Congress 6th Guarantee: 6ನೇ ಗ್ಯಾರಂಟಿ ಘೋಷಣೆ: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ!

Congress 6th Guarantee: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ (Karnataka election) ನಡೆಯಲಿದ್ದು, ಈ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಎಲ್ಲಾ ಪಕ್ಷದವರೂ ಈ ಬಾರಿ ಜಯಿಸಿದರೆ ಹಲವು ಸವಲತ್ತುಗಳನ್ನು ನೀಡುವ ಆಶ್ವಾಸನೆ ನೀಡುತ್ತಿದ್ದಾರೆ. ಅಂತೆಯೇ ಕಾಂಗ್ರೆಸ್ (Congress 6th Guarantee) ಕೂಡ ಈಗಾಗಲೇ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಇದೀಗ 6ನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.

ಈ ಮೊದಲೇ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಪದವೀಧರರಿಗೆ ಮಾಸಿಕ 3 ಸಾವಿರ ರೂ, ನಿರುದ್ಯೋಗ ಭತ್ಯೆ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ, ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ (women) ಉಚಿತ ಪ್ರಯಾಣ ಸೇರಿದಂತೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ಇದೀಗ 6ನೇ ಗ್ಯಾರಂಟಿ ಬಿಡುಗಡೆ ಮಾಡಿದ್ದು, ಬಂಪರ್ ಆಫರ್ ನೀಡಿದೆ. ಹೌದು, ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಬೆಳಗಾವಿಯಲ್ಲಿ ಪ್ರಚಾರದ ವೇಳೆ ಹೇಳಿದ್ದಾರೆ.

ಬೆಳಗಾವಿ (belagavi) ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್‌ (congress) ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಗಾ ಗಾಂಧಿ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲಿ 11,500ರೂ.ಗಳಿಂದ 15,000 ಸಾವಿರ ರೂ., ಸಹಾಯಕಿಯರಿಗೆ ಹಾಲಿ 7,500 ರೂ.ದಿಂದ 10,000 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ 5,000 ರೂ.ಗಳಿಂದ 8,000 ರೂ. ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರಿಗೆ ಹಾಲಿ 3,700 ರೂ.ದಿಂದ 5,000 ರೂ.ಗಳಿಗೆ ಗೌರವಧನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದರು. ಸದ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಗ್ಯಾರಂಟಿಗಳನ್ನು ಜಾರಿಗೆ ತರವುದಾಗಿ ಹೇಳಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಶುಕ್ರದೆಸೆ ವೃದ್ಧಿಸಲು ಕರ್ಪೂರವನ್ನು ಈ ರೀತಿ ಬಳಸಿ!

Leave A Reply

Your email address will not be published.