Congress Manifesto 2023: ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ? ಇಲ್ಲಿದೆ ಲಿಸ್ಟ್‌

Congress Manifesto 2023: ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

 

ಸದ್ಯ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ (Congress Manifesto 2023 )ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ ಮುಂತಾದವರು ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ‘ಸರ್ವ ಜನಾಂಗದ ಶಾಂತಿಯ ತೋಟ’ ಇದುವೇ ಕಾಂಗ್ರೆಸ್‌ನ ಬದ್ಧತೆ ಎಂದು ಪ್ರಣಾಳಿಕೆಯಲ್ಲಿ ಪಕ್ಷದಲ್ಲಿ ತಿಳಿಸಿದೆ .

ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆಗೆ ಮೊದಲೇ ಗೃಹಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್, ಪ್ರತೀ ಮನೆಗೆ ಗೃಹಲಕ್ಷ್ಮೀ ರಿಗೆ 2000, ಅನ್ನಭಾಗ್ಯ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಯುವನಿಧಿ ನಿರುದ್ಯೋಗ ಭತ್ಯೆ 3 ಸಾವಿರ ಪದವೀಧರರಿಗೆ, 1,500 ಡಿಪ್ಲೊಮಾ ಪದವೀಧರರಿಗೆ, ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂಬ ಈ ಮೇಲಿನ ಐದು ಭರವಸೆ ನೀಡಲಾಗಿತ್ತು.

ಇದರ ಜೊತೆಗೆ ಕರಾವಳಿ ಪ್ರದೇಶ ದ ಅಭಿವೃದ್ಧಿ ಗಾಗಿ ಕಾಂಗ್ರೆಸ್ ಪ್ರಣಾಳಿಕೆ ಈ ಮೂಲಕ ಕರಾವಳಿ/ ಮಲೆನಾಡು ಕರ್ನಾಟಕಕ್ಕೆ ಹಲವು ಯೋಜನೆಗಳ ಭರವಸೆ ನೀಡಿದೆ :
> ವಾರ್ಷಿಕ ರೂ. 500 ಕೋಟಿ, ಮತ್ತು 5 ವರ್ಷಕ್ಕೆ ರೂ 2,500 ಕೋಟಿ ಅನುದಾನ ನೀಡಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಸ್ಥಾಪನೆ.

> ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಚೀಚ್ ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಮತ್ತು ಯೋಜನೆ.

> ಅಡಿಕೆಗೆ ಹಳದಿ ರೋಗ ಮತ್ತು ಇತರ ರೋಗಗಳ ನಿಯಂತ್ರಣ ಹಾಗೂ ಮಾರುಕಟ್ಟೆ, ಸಂಶೋಧನೆಗೆ ಕ್ರಮ.

> ಮಲೆನಾಡಿನ ರೈತರಿಗೆ ಅನಾನುಕೂಲವಾಗಿರುವ ಕಸ್ತೂರಿರಂಗನ್ ವರದಿಯ ಮರುಪರಿಶೀಲನೆ ಹಾಗೂ ಅರಣ್ಯ ಮತ್ತು ಪರಿಸರ ರಕ್ಷಣೆಗೆ ಪಶ್ಚಿಮ ಘಟ್ಟ ನೀತಿ.

> ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಲು ಯೋಜನೆ ಮತ್ತು ಸಂಬಂಧಿತ ಕಾನೂನುಗಳ ತಿದ್ದುಪಡಿ.

> ಮೀನುಗಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಕ್ರಮಗಳು : ವಿಮಾ ರಕ್ಷೆ, ಎಲ್ಲಾ ಮೀನುಗಾರ ಮಹಿಳೆಯರಿಗೆ ರೂ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ, ಉತ್ತಮ ಮೀನುಗಾರಿಕಾ ದೋಣಿ ಖರೀದಿಗೆ ಶೇ 50ರಷ್ಟು ಸಬ್ಸಿಡಿ, ಪ್ರತಿ ದಿನದ ಡೀಸೆಲ್ ಬಳಕೆ ಪ್ರಮಾಣ 500 ಅಟರ್‌ಗೆ ಹೆಚ್ಚಳ, ಬಂದರಿನಿಂದ ಮಾರುಕಟ್ಟೆಗೆ ಸೂಕ್ತ ಸಾಲಿಗೆ ವ್ಯವಸ್ಥೆ

> ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಟ್ಟಿಸುವ, ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟ್‌ಗಳ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸರ್ವ ಋತು ಷಟ್ಟಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು.

> `ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಸ್ಥಾಪನೆ.

> ಸಸಿಹಿತ್ತು ಕಡಲ ತೀರವನ್ನು ಅಂತರರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಅಭಿವೃದ್ಧಿ

> ಮಂಗಳೂರು ಮೀನುಗಾರಿಕಾ ಬಂದರಿಗೆ ಕಾಯಂ ಹೂಳೆತ್ತುವ ಯಂತ್ರ ಪೂರೈಕೆ.

ಮೈಸೂರು ಕರ್ನಾಟಕಕ್ಕೆ ಭರವಸೆಗಳು:
> ಮೈಸೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರೂ. 5 ಸಾವಿರ ಕೋಟಿಗಳ ಹೂಡಿಕೆ.

> ಮಂಡ್ಯದಲ್ಲಿ ಮೈಶುಗರ್‌ ಕಾರ್ಖಾನೆ ಪುನಶ್ವೇತನ ಮತ್ತು ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಯೋಜನೆ- ಅನುಷ್ಠಾನ

> ಮೈಸೂರಿನಲ್ಲಿ 500 ಕೋಟಿ ಬಜೆಟ್‌ನೊಂದಿಗೆ ವಿಶ್ವದರ್ಜೆಯ ಡಾ. ರಾಜ್ ಕುಮಾರ್ ಫಿಲ್ಮ್‌ ಸಿಟಿ ನಿರ್ಮಾಣ.

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಸಂಕೀರ್ಣ ಸ್ಥಾಪನೆ ಮುಂತಾದ ಭರವಸೆ ನೀಡಲಾಗಿದೆ.

 

ಇದನ್ನೂ ಓದಿ: Congress Manifesto: ಭಜರಂಗದಳ ನಿಷೇಧ , ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹತ್ವದ ನಿರ್ಧಾರ !

Leave A Reply

Your email address will not be published.