7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ಹೆಚ್ಚಳವಾಗಲಿದೆ ವೇತನ?!
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ (government employees) ಸಿಹಿಸುದ್ದಿ ಇಲ್ಲಿದೆ. ಶೀಘ್ರದಲ್ಲೇ ನೌಕರರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಎರಡು ಸಂಭಾವ್ಯ ಹೆಚ್ಚಳದೊಂದಿಗೆ ನೌಕರರ ವೇತನ (employees salary) ಹೆಚ್ಚಳಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ನೌಕರರ ಮೂಲ ವೇತನ 6000 ರೂ.ಗಳಷ್ಟಿತ್ತು. ಆದರೆ, ತಿಂಗಳಿಗೆ 18,000 ರೂ. ಹೆಚ್ಚಿಸಬೇಕು ಎಂಬ ಕೂಗು ಕೇಳುತ್ತಿತ್ತು. ಈ ಹಿನ್ನೆಲೆ ಜುಲೈ ತಿಂಗಳಲ್ಲಿ ಜಿಜೆಪಿ (bjp) ಸರ್ಕಾರವು ತುಟ್ಟಿಭತ್ಯೆಯನ್ನು (DA) 4 ಪ್ರತಿಶತ ಮತ್ತು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಬಹುದು (7th Pay Commission) ಉದ್ಯೋಗಿಗಳ ವೇತನವು 95,000 ರೂ.ವರೆಗೆ ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.
ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಶೇ.2.57ರಷ್ಟು ಫಿಟ್‌ಮೆಂಟ್ ಅಂಶದ ವೇತನ ನೀಡಲಾಗುತ್ತಿದೆ. ಇದನ್ನು 3.68 ಪಟ್ಟು ಹೆಚ್ಚಿಸಬೇಕು ಎಂದು ನೌಕರರು ಬೇಡಿಕೆ ಇಟ್ಟಿದ್ದರು. ಇದೀಗ ಈ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಒಂದು ವೇಳೆ ಫಿಟ್‌ಮೆಂಟ್ ಅಂಶವನ್ನು 3 ಪಟ್ಟು ಹೆಚ್ಚಿಸಿದರೆ, ನೌಕರರ ಮೂಲ ವೇತನವನ್ನು ತಿಂಗಳಿಗೆ ರೂ.35 ಸಾವಿರಕ್ಕೆ ಏರಿಕೆಯಾಗಲಿದೆ. ಫಿಟ್‌ಮೆಂಟ್ ಅಂಶವನ್ನು ಕೊನೆಯದಾಗಿ ಹೆಚ್ಚಿಸಿದ್ದು 2016 ರಲ್ಲಿ. ಸದ್ಯ ವೇತನ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ಇನ್ನೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಮಾಧ್ಯಮ ವರದಿಗಳು ಈ ಬಗ್ಗೆ ತಿಳಿಸಿವೆ.
ಇದನ್ನೂ ಓದಿ: Naga Chaitanya: ನಟಿ ಶೋಭಿತಾ ಜೊತೆ ಡೇಟಿಂಗ್! ಸಮಂತಾ ಮಾಜಿ ಪತಿ ಕೊಟ್ರು ಕೊನೆಗೂ ಕ್ಲಾರಿಟಿ!!