Menstrual Card: ಶಾಲಾ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ಜಾರಿಗೆ ತಂದ ರಾಜ್ಯ ಸರ್ಕಾರ

Menstrual Card: ಈ ರಾಜ್ಯದ (State) ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ (Girls) ಋತುಮತಿ ಕಾರ್ಡ್ (Menstrual Card) ನೀಡಲಾಗುತ್ತಿದೆ. ಹೌದು, ಅಸ್ಸಾಂ (Assam) ಸರ್ಕಾರ ಇಂತದೊಂದು ಯೋಜನೆ ಜಾರಿಗೆ ತಂದಿದೆ. ಇಲ್ಲಿನ ಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮುಟ್ಟಿನ ಚೀಟಿ ನೀಡಲಾಗುತ್ತಿದೆ. ಅಸ್ಸಾಂ ಸರ್ಕಾರ ಯಾಕೆ ಇಂತಹ ಕ್ರಮ ಕೈಗೊಂಡಿದೆ?

ಅಸ್ಸಾಂ ರಾಜ್ಯದಲ್ಲಿ ತಾಯಿ -ಮಗುವಿನ ಸಾವಿನ (Death) ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದಕ್ಕೆ ಅತಿಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡುವುದೇ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ಈ ಬಾಲ್ಯವಿವಾಹ ತಡೆಯಲು ಹಾಗೂ ಚಿಕ್ಕ ವಯಸ್ಸಿನಲ್ಲಿ ಮದುವೆಯಾದಾಗ ಉಂಟಾಗಬಹುದಾದ ತಾಯಿ-ಮಗುವಿನ ಸಾವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

8 ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರಿಗೆ (students) ಮಾತ್ರ ಈ ಕಾರ್ಡ್ ನೀಡಲಾಗುತ್ತಿದೆ. 8 ಕ್ಕಿಂತ ಕಡಿಮೆ ತರಗತಿಯ, ಹತ್ತು ಹಾಗೂ ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿನಿಯರು ಋತುಮತಿ ಆಗಿದ್ದರೂ ಅವರಿಗೆ ಈ ಕಾರ್ಡ್ ನೀಡಲಾಗುವುದಿಲ್ಲ.

ಈಗಾಗಲೇ ಇಲ್ಲಿನ 31 ಜಿಲ್ಲೆಗಳಲ್ಲಿ 1 ಕೋಟಿ ಕಾರ್ಡ್ ವಿತರಣೆ ಮಾಡಲಾಗಿದೆ. ಹೀಗೆ ನೀಡಲಾಗುತ್ತಿರುವ ಋತುಮತಿ ಕಾರ್ಡ್ ಮೂಲಕ ವಿದ್ಯಾರ್ಥಿನಿಯರ ದೈಹಿಕ ಏರುಪೇರುಗಳನ್ನು ಗಮನಿಸಿ, ಗರ್ಭವತಿ ಆಗಿದ್ದರೆ ಅದನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರ ದೈಹಿಕ ಪರಿಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆಯೂ ಮಾಡಲಾಗಿದೆ.

 

ಇದನ್ನು ಓದಿ: Indian Railways: ಪ್ರಯಾಣಿಕರೇ ಗಮನಿಸಿ, ಭಾರತೀಯ ರೈಲ್ವೇಯಲ್ಲಿ ಬದಲಾವಣೆ! ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ 

Leave A Reply

Your email address will not be published.