Karnataka Election: ನರೇಂದ್ರ ಮೋದಿ ಅಖಾಡಕ್ಕೆ ಎಂಟ್ರಿ ಆಗುತ್ತಲೇ ಪವಾಡ, ಬದಲಾದ ಎಲ್ಲಾ ಲೆಕ್ಕಾಚಾರ ?!
Karnataka Election: ಮೇ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಚಾನೆಲ್ ಗಳು.ಮತ್ತು ಸ್ವತಂತ್ರ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದವು. ಆ ಎಲ್ಲಾ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದೇ ಹೇಳಲಾಗುತಿತ್ತು. ಆದರೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಎಂಟ್ರಿಕೊಟ್ಟು ಪ್ರಚಾರ ಶುರು ಮಾಡಿದ ಮೂರು ದಿನಕ್ಕೆ ವಸ್ತು ದೀಪ ಬದಲಾಗಿದೆ ಎನ್ನುವ ಮಹತ್ವದ ಮಾಹಿತಿ ಲಭ್ಯವಾಗುತ್ತಿದೆ.
ಆದರೆ, ಅವರೊಬ್ಬರು ಎದುರು ಬಂದು ನಿಂತರಲ್ಲ, ಒಟ್ಟಾರೆ ಚುನಾವಣಾ ಕಣದ ಚಿತ್ರಣವೇ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಎಂಬ ಬಿರುಗಾಳಿ ಪ್ರಚಾರದ ಅಖಾಡಕ್ಕೆ ಅಪ್ಪಳಿಸುತ್ತಿದ್ದಂತೆಯೇ ಈ ಸಮೀಕ್ಷೆಗಳೆಲ್ಲಾ ಬದಲಾಗಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ನ್ಯೂಸ್ 18 ಕನ್ನಡ ಮತ್ತು ಕನ್ವರ್ಜೆಂಟ್ ಸಂಸ್ಥೆಯಿಂದ ನಡೆದ ಚುನಾವಣಾ ಪೂರ್ವ ಸಮೀಕ್ಷೆ ಮಾಹಿತಿಯನ್ನು ಈಗ ಬಿಜೆಪಿ ಹಂಚಿಕೊಂಡಿದೆ. ಈ ಸ್ವಾಯತ್ತಸಂಸ್ಥೆಗಳು ಇತ್ತೀಚಿಗೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ ಒಟ್ಟು 105, ಕಾಂಗ್ರೆಸ್ 87 ಮತ್ತು ಜೆಡಿಎಸ್ 32 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಅಂಕಿಅಂಶಗಳನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಟಿಕೆಟ್ ಹಂಚಿಕೆ, ಪ್ರಧಾನಿ ಮೋದಿ ಪ್ರಚಾರ ಆರಂಭಿಸಿದ ನಂತರ ನಡೆದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದನ್ನು ತೋರಿಸಲಾಗಿದೆ. ಬಿಜೆಪಿ ಬಹುಮತ ಪಡೆಯಲು ಇನ್ನೂ 10 ಸ್ಥಾನಗಳ ಅಗತ್ಯವಿದೆ. ಒಟ್ಟಾರೆ ಪ್ರಚಾರ ಮುಗಿಯುವುದರೊಳಗೆ ತಾವು ಅಷ್ಟು ಸ್ಥಾನಗಳನ್ನು ಪಡೆಯುವುದಾಗಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಜೀ ನ್ಯೂಸ್ ಸಮೀಕ್ಷೆಯಲ್ಲೂ ಬಿಜೆಪಿ 103-115, ಕಾಂಗ್ರೆಸ್ 79-91, ಜೆಡಿಎಸ್ 26-36 ಇತರರು 1-3 ಕ್ಷೇತ್ರ ಪಡೆಯುವುದಾಗಿ ಹೇಳಲಾಗಿದೆ. ಈ ಅಂಕೆ ಸಂಖ್ಯೆಗಳನ್ನು ನೋಡಿದಾಗ ಕಾಂಗ್ರೆಸ್ನ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುವ ಹಾಗೆ ಕಾಣಿಸುತ್ತಿವೆ. ಇನ್ನೂ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಸಮಯವಿದೆ. ಮತದಾರ ಪ್ರಭುವಿನ ಬಳಿ ತಮ್ಮ ಸಾಧನೆಗಳನ್ನು ಮತ್ತು ಯೋಜನೆಗಳನ್ನು ತೆಗೆದುಕೊಂಡು ಹೋಗಿ ಮತದಾರ ಪ್ರಭುವಿನ ಮನ ಗೆಲ್ಲಬೇಕಿದೆ.
The first survey, after ticket distribution and Prime Minister’s campaign kicking off, done by News18 Kannada and Convergent, shows the BJP in lead with 105 seats. From here on the BJP needs another 10 for a full majority and we have a full week to go before the campaign stops… https://t.co/N4D4WUHlhg
— Amit Malviya (@amitmalviya) May 1, 2023
ಲಿಂಗಾಯತರು ಬಿಜೆಪಿಯತ್ತ ಒಲವು
ಲಿಂಗಾಯತರು ಶೇಕಡಾ 66 ರಷ್ಟು ಬಿಜೆಪಿ ಪರ ಒಲವು ತೋರಿದ್ದರೆ, 16 ರಷ್ಟು ಕಾಂಗ್ರೆಸ್, 8 ರಷ್ಟು ಜೆಡಿಎಸ್‌ಗೆ ಮತ ನೀಡುವ ಉದ್ದೇಶ ಇದ್ದಾರೆ. ಶೇಕಡಾ 52 ರಷ್ಟು ಒಕ್ಕಲಿಗರು ಜೆಡಿಎಸ್‌ಗೆ ಮತ ನೀಡಲಿದ್ದಾರೆ, ಶೇಕಡಾ 28 ರಷ್ಟು ಕಾಂಗ್ರೆಸ್, ಶೇಕಡಾ 4 ರಷ್ಟು ಇತರೆಯವರಿಗೆ ಮತ ಚಲಾಯಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಮೋದಿ ಈ ಬಾರಿಯೂ ಗೇಮ್ ಚೇಂಜರ್
ಶೇಕಡಾ 44 ರಷ್ಟು ಮಂದಿ ಮೋದಿ ಅವರ ಪ್ರಚಾರದಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ತಮ್ಮಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಶೇ.34 ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಬಹುದು ಎಂದಿದ್ದು, ಇನ್ನಿ ಶೇ.22 ರಷ್ಟು ಜನ ಪ್ರಭಾವ ಬೀರಲ್ಲ ಎಂದಿದ್ದಾರೆ.
ಇದನ್ನೂ ಓದಿ:Afzal Ansari: ರಾಹುಲ್ ಗಾಂಧಿ ಬೆನ್ನಲ್ಲೇ ಲೋಕಸಭೆಯಿಂದ ಮತ್ತೊಬ್ಬ ಸಂಸದ ಅನರ್ಹ! ಯಾರದು..? ಕಾರಣವೇನು..?