Mudra Loan: ಪಿಎಂ ಮುದ್ರಾ ಸ್ಕೀಮ್ ನಲ್ಲಿ 10 ಲಕ್ಷ ರೂವರೆಗೂ ಸಾಲ!!!

Mudra Loan: ಜನರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ತಂದಿದೆ . ಅಲ್ಲದೆ ವಿವಿಧ ವಲಯಗಳಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದರಲ್ಲಿ ಮುದ್ರಾ ಯೋಜನೆ ಕೂಡ ಒಂದು. ಹೌದು, ಪ್ರಧಾನ ಮಂತ್ರಿ ಮುದ್ರಾ ಯೋಜನೆ (mudra loan) ಏಪ್ರಿಲ್ 8, 2015 ರಂದು ಗೌರವಾನ್ವಿತ ಪ್ರಧಾನ ಮಂತ್ರಿಗಳಿಂದ ಸಾಲವನ್ನು ಒದಗಿಸುವ ಯೋಜನೆಯಾಗಿದೆ.

 

ತನ್ನದೇ ಸ್ವಂತ ಉದ್ಯಮ ಆರಂಭಿಸಲು ಬಯಸುವ ಯಾವುದೇ ಭಾರತೀಯ ಪ್ರಜೆ ಪಿಎಂಎಂವೈ ಯೋಜನೆಯಡಿ ಸಾಲ ಪಡೆಯಬಹುದು. ನೀವು ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಮತ್ತು ಅದಕ್ಕಾಗಿ ಹಣದ ಅಗತ್ಯವಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ (PMMY Loan) ಪಡೆಯಬಹುದು.

ಮುಖ್ಯವಾಗಿ ಕಾರ್ಪೊರೇಟ್ ಮತ್ತು ಕೃಷಿಯೇತರ ವಲಯದ ಉದ್ದಿಮೆಗಳಿಗೆ (Non-Corporate and Non-Agriculture Sector Entities) ಮುದ್ರಾ ಯೋಜನೆ ಅಡಿ ಸಾಲ ನೀಡಲಾಗುತ್ತದೆ. ಇದರಲ್ಲಿ ಸಾಲದ ಪ್ರಮಾಣ 50,000ದಿಂದ ಆರಂಭವಾಗಿ 10,00,000 (10 ಲಕ್ಷ) ರೂ ವರೆಗೂ ಇರುತ್ತದೆ.

ಈಗಾಗಲೇ ಪಿಎಂ ಮುದ್ರಾ ಯೋಜನೆ (PMMY- Pradhan Mantri Mudra Yojana) ಮೂಲಕ ಲಕ್ಷಾಂತರ ಕೋಟಿಯಷ್ಟು ಸಾಲಗಳನ್ನು ಲಕ್ಷಾಂತರ ಮಂದಿಗೆ ವಿತರಿಸಿದೆ. ಈ ಮುದ್ರಾ ಸ್ಕೀಮ್​ಗೆ ಯಾರು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ, ದಾಖಲೆಗಳೇನು ಎಂಬ ವಿವರ ಇಲ್ಲಿ ತಿಳಿಸಲಾಗಿದೆ.

ಮುದ್ರಾ ಯೋಜನೆಯಲ್ಲಿ ಪಡೆಯುವ ಸಾಲ ಉದ್ದಿಮೆಗಳ ಬಲವರ್ಧನೆಗೆ ಅಥವಾ ಹೊಸ ಉದ್ದಿಮೆ ಸ್ಥಾಪನೆಗೆ ಮಾತ್ರ ಬಳಸಬೇಕು. ವೈಯಕ್ತಿಕ ಉದ್ದೇಶಕ್ಕೆ ಮುದ್ರಾ ಸಾಲ ಪಡೆಯಲು ಸಾಧ್ಯವಿಲ್ಲ. ನಿಮ್ಮ ಉದ್ದಿಮೆಯ ಪ್ರಾಜೆಕ್ಟ್ ರಿಪೋರ್ಟ್ ತೋರಿಸಿದರೆ ಮಾತ್ರ ಮುದ್ರಾ ಸಾಲ ಸಿಗುತ್ತದೆ.

ಮುದ್ರಾ ಸ್ಕೀಮ್​ನಲ್ಲಿ 3 ರೀತಿಯ ಸಾಲಗಳಿರುತ್ತವೆ.
ಶಿಶು ಸಾಲ: ಶಿಶು ಸಾಲ ಯೋಜನೆಯ ಅಡಿ 50,000 ರೂ. ಸಾಲ ನೀಡಲಾಗುತ್ತದೆ.
ಕಿಶೋರ್ ಸಾಲ: ಕಿಶೋರ್ ಸಾಲದ ಯೋಜನೆಯ ಅಡಿ 50,000 ರಿಂದ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ತರುಣ್ ಸಾಲ: ತರುಣ್ ಸಾಲ ಯೋಜನೆಯಡಿ 5 ಲಕ್ಷದಿಂದ 10 ಲಕ್ಷ ವರೆಗಿನ ಸಾಲವನ್ನು ನೀಡಲಾಗುತ್ತದೆ.

ಬ್ಯಾಂಕಿಗೆ ನೇರವಾಗಿ ಹೋಗಿ ಮುದ್ರಾ ಲೋನ್ ಪಡೆಯುವ ವಿಧಾನ:
ಮೊದಲು ನಿಮ್ಮ ಬ್ಯುಸಿನೆಸ್ ಪ್ಲಾನ್​ನ ಎಲ್ಲಾ ದಾಖಲೆಯನ್ನು ಸಿದ್ಧಪಡಿಸಿಕೊಂಡಿರಬೇಕು. ನಂತರ ಪಿಎಂಎಂವೈಗೆ ಜೋಡಿತವಾಗಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಕಚೇರಿಗೆ ಹೋಗಿ, ಮುದ್ರಾ ಸಾಲಕ್ಕೆ ಸಿಗುವ ಅರ್ಜಿಯನ್ನು ಭರ್ತಿ ಮಾಡಬೇಕು. ಇತರ ದಾಖಲೆ ಹಾಗೂ ಫೋಟೋಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ನಿಮ್ಮ ಅರ್ಜಿ ವೆರಿಫೈ ಆದ ಬಳಿಕ ಸಾಲದ ಮೊತ್ತವು ಬ್ಯಾಂಕ್ ಖಾತೆಗೆ ತಲುಪುತ್ತದೆ.

ಮುದ್ರಾ ಸಾಲ ಪಡೆಯಲು ಅರ್ಜಿ ಜೊತೆಗೆ ಇತರ ಕೆಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇವುಗಳು ಈ ಕೆಳಕಂಡಂತಿವೆ:

ಪಾಸ್​ಪೋರ್ಟ್ ಗಾತ್ರದ ಫೋಟೋ
ಪಾಸ್​ಪೋರ್ಟ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಯುಟಿಲಿಟಿ ಬಿಲ್ (ಎಲೆಕ್ಟ್ರಿಸಿಟಿ ಅಥವಾ ವಾಟರ್ ಬಿಲ್), ಜನರಲ್ ಕೆಟಗರಿ ಅಲ್ಲವಾಗಿದ್ದರೆ ಜಾತಿ ಪ್ರಮಾಣಪತ್ರ ಬೇಕು, ನಿಮ್ಮ ವ್ಯವಹಾರ ಆದಾಯದ ಪ್ರಮಾಣಪತ್ರ, ವ್ಯವಹಾರ ಸ್ಥಳದ ವಿಳಾಸಕ್ಕೆ ಪ್ರೂಫ್, ನಿಮ್ಮ ವ್ಯವಹಾರ ಅಸ್ತಿತ್ವದ ಬಗ್ಗೆ ಪ್ರೂಫ್, 12 ತಿಂಗಳಿಗೂ ಹೆಚ್ಚು ಅವಧಿಯ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಐಟಿ ಪಾವತಿಸುವವರಾಗಿದ್ದರೆ 2 ವರ್ಷಗಳ ಐಟಿಆರ್, ಇದರ ಜೊತೆಗೆ ಬ್ಯಾಂಕ್​ನವರು ಬೇರೆ ಯಾವುದಾದರೂ ದಾಖಲೆ ಕೇಳಬಹುದಾಗಿದೆ .

ಈ ಮೇಲಿನ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅಧಿಕಾರಿಗಳು ಅರ್ಜಿ ಪರಿಶೀಲನೆ ನಡೆಸುತ್ತಾರೆ. ಅಗತ್ಯಬಿದ್ದರೆ ನಿಮ್ಮ ಉದ್ದಿಮೆಯ ಸ್ಥಳಕ್ಕೆ ಹೋಗಿ ಪರೀಕ್ಷಿಸಬಹುದು. ಸರಿಯಾದ ಉದ್ದೇಶಕ್ಕೆ ಸಾಲ ಪಡೆಯಲಾಗುತ್ತಿರುವುದು ಎಂದು ಖಚಿತವಾದ ಬಳಿಕ ನಿಮಗೆ ಲೋನ್ ಮಾನ್ಯ ಆಗುತ್ತದೆ.

ಇನ್ನು ಆನ್​ಲೈನ್​ನಲ್ಲಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ :
ಮುದ್ರಾ ಯೋಜನೆ ಅಡಿಯಲ್ಲಿ ಸರ್ಕಾರ ನೇರವಾಗಿ ಸಾಲ ವಿತರಿಸುವುದಿಲ್ಲ. ಬದಲಿಗೆ ಮುದ್ರಾ ಯೋಜನೆಗೆ ಸರ್ಕಾರ ಬಹುತೇಕ ಕಮರ್ಷಿಯಲ್ ಬ್ಯಾಂಕು, ಸಹಕಾರಿ ಬ್ಯಾಂಕು, ಸ್ಮಾಲ್ ಫೈನಾನ್ಸ್ ಬ್ಯಾಂಕು ಮತ್ತು ಎನ್​ಬಿಎಫ್​ಸಿ ಸಂಸ್ಥೆಗಳನ್ನು ನಿಯೋಜಿಸಿದೆ. ಈ ಹಣಕಾಸು ಸಂಸ್ಥೆಗಳ ಅಧಿಕೃತ ವೆಬ್​ಸೈಟ್​ಗೆ ಹೋದರೆ ಪಿಎಂಎಂವೈ ಮುದ್ರಾ ಸಾಲಕ್ಕೆ ಅರ್ಜಿ ಪಡೆಯಬಹುದು.

ಅರ್ಜಿಯನ್ನು ಡೌನ್​ಲೋಡ್ ಮಾಡಿ ಅಗತ್ಯ ವಿವರಗಳೆಲ್ಲವನ್ನೂ ತುಂಬಿ ಸಲ್ಲಿಸಬೇಕು. ಅದರಲ್ಲಿ ಕೇಳಲಾಗುವ ದಾಖಲೆಗಳನ್ನು ಲಗತ್ತಿಸಿರಬೇಕು. ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ಬಳಿಕ ಸೂಕ್ತವೆನಿಸಿದರೆ ಮಾನ್ಯವಾದ ಬಳಿಕ ಲೋನ್ ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ವರ್ಗವಾಗುತ್ತದೆ. ಈ ರೀತಿಯಾಗಿ ಮುದ್ರಾ ಲೋನ್ ಅರ್ಜಿ ಸಲ್ಲಿಸಿ ಅದರ ಯೋಜನಾ ಸೌಲಭ್ಯ ಪಡೆಯಬಹುದಾಗಿದೆ.

 

 

ಇದನ್ನೂ ಓದಿ: ಕಲ್ಲಂಗಡಿ ರುಚಿ ಹೆಚ್ಚಿಸಲು ರಾಸಾಯನಿಕ ಬಳಸಲಾಗುತ್ತದೆಯೇ? ಹೀಗೆ ಕಂಡು ಹಿಡಿಯಿರಿ!!!

Leave A Reply

Your email address will not be published.