Siddaramaiah : ‘ನಾನೇಕೆ ಬಿದ್ದೆ ಗೊತ್ತೇನ್ರಿ? ಯಾವ ಬಿಸ್ಲಿಗೂ ಜಗ್ಗಲ್ಲ ನಾನು’! ಕುಸಿದು ಬಿದ್ದ ಅಸಲಿ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ!
Reason for Siddaramaiha collapse: ವಿಜಯನಗರ(Vijayanagar) ಜಿಲ್ಲೆಯ ಕೂಡ್ಲಿಗಿ(Kudligi) ಯಲ್ಲಿ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಾರಿನಿಂದ ಕುಸಿದು ಬಿದ್ದಿದ್ದು ಭಾರೀ ಸುದ್ಧಿಯಾಗಿತ್ತು. ಆದರೀಗ ಸ್ವತಃ ಸಿದ್ದರಾಮಯ್ಯ ಅವರೆ ತಾನು ಬಿದ್ದ ಅಸಲಿ ಕಾರಣವನ್ನು (Reason for Siddaramaiha collapse) ಬಿಚ್ಚಿಟ್ಟಿದ್ದಾರೆ.
ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್(Congress) ಅನ್ನು ಅಧಿಕಾರಕ್ಕೆ ತರಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ನಿರಂತರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ನಿನ್ನೆ ದಿನ ಕೂಡ್ಲಿಗಿಯ ಹೆಲಿಪ್ಯಾಡ್‌ನಲ್ಲಿ ಕಾರ್ ಹತ್ತಿ ಜನರ ಕಡೆ ಕೈಬೀಸಿ ಇಳಿಯುವಾಗ ಸಿದ್ದು ಕಾರಿನಿಂದ ಕುಸಿದು ಬಿದ್ದಿದ್ದರು. ಬಳಿಕ ಅವರ ಅಂಗರಕ್ಷಕರು ಅವರನ್ನು ತಕ್ಷಣವೇ ಮೇಲೆತ್ತಿ ನೀರು ಕುಡಿಸಿ ಉಪಚಾರ ಮಾಡಿದ್ದರು ಬಿರು ಬಿಸಿಲಲ್ಲೂ ನಿರಂತರ ಪ್ರಚಾರ ಮಾಡುತ್ತಿರುವುದರಿಂದ ನಿತ್ರಾಣ ಆಗಿರುವ ಸಾಧ್ಯತೆ ಇದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದರ ಅಸಲಿ ಕಾರಣವನ್ನು ಸ್ವತಃ ಸಿದ್ದರಾಮಯ್ಯ ಅವರೇ ತೆರೆದಿಟ್ಟಿದ್ದಾರೆ.
ಈ ಕುರಿತಂತೆ ಸ್ವತಃ ಸಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸ್ಪಷ್ಟೀಕರಣ ನೀಡಿದ ಸಿದ್ದರಾಮಯ್ಯ ಅವರು, “ನಾನು ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನೆ. ಯಾರೊಬ್ಬರೂ ಗಾಬರಿ ಆಗುವಂತಹ ಘಟನೆ ಏನೂ ನಡೆದಿಲ್ಲ. ನಾನು ಗಟ್ಟಿಮುಟ್ಟಾಗಿದ್ದೇನೆ. ಈಗ ನಾನು ಆರಾಮವಾಗಿದ್ದೇನೆ. ಇನ್ನು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಚಾರ ಸ್ಥಳಕ್ಕೆ ಹೊರಟ ನಾನು ಎಲ್ಲಿಯೂ ವಿಶ್ರಾಂತಿ ಪಡೆಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ” ಎಂದು ಹೇಳಿದ್ದಾರೆ.
ಅಂದಹಾಗೆ ನಿನ್ನೆ ದಿನ ಪ್ರಚಾರಕ್ಕಾಗಿ ವಿಜಯನಗರಕ್ಕೆ ಬಂದ ಸಿದ್ದು, ಕೂಡ್ಲಿಗಿಯ ಹೆಲಿಪ್ಯಾಡ್‌ನಿಂದ ಬಂದು ಕಾರು ಹತ್ತಿ ಜನರತ್ತ ಕೈಬೀಸಿದ್ದಾರೆ. ಬಳಿಕ ಇಳಿಯುವಾಗ ಸಿದ್ದರಾಮಯ್ಯ ಕುಸಿದು ಬಿದ್ದಿದ್ದಾರೆ. ಆ ವೇಳೆ ಕಾರಿನ ಡೋರ್ ಬಳಿಯೇ ಅಂಗರಕ್ಷಕರಿದ್ದರಿಂದ ಸಿದ್ದರಾಮಯ್ಯ ಅವರಿಗೆ ಏನು ಆಗಿಲ್ಲ. ತಕ್ಷಣವೇ ಸೀಟಿನ ಮೇಲೆ ಸಿದ್ದರಾಮಯ್ಯ ಅವರನ್ನು ಅಂಗರಕ್ಷಕರು ಕೂರಿಸಿದ್ದಾರೆ. ಕಾರಿನಲ್ಲಿಯೇ ಸಿದ್ದರಾಮಯ್ಯಗೆ ವೈದ್ಯರಿಂದ ಉಪಚಾರ ನಡೆದಿದ್ದು, ಗ್ಲೂಕೋಸ್ ನೀಡಲಾಗಿದೆ.
ಹೆಲಿಪ್ಯಾಡ್‌ನಲ್ಲಿ ನಡೆದ ಘಟನೆಯ ನಂತರ ವೈದ್ಯರ ಸಲಹೆಯಂತೆ ನೀರು ಹಾಗೂ ಗ್ಲುಕೋಸ್ ನೀರನ್ನು ಸೇವಿಸಿದರು. ನಂತರ ವಿಶ್ರಾಂತಿಯನ್ನು ಪಡೆಯದೇ ಪ್ರಚಾರ ಕಾರ್ಯಕ್ಕೆ ತೆರಳಿದರು. ನಂತರ, ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿ ಡಾ. ಶ್ರೀನಿವಾಸ್ ಅವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ.
ಈಗ ಆರಾಮಾಗಿದ್ದೇನೆ.
ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ.— Siddaramaiah (@siddaramaiah) April 29, 2023
ಇದಲ್ಲದೆ ಸಿದ್ದರಾಮಯ್ಯ ಕುಸಿದಿರೋದಕ್ಕೆ ಮತ್ತೊಂದು ಕಾರಣವಿದೆ. ನಿನ್ನೆ ಎಡಗೈಗೆ ಸ್ವಲ್ಪ ಗಾಯವಾ ಗಿತ್ತಂತೆ. ಅದರ ಮೇಲೆ ಭಾರ ಹಾಕಿರೋದ್ರಿಂದಲೇ ಕುಸಿದಿದ್ದಾರೆ. ಕಾರು ಏರುವಾಗ ಡೋರ್ ಮೇಲೆ ಹತ್ತಿ ನಿಲ್ಲುವಾಗ ಎಡಗೈ ಮೇಲೆ ಭಾರವಾಗಿದೆ. ಹೀಗಾಗಿ ಸನ್ ಸ್ಟ್ರೋಕ್ ಜೊತೆಗೆ ಕೈ ಮೇಲೆ ಭಾರ ಹಾಕಿರೋದೆ ಬಿಳಲು ಕಾರಣವೆಂದು ಹೇಳಲಾಗ್ತಿದೆ ಕಳೆದ ವಾರ ಬೆಂಗಳೂರಿನಲ್ಲಿ ಇದ್ದಾಗ ಎಡಗೈಗೆ ಪಟ್ಟಿ ಹಾಕಿಕೊಂಡು ಓಡಾಡಿದ್ದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Puttur Election: ಮೇ 6 ರಂದು ಪುತ್ತೂರಿಗೆ ಯೋಗಿ ಆದಿತ್ಯನಾಥ್ ಭೇಟಿ !