Ex CM Siddaramaiah lashes on BJP Praja Manifesto: ಬಿಜೆಪಿಯ `ಪ್ರಜಾ ಪ್ರಣಾಳಿಕೆ’ ಬಿಡುಗಡೆ ಕುರಿತು ಮಾಜಿ ಸಿಎಂ ನೀಡಿದ್ರು ಟಾಂಗ್‌! ಏನಂದ್ರು ಗೊತ್ತೇ?

BJP Praja Manifesto: ಇಂದು ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಜೆಪಿ ಪ್ರಜಾ ಪಣಾಳಿಕೆಯನ್ನು (BJP Praja Manifesto) ಬಿಡುಗಡೆ ಮಾಡಿದ್ದರು. ಇದೀಗ ಈ ಪ್ರಜಾ ಪಣಾಳಿಕೆಗೆ ಮಾಜಿ ಸಿಎಂ ಆದ ಸಿದ್ದರಾಮಯ್ಯ ಅವರು ಟಾಂಗ್‌ ಕೊಟ್ಟಿದ್ದಾರೆ. ಅದೇನೆಂದರೆ, ಬಿಜೆಪಿಯವರು ಈ ಮೊದಲು ಕೊಟ್ಟ ಭರವಸೆಗಳೇನಿದೆ ಅದನ್ನು ಈಡೇರಿಸಲಿ, ಮೊದಲು ಕೊಟ್ಟ ಭರವಸೆಯ ಲಿಸ್ಟ್‌ನ ರಿಪೋರ್ಟ್‌ ಕಾರ್ಡ್‌ ಬಿಡುಗಡೆ ಮಾಡಲಿ ಎಂದು ಹೇಳಿದ್ದಾರೆ.

 

ಈ ಬಗ್ಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, “ಬಿಜೆಪಿಯವರು ಈ ಮೊದಲು ಭರವಸೆ ನೀಡಿದ ರಿಪೋರ್ಟ್‌ ಕಾರ್ಡ್‌ ಬಿಡುಗಡೆ ಮಾಡಲಿ, ಬಿಜೆಪಿಯವರು ಈ ಹಿಂದೆ ನೀಡಿದ್ದಂತ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಈಗ ಮತ್ತೆ ಪ್ರಣಾಳಿಕೆ ಘೋಷಣೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರುಗಳು ನೀಡುವ ಭರವಸೆಯ ಬಗ್ಗೆ ಯಾವುದೇ ಗೌರವವಿಲ್ಲ. ಕಳೆದ ಚುನಾವಣೆಯಲ್ಲಿ ನೀಡಿದ್ದಂತ ಶೇ.90 ರಷ್ಟು ಹೆಚ್ಚು ಭರವಸೆಗಳನ್ನು ಬಿಜೆಪಿಯವರು ಇಲ್ಲಿಯವರೆಗೆ ಈಡೇರಿಸಿಲ್ಲ, ಜೊತೆಗೆ ಬಿಜೆಪಿ ಎಂದರೆ ದ್ರೋಹಿಗಳು ಎಂಬ ಮಾತನ್ನು ಹೇಳಿದ್ದಾರೆ.

ಇದನ್ನೂ ಓದಿ:ಬಿಜೆಪಿಯ `ಪ್ರಜಾ ಪ್ರಣಾಳಿಕೆ’ ಬಿಡುಗಡೆ : BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, 5 ಕೆಜಿ ಅಕ್ಕಿ, 5 ಕೆಜಿ ಸಿರಿ ಧಾನ್ಯ !

Leave A Reply

Your email address will not be published.