Kangana ranaut: ಅಂತೂ ಮದುವೆ ಬಗ್ಗೆ ಮೌನ ಮುರಿದ ಕಂಗನಾ ! ಅಬ್ಬಬ್ಬಾ!.. ಸಲ್ಮಾನ್‌ನನ್ನೂ ಬಿಡಲ್ಲ ಅಂತಾಳೇ ಈ ಬಾಲಿವುಡ್ ಬ್ಯೂಟಿ!
Kangana ranaut-Salman Khan: ಸದಾ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಾಗುತ್ತಾ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡೋ ಬಾಲಿವುಡ್(Bollywood) ಕ್ವೀನ್ ನಟಿ ಕಂಗನಾ ರಣಾವತ್(Kangana Ranaut) ಸಲ್ಮಾನ್ ಖಾನ್(Salman Khan) ಅವರಿಗೆ ಬಂದ ಬೆದರಿಕೆ ಕುರಿತು, ತಮ್ಮ ಮದುವೆಯ ಕುರಿತೂ ಮಾತನಾಡಿದ್ದಾರೆ. ಹಾಗಿದ್ರೆ ನಟಿ ಹೇಳಿದ್ದೇನು ಗೊತ್ತೆ?
ನಟಿ ಕಂಗನಾ ರಣಾವತ್ (Kangana Ranaut) ಅವರು ಮಾ ಕಾಳಿಯ ದರ್ಶನಕ್ಕೆ ಹರಿದ್ವಾರದ ಪುರಾತನ ಶ್ರೀ ದಕ್ಷಿಣ ಕಾಳಿ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ನಟ ಸಲ್ಮಾನ್ ಖಾನ್ (Kangana ranaut-Salman Khan) ಅವರಿಗೆ ಬರುತ್ತಿರುವ ಜೀವ ಬೆದರಿಕೆಯ ಕುರಿತು ಹಾಗೂ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.
ಮೊದಲು ಸಲ್ಮಾನ್ ಖಾನ್ ಅವರಿಗೆ ಬಂದಿದೆ ಎನ್ನಲಾದ ಜೀವ ಬೆದರಿಕೆ ಬಗ್ಗೆ ಮಾತನಾಡಿದ ಅವರು “ದೇಶವು ಪ್ರಧಾನಿ ನರೇಂದ್ರ ಮೋದಿ(PM Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Sha) ಅವರ ಸುರಕ್ಷಿತ ಕೈಯಲ್ಲಿದೆ, ಆದ್ದರಿಂದ ಭದ್ರತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ನಾವು ನಟರು, ಸಲ್ಮಾನ್ ಖಾನ್ ಅವರಿಗೆ ಕೇಂದ್ರ ಭದ್ರತೆ ಒದಗಿಸಿದೆ. ದೇಶವೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಂದ ಭದ್ರತೆ ಪಡೆಯುತ್ತಿದ್ದು, ಭಯಪಡುವ ಅಗತ್ಯವಿಲ್ಲ. ನನಗೆ ಬೆದರಿಕೆ ಬಂದಾಗಲೂ, ಕೇಂದ್ರ ನನಗೂ ಭದ್ರತೆಯನ್ನು ನೀಡಿತ್ತು. ಇಂದು ದೇಶವು ಸುರಕ್ಷಿತರ ಕೈಯಲ್ಲಿದೆ’ ಎಂದು ಹೇಳಿದ್ದಾರೆ.
ಬಳಿಕ ಮಾಧ್ಯಮದವರು ಕಂಗನಾಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಿ “ಮದುವೆ ಯಾವಾಗ ಮೇಡಂ, ಏನಾದರೂ ಪ್ಲಾನ್ ಇದೆಯಾ? ಎಂದಾಗ, ಅದಕ್ಕೆ ಕಂಗನಾ ಮದುವೆ ಎಂಬುದು ಹೃದಯದ ಸಂಬಂಧ ಎಂದು ಎಲ್ಲರಿಗೂ ತಿಳಿದಿದೆ ಎಂದಷ್ಟೇ ಹೇಳಿ ಮೌನವಾದರು.
ಅಂದಹಾಗೆ ಕಂಗನಾ ರಣಾವತ್ (Kangana Ranaut) ಮತ್ತು ನಟ ಹೃತಿಕ್ ರೋಷನ್ ಅವರ ನಡುವಿನ ಲವ್ ಸ್ಟೋರಿ ಚಿತ್ರಪ್ರಿಯರಿಗೆ ಹೊಸತೇನಲ್ಲ. ಮದುವೆಯಾದ ಮೇಲೂ ಹೃತಿಕ್ ರೋಷನ್ ಕಂಗನಾ ಅವರ ಹಿಂದೆ ಬಿದ್ದದ್ದು, ಕಂಗನಾ ಅವರಿಗಾಗಿ ಪತ್ನಿಯನ್ನು ಬಿಡಲು ರೆಡಿಯಾಗಿದ್ದು ಈಗ ಹಳೆಯ ವಿಷಯ. ಅದೇ ರೀತಿ ಕಂಗನಾ ಕೂಡ ಹೃತಿಕ್ ರೋಷನ್ (Hruthik Roshan) ಮಾತಿಗೆ ಮರುಳಾಗಿ ಅವರ ಎರಡನೆಯ ಪತ್ನಿಯಾಗಲು ರೆಡಿ ಆಗಿದ್ದು, ಆಮೇಲೆ ಎಲ್ಲವೂ ಅಯೋಮಯವಾಗಿ ಹೃತಿಕ್ ರೋಷನ್ ಕಂಗನಾಗೆ ಕೈಕೊಟ್ಟಿರೋ ಸುದ್ದಿ ಹಿಂದೊಮ್ಮೆ ಬಲು ಚರ್ಚಿತ ವಿಷಯವಾಗಿತ್ತು.
ಇನ್ನೂ ಹರಿದ್ವಾರದಲ್ಲಿ ಗಂಗಾ ಆರತಿಯಲ್ಲಿ ಕಂಗನಾ ಕೂಡ ಭಾಗವಹಿಸಿದ್ದರು. ನಂತರ ಅವರು ಕೇದಾರನಾಥ ಧಾಮಕ್ಕೆ ಭೇಟಿ ಕೊಟ್ಟರು. ಇದೇ ಸಂದರ್ಭದಲ್ಲಿ 2024 ರ ಲೋಕಸಭಾ ಚುನಾವಣೆಯ ಬಗ್ಗೆಯೂ ಕಂಗನಾ ಮಾತನಾಡಿದರು. ‘2024 ರ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ, ಆದರೆ 2019 ರಲ್ಲಿ ಸಂಭವಿಸಿದ್ದೇ 2024 ರಲ್ಲಿಯೂ ಸಂಭವಿಸುತ್ತದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 353 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿತ್ತು. ಮತ್ತೊಮ್ಮೆ ಇತಿಹಾಸ ಸೃಷ್ಟಿಯಾಗಲಿದೆ’ ಎಂದರು.
ಇದನ್ನೂ ಓದಿ:Love tips : ನಿಮ್ಮ ಪ್ರೇಯಸಿಯೂ ನಿಮ್ಮೊಂದಿಗೆ ಈ ತರ ಆಡ್ತಾರಾ? ಹಾಗಿದ್ರೆ ನೀವಿನ್ನು ಲವ್ ಮಾಡೋದೇ ವೇಸ್ಟ್!