Lokayukta Raid: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ಮನೆಗೆ ಐಟಿ ದಾಳಿ : ಗಿಡದಲ್ಲಿತ್ತು ಒಂದು ಕೋಟಿ ರೂ.

Lokayukta Raid: ವಿಧಾನಸಭಾ ಚುನಾವಣೆಯ (Karnataka election) ಹಿನ್ನೆಲೆ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿದ್ದಾರೆ. ಈ ಮಧ್ಯೆ ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ಅಭ್ಯರ್ಥಿಗಳ ಮನೆಗೆ ದಾಳಿ (Lokayukta Raid) ನಡೆಸಿ ಕಂತೆ ಕಂತೆ ನೋಟು ವಶಪಡಿಸಿಕೊಳ್ಳುತ್ತಿದ್ದಾರೆ. ಇದೀಗ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರನ ಮನೆಗೆ ಐಟಿ ದಾಳಿ ನಡೆಸಿದೆ. ಅಶೋಕ್ ಕುಮಾರ್ ರೈ ಅವರ ಸಹೋದರ ಮನೆ ಮುಂದಿನ ಗಿಡದಲ್ಲಿ ಕೋಟಿ ದುಡ್ಡು ಬೆಳೆದಿದ್ದಾರೆ !!

 

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ (Ashok Kumar Rai) ಅವರ ಸಹೋದರ ಕೆ.ಸುಬ್ರಹ್ಮಣ್ಯ ರೈ (k.Subramanya Rai) ಅವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಗಿಡದಲ್ಲಿ ಒಂದು ಕೋಟಿ ರೂ. ಪತ್ತೆಯಾಗಿದೆ.

ಮೈಸೂರಿನಲ್ಲಿನ (mysore) ಕೆ.ಸುಬ್ರಹ್ಮಣ್ಯ ರೈ ಮನೆಗೆ ಐಟಿ ದಾಳಿ ನಡೆಸಿದ್ದು, ಈ ವೇಳೆ ಅವರ ಮನೆಯ ಅಂಗಳದಲ್ಲಿದ್ದ ಗಿಡದಲ್ಲಿ ಒಂದು ಕೋಟಿ ರೂ. ಪತ್ತೆಯಾಗಿದ್ದು, ನೋಟಿನ ಕಂತೆಯನ್ನು ಗಿಡದಲ್ಲಿ ನೇತು ಹಾಕಲಾಗಿತ್ತು ಎನ್ನಲಾಗಿದೆ. ಸದ್ಯ ಭಾರೀ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ಐಟಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ದೊರೆತಿದ್ದು, ಅದರ ಅನುಸಾರ ಕೆ.ಸುಬ್ರಹ್ಮಣ್ಯ ರೈ ಅವರ ಮನೆಗೆ ದಾಳಿ ನಡೆಸಿದ್ದಾರೆ. ಹಾಗೇ ಮನೆಯ ಅಂಗಳದಲ್ಲಿ ಸಣ್ಣ ಮರದಲ್ಲಿದ್ದ ಕೋಟಿ, ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ತನ್ನ ಸಹೋದರ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧೆ ಮಾಡುತ್ತಿದ್ದು, ಚುನಾವಣಾ ನಿಟ್ಟಿನಲ್ಲಿ ಅಕ್ರಮ ಹಣ ಸಂಗ್ರಹ ಮಾಡಲಾಗಿದೆಯಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ ಅಶೋಕ್ ಕುಮಾರ್ ರೈ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಕಂಡು ಬರದ ಕಾರಣ ಕಾಂಗ್ರೆಸ್ ಸೇರಿದ್ದರು. ಆನಂತರ ಹೈಕಮಾಂಡ್ ಒಲಿಸಿಕೊಂಡು ಕಾಂಗ್ರೆಸ್ ನಿಂದ ಬಿ ಫಾರಂ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ದೊಡ್ಡ ಉದ್ಯಮಿಯಾದ ಅಶೋಕ್ ಕುಮಾರ್ ರೈ ಅವರ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ನೆಟ್ಟಿತ್ತು. ಇದೀಗ ಮೈಸೂರಿನಲ್ಲಿ ಅವರ ಸಹೋದರನ ಮನೆಯ ಮೇಲೆ ರೈಡ್ ಆಗಿ ಗಿಡದಲ್ಲಿ ನೇತುಹಾಕಿ ಇಟ್ಟಿದ್ದ ಕೋಟಿ ರೂಪಾಯಿ ಸೀಜ್ ಆಗಿದೆ. ಆ ಹಣದ ಮೂಲ ಯಾವುದು, ಅದು ಚುನಾವಣಾ ಅಕ್ರಮ ಕೆಲಸಗಳಿಗೆ ಹೊಂಚು ಹಾಕಿ ಮರದಲಿ ನೇತು ಹಣವೇ ಎಂಬುದು ತನಿಕೆಯಿಂದ ತಿಳಿದು ಬರಬೇಕಿದೆ.

 

ಇದನ್ನು ಓದಿ: Puttur Election: ಕಾಂಗ್ರೆಸ್ ಪರ ಪ್ರಚಾರಕ್ಕೆ ಮೇ.8 ಕ್ಕೆ ನಟಿ ರಮ್ಯಾ ಪುತ್ತೂರಿಗೆ! 

Leave A Reply

Your email address will not be published.