌಡ ಅವರು ‘ ಭರ್ಜರಿ ‘ ಪ್ರಚಾರ ಕೈಗೊಂಡಿದ್ದಾರೆ. ನಿಜಕ್ಕೂ ಡಿವಿ ಸದಾನಂದ ಗೌಡ (D V Sadananda Gowda) ಬಂದದ್ದು ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರನ್ನು ಗೆಲ್ಲಿಸಲಾ ಅಥವಾ ಸೋಲಿಸಲಾ ಎನ್ನುವ ಜಿಜ್ಞಾಸೆ ಪುತ್ತೂರು ತಾಲೂಕಿನಲ್ಲಿ ಅಷ್ಟೇ ಅಲ್ಲದೆ, ಇಡೀ ಜಿಲ್ಲೆಯಲ್ಲಿ ಹಬ್ಬಿದೆ. ಹೌದು ಡಿ ವಿ ಸದಾನಂದ ಗೌಡ ಪುತ್ತೂರಿಗೆ ಪ್ರಚಾರಕ್ಕೆ ಬಂದದ್ದು ಬಿಜೆಪಿಯನ್ನು ಶತಾಯಗತಾಯ ಸೋಲಿಸಲು ಎನ್ನುವುದನ್ನು ನಾವು ನಿಮಗೆ ಇವತ್ತು ಮನದಟ್ಟು ಮಾಡಲಿದ್ದೇವೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಕುಮಾರ್ ರೈ ಅವರನ್ನು ಹೇಗಾದರೂ ಗೆಲ್ಲಿಸಬೇಕು. ರೈಗಳ ಎದುರು ನಿಂತ
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರನ್ನು ಸೋಲಿಸಬೇಕಾದರೆ ಈಗ ಇರುವ ಸುಲಭ ಅಸ್ತ್ರ ಅರುಣ್ ಕುಮಾರ್ ಪುತ್ತಿಲ !!!
ಅರುಣ್ ಕುಮಾರ್ ಪುತ್ತಿಲ ಅವರ ಮತ್ತು ಅವರ ಅಭಿಮಾನಿಗಳನ್ನು ಹೇಗಾದರೂ ಕೆಣಕಬೇಕು. ಹಾಗೆ ಕೆಣಕಿ ಒಂದಷ್ಟು ಬಿಜೆಪಿಗೆ ಬರಬಹುದಾದ ವೋಟುಗಳನ್ನು ಬಿಜೆಪಿಗೆ ಬರದಂತೆ ಮಾಡಿ ಒಂದಷ್ಟು ಪುತ್ತಿಲ ಅವರ ಕಡೆ ಸೆಳೆಯಬೇಕು. ಆಗ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಗೆ ಲಾಭವಾಗುತ್ತದೆ ಎನ್ನುವುದು ಖತರ್ನಾಕ್ ಡಿವಿ ಸದಾನಂದ ಗೌಡ ಅವರ ಪ್ಲಾನ್. ಅದಕ್ಕಾಗಿ ಬರುವ ಮೊದಲೇ ಶನಿ ಕಥೆ ಹೆಣೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡೇ ಬಂದಿದ್ದಾರೆ.
ಅದೇ ಪ್ಲಾನಿನ ಭಾಗವಾಗಿಯೇ ನಿನ್ನೆಯ ಡಿವಿ ಸದಾನಂದ ಗೌಡ ಹೇಳಿದ ಅರುಣ್ ಪುತ್ತಿಲ ಅವರ ಶನಿ ಪೂಜೆಯ ಕಥೆ. ನಿನ್ನೆ ದಿನ ಡಿವಿ ಸದಾನಂದ ಗೌಡ ಅವರು ಅರುಣ್ ಕುಮಾರ್ ಪುತ್ತಿಲ ಮತ್ತು ತಂಡದ ಶನಿ ಬಿಡಿಸಿದ್ದರು ಎನ್ನುವ ಕಥೆ ಬಿಟ್ಟಿದ್ದಾರೆ. ಶನಿ ಬಿಡಿಸಿದ್ದಾರೆಯೋ ಇಲ್ಲವೋ ಗೊತ್ತಿಲ್ಲ, ಎಷ್ಟೋ ಜನರಿಗೆ ಸದಾನಂದ ಗೌಡ ಇವತ್ತಿಗೆ ಸ್ವತಃ ಅಳಿಸಿ ಹೋದ ಮತ್ತೆ ಯಾವತ್ತೂ ನೆನಪಿಸಿಕೊಳ್ಳಬಾರದೆಂದು ಅಂದುಕೊಂಡ ನೆನಪು. ಶನಿ ಕಥೆಯ ಸತ್ಯಾಸತ್ಯತೆ ಖುದ್ದು ಸದಾನಂದ ಗೌಡ ಅವರಿಗೂ ಬೇಕಿಲ್ಲ. ಹೇಗಾದರೂ ಮಾಡಿ ತಮ್ಮ ಗೆಳೆಯ, ಸಖ ಮತ್ತು ವ್ಯಾಪಾರಿ ಮಿತ್ರ ಅಶೋಕ್ ಕುಮಾರ್ ರೈ ಅವರನ್ನು ಗೆಲ್ಲಿಸುವುದು ಡಿ ವಿ ಸದಾನಂದ ಗೌಡ ಅವರ ಏಕಮೇವ ಉದ್ದೇಶ. ಆ ಪ್ಲಾನ್ ನ ಒಂದು ಪಾನ್ ಅರುಣ್ ಕುಮಾರ್ ಪುತ್ತಿಲ !
ಒಂದು ಕಾಲದಲ್ಲಿ ತನ್ನ ಹಲವು ಜಾಥಾಗಳ ಮೂಲಕ ಪುತ್ತೂರಿನ ಬಲಿಷ್ಠ ಕಾಂಗ್ರೆಸ್ ಅನ್ನು ಎದುರಿಸಿ ಕೆಡವಿ ಗೆದ್ದ ಯುವಕ ಡಿವಿ ಸದಾನಂದ ಗೌಡ. ಆವಾಗ ಪುತ್ತೂರಿನಲ್ಲಿ ದೊಡ್ಡಮಟ್ಟದ ರೌಡಿಸಂ ಇತ್ತು. ಯುವ ವಕೀಲ ಸುಳ್ಯದ ದೇವರಗುಂಡದ ಡಿ ವಿ ಸದಾನಂದ ಗೌಡ ತನ್ನ ಯುವ ಪಡೆಯ ಮೂಲಕ ಅವೆಲ್ಲವನ್ನು ಮೆಟ್ಟಿ ನಿಂತು ಎದುರಿಸಿದ್ದರು. ಮೊದಲ ಸಲ ಬಿಜೆಪಿಯಿಂದ ಆಗಿನ ಬಲಿಷ್ಠ ಜನಪ್ರಿಯ ನಾಯಕ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರನ್ನು ಎದುರಿಸಿದ್ದರು. ಆದರೆ ಆ ವಿಧಾನಸಭೆ ಚುನಾವಣೆಯಲ್ಲಿ ಸದಾನಂದ ಗೌಡ ಸೋಲು ಕಂಡಿದ್ದರು. ಮತ್ತೆ ಐದು ವರ್ಷಗಳ ನಂತರ ಮತ್ತದೇ ಕಾಂಗ್ರೆಸ್ ಬಿಜೆಪಿಯ ಕದನ ಶುರುವಾಗಿತ್ತು. ಈ ಸಲ ಕೇವಲ ನಾಲ್ಕುನೂರು ಚಿಲ್ಲರೆ ಮತಗಳ ಅಂತರದಲ್ಲಿ ಸದಾನಂದ ಗೌಡ ಅವರು ಬಿಜೆಪಿಯ ವಿಜಯ ಪತಾಕೆಯನ್ನು ಎತ್ತಿ ಹಿಡಿದಿದ್ದರು. ಆ ಸಲ ಡಿ ವಿ ಸದಾನಂದ ಗೌಡರಿಗೆ ಹಿರೆಬಂಡಾಡಿ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಬಂದಿದ್ದವು. ಅದಕ್ಕೆ ಕಾರಣ ಆಗತಾನೆ ರಾಜಕೀಯವಾಗಿ ಚುರುಕು ಪಡೆದುಕೊಂಡಿದ್ದ ಸಂಜೀವ ಮಠಂದೂರು !
ಆನಂತರ ಸದಾನಂದ ಗೌಡರಿಗೆ ರಾಜಯೋಗ. ಆತ ಇರೋ ಬರೋ ಚುನಾವಣೆಯೆಲ್ಲ ಗೆಲ್ಲುತ್ತಾ ಬಂದರು. ತಾಲೂಕಿನಿಂದ ಜಿಲ್ಲೆಗೆ ಜಿಲ್ಲೆಯಿಂದ ರಾಜ್ಯಕ್ಕೆ ಎಂಟ್ರಿ ಆಗಿ ಯಡಿಯೂರಪ್ಪನವರ ಭಿಕ್ಷೆಯಿಂದ ಮುಖ್ಯಮಂತ್ರಿಯೂ ಆದರು. ಯಾವಾಗ ಮುಖ್ಯಮಂತ್ರಿ ಪದವಿ ಸಿಕ್ಕಿತೋ, ಆ ಕ್ಷಣಕ್ಕೆ ಈ ಹುಸಿ ನಗೆಯ ಗೌಡನ ನಿಯತ್ತು ಬದಲಾಗಿತ್ತು. ಮುಖ್ಯಮಂತ್ರಿ ಪದವಿಯ ಭಿಕ್ಷೆ ನೀಡಿದ್ದ ಗುರು ಯಡಿಯೂರಪ್ಪನವರಿಗೆ ಸದಾನಂದ ಗೌಡ ತಿರುಗಿ ನಿಂತಿದ್ದ. ಮಿತ್ರ ದ್ರೋಹ ಮತ್ತು ಗುರು ದ್ರೋಹ ಸದಾನಂದ ಗೌಡನಿಗೆ ಹೊಸತಲ್ಲ ಎನ್ನುವುದನ್ನು ನಾವಿವತ್ತು ಇಲ್ಲಿ ವಿವರಿಸಲಿದ್ದೇವೆ. ಇದೀಗ ಅಂತದ್ದೇ ಮಹಾ ದ್ರೋಹ ಒಂದನ್ನು ಪುತ್ತೂರಿನಲ್ಲಿ ಮಾಡಲು ಸದಾನಂದ ಗೌಡ ಅವರು ಬಂದಿದ್ದಾರೆ ಅದು- ಪಕ್ಷ ದ್ರೋಹ !
ಇದೀಗ ಇದೇ ಗೌಡರು ಮಿತ್ರ ದ್ರೋಹದ ಜೊತೆಗೆ ಪಕ್ಷ ದ್ರೋಹಕ್ಕೆ ಹೊರಟಿದ್ದಾರೆ. ಇವತ್ತು ಪುತ್ತೂರಿನ ಸಂಜೀವ ಅವರಿಗೆ ಟಿಕೆಟ್ ಇವತ್ತು ಪುತ್ತೂರಿನ ಸಂಜೀವ ಮಠಂದೂರು ಅವರಿಗೆ ಟಿಕೆಟ್ ತಪ್ಪಿಸಲು ಇರುವ ಬಹುದೊಡ್ಡ ಕಾರಣ ಡಿವಿ ಸದಾನಂದ ಗೌಡ. ಡಿ ವಿ ಸದಾನಂದ ಗೌಡ ಮತ್ತು ಪುತ್ತೂರಿನ ಕಾಂಗ್ರೆಸ್ಸಿನ ಹಾಲಿ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ರಹಸ್ಯ ಕಂಠಸ್ಯ ಅವರಿಬ್ಬರೂ ಜೀವದ ಗೆಳೆಯರು. ಅಷ್ಟೇ ಅಲ್ಲ, ಬಹುದೊಡ್ಡ ಬ್ಯುಸಿನೆಸ್ ಪಾರ್ಟ್ನರ್. ಹೇಗಾದರೂ ಮಾಡಿ ಅಶೋಕ್ ಕುಮಾರ್ ಅವರನ್ನು ಪುತ್ತೂರಿನಲ್ಲಿ ಗೆಲ್ಲಿಸಿ ಕೊಳ್ಳಬೇಕು ಎನ್ನುವುದು ಆಶಯ ಅದಕ್ಕಾಗಿ ಬಿಜೆಪಿಯಿಂದ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಆಗ ತಮಗಿರುವ ಪ್ರಭಾವ ಬಳಸಿ ಡಿಕೆ ಶಿವಕುಮಾರ್ ಮೇಲೆ ಒತ್ತಡ ಹೇರಿ ‘ ನಾನೂ ಗೌಡ, ನೀನೂ ಗೌಡ, ಆಡಿಯೇ ಬಿಡೋಣ ಒಂದಾಟ ಲೂಡ ‘ ಎಂದು ಡಿಕೆಶಿ ಕಿವಿಯಲ್ಲಿ ಹೇಳಿದ್ದರು ಡಿ ವಿ ಸದಾನಂದ ಗೌಡರು. ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದರೆ ನಿಮಗೇ ತಾನೇ ಲಾಭ ಎಂದಿದ್ದಾರೆ ಗೌಡರು. ಡಿಕೆಶಿಗೆ ಅದರಿಂದ ಕಳೆದುಕೊಳ್ಳುವಂತದ್ದು ಏನಿದೆ, ಖುಷಿಯಾಗಿಯೇ ಅದಕ್ಕೆ ಒಪ್ಪಿಕೊಂಡಿದ್ದಾರೆ ಡಿಕೆಶಿ. ಹಾಗೆ
ಅಶೋಕ್ ಕುಮಾರ್ ಅವರಿಗೆ ಪುತ್ತೂರಿನ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಡಿವಿಎಸ್ ಸಫಲರಾದರು.
ಕೇವಲ ಪುತ್ತೂರಿನಲ್ಲಿ ಅಶೋಕ್ ಕುಮಾರ್ ಅವರಿಗೆ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಸಿಕ್ಕಿದರೆ ಸಾಕಾಗಲ್ಲ, ಹೇಗಾದರೂ ಮಾಡಿ ಈಗಿರುವ ಬಲಿಷ್ಠ ಕೆಲಸಗಾರ ಅಭ್ಯರ್ಥಿ ಸಂಜೀವ ಮಠ0ದೂರ್ ಅವರಿಗೆ ಟಿಕೆಟ್ ಹೇಗಾದರೂ ಮಾಡಿ ತಪ್ಪಿಸಬೇಕು ಎನ್ನುವುದು ಡಿವಿ ಸದಾನಂದ ಗೌಡರ ಪ್ಲಾನ್. ಅದಕ್ಕಾಗಿ ಹೊಂಚು ಹಾಕಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಂಡಾಯವಾಗಿ ನಿಲ್ಲಿಸುವ ಕಸರತ್ತು ನಡೆಯಿತು. ಅಷ್ಟೇ ಅಲ್ಲ, ಆರ್ ಎಸ್ ಎಸ್ ಕೆಲ ಯುವ ನಾಯಕರ ಹಿಡಿದುಕೊಂಡು ಸಂಜೀವ ಮಠಂದೂರು ಅವರಿಗೆ ಅವರ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಹುನ್ನಾರ ನಡೆಸಲಾಯಿತು. ಈ ತನಕ ಹೆಣೆದ ಎಲ್ಲಾ ಪ್ಲಾನ್ ಸಕ್ಸಸ್ ಆಗಿದೆ. ತಮ್ಮ ಚಿಕ್ಕಪ್ಪನ ಮಗಳನ್ನೆ ಮದುವೆ ಮಾಡಿ ಕೊಟ್ಟ ಬಾಮೈದನಿಗೆ ಟಿಕೆಟ್ ತಪ್ಪಿಸಲು ಮತ್ತು ಜೀವನ್ಮಿತ್ರ ಅಶೋಕ್ ಕುಮಾರ್ ರೈಗೆ ಕಾಂಗ್ರೆಸ್ ನಿಂದ ಟಿಕೆಟ್ ದೊರಕಿಸಿಕೊಡಲು ಗೌಡರು ಶಕ್ತರಾಗಿದ್ದಾರೆ. ಈಗ ಉಳಿದಿರುವುದು ರೈಗಳನ್ನು ಗೆಲ್ಲಿಸುವುದು. ಅದರ ಭಾಗವಾಗಿಯೇ ಪುತ್ತೂರಿಗೆ by ಭೇಟಿ, ಶನಿ ಪೂಜೆಯ ಕಥೆ ಶುರುವಾಗಿದೆ. ರಾತ್ರಿ ಹೊತ್ತಲ್ಲಿ ಈ ಗೆಳೆಯರಿಬ್ಬರು ಒಳ್ಳೆ ಹುಡುಗ – ಹುಡುಗಿಯ ಥರ ಪುಂಡಿ ಬೇಯಿಸುವ ರೀತಿಯಲ್ಲಿ ಫೋನಿನಲ್ಲಿ ಮಾತಾಡಿ ನಗುತ್ತಾರೆ. ಮತದಾರ ಪೆದ್ದು ಬಿದ್ದರೆ ನಗೆಪಾಟಲಿಗೆ ಗುರಿಯಾಗುತ್ತಾನೆ. ಬಿಜೆಪಿ ಗೆಲ್ಲಬೇಕು ಅಂತಿದ್ದರೆ ಬಿಜೆಪಿಗೆ ಮತ ನೀಡಿ, ಕಾಂಗ್ರೆಸ್ ಗೆಲ್ಲಬೇಕು ಅಂತಿದ್ದರೆ ಕಾಂಗ್ರೆಸ್ ಗೆ ಒತ್ತಿ. ಮೂರನೇಯವರು ಪಡೆಯುವ ಓಟಿನ ಲಾಭ ಕಾಂಗ್ರೆಸ್ ಗೆ ಆಗಲಿದೆ ಎನ್ನುವ ಯೋಚನೆ ಇಟ್ಟುಕೊಂಡು ಬೆರಳಿಗೆ ಇಂಕು ಬಳಿದುಕೊಂಡು ಹಕ್ಕು ಚಲಾಯಿಸಿ ಪುತ್ತೂರಿನ ಬುದ್ದಿವಂತ ಮತದಾರರೇ !