Avantika Sundar: ನಟಿ ಖುಷ್ಬೂ ಮಗಳು ಅವಂತಿಕಾ ಅವಸ್ಥೆ ! ಆಕೆಯ ಆ ಫೋಟೋ ನೋಡಿ ನೀನು ಇಂಡಿಯನ್ನ ಅಥ್ವಾ ಫಾರಿನ್ನಾ ಅಂತಿದ್ದಾರೆ ಜನ!!

Share the Article

Avantika sundar: ಖುಷ್ಟೂ ಒಂದು ಕಾಲದ ದಕ್ಷಿಣ ಚಿತ್ರರಂಗದಲ್ಲಿನ ಸ್ಟಾರ್ ನಾಯಕಿ ನಟಿ. 90 ರ ದಶಕದಲ್ಲಿ ಕನ್ನಡ, ತೆಲುಗು ಜೊತೆಗೆ ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಆಕೆಯ ಸೌಂದರ್ಯ, ನಟನೆಗೆ ಅದೆಷ್ಟೋ ಜನರು ಮನಸೋತಿದ್ದು, ಅವರಿಗಾಗಿ ದೊಡ್ಡ ಅಭಿಮಾನಿ ಬಳಗವೇ ಇದೆ. ಅಷ್ಟೇ ಅಲ್ಲ, ಅಭಿಮಾನಿಗಳು ಆಕೆಗಾಗಿ ದೇವಸ್ಥಾನ ನಿರ್ಮಿಸಿ ಪೂಜೆಯೂ ಸಲ್ಲಿಸಿದ್ದರು.

ಸದ್ಯ ನಟಿ ಖುಷ್ಬೂ (Kushboo) ಮಗಳು ಅವಂತಿಕಾAvantika sundar) ಸಖತ್ ಸುದ್ದಿಯಲ್ಲಿದ್ದಾರೆ. ಲಂಡನ್​ನಲ್ಲಿ (Landon) ಓದುತ್ತಿರುವ ಅವಂತಿಕಾ ಇದೀಗ ತಮ್ಮ ಹಾಟ್ ಫೋಟೋಗಳನ್ನು (Avantika Photos) ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಕೆಯ ಫೋಟೋ ನೋಡಿ ಸೋಷಿಯಲ್ಸ್ ಏನಂದ್ರು ಗೊತ್ತಾ? ‘ನೀನು ಇಂಡಿಯನ್ನ ಅಥ್ವಾ ಫಾರಿನ್ನಾ’ ಅಂತಿದ್ದಾರೆ!!!.

ಅವಂತಿಕಾ ಲಂಡನ್​ನಲ್ಲಿನ ರಸ್ತೆಗಳು, ರೆಸ್ಟೋರೆಂಟ್​ಗಳು ಮತ್ತು ಪಬ್​ಗಳಲ್ಲಿ ಇರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಟ್ ಡ್ರೆಸ್​ನಲ್ಲಿ ಆವಂತಿಕಾ ಮಾದಕನೋಟ ಬೀರಿದ್ದು, ಹಲವು ಸೆಲೆಬ್ರಿಟಿಗಳು ಸೇರಿದಂತೆ ನೆಟ್ಟಿಗರು ವಿಭಿನ್ನ, ವಿವಿಧ ಕಾಮೆಂಟ್ ಮಾಡಿದ್ದಾರೆ. ಕೆಲವರು ‘ಸಿನಿಮಾಗೆ ಯಾವಾಗ ಎಂಟ್ರಿ ಕೊಡ್ತೀರಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಸೌತ್ ಹುಡುಗಿಯಂತೆ ಕಾಣುತ್ತಿಲ್ಲ, ವಿದೇಶಿ ಹುಡುಗಿಯಂತೆ ಕಾಣ್ತಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

 

ಅವಂತಿಕಾ ಈ ಮೊದಲು ದಪ್ಪಗಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಅವರು ಹಲವು ಟೀಕೆಗಳನ್ನೂ ಎದುರಿಸಿದ್ದರು. ನಂತರ ತೂಕ ಇಳಿಸಿಕೊಂಡಿದ್ದು, ಇದೀಗ ಸ್ಲಿಮ್ ಆಗಿ ಗ್ಲಾಮರಸ್ ಕಾಣುತ್ತಿದ್ದಾರೆ.
ಈ ಮಧ್ಯೆ ಅವಂತಿಕಾ ಸಿನಿರಂಗಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಾಯಿಯ ಹಾಗೆ ನಟಿಸಿ, ಸೈ ಎನಿಸಿಕೊಳ್ಳುತ್ತಾರಾ? ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಡೌನ್ ಲೋಡ್ ಮಾಡ್ಕೋಬೇಕಾ, ಇಲ್ಲಿದೆ ಕಂಪ್ಲೀಟ್ ಮಾಹಿತಿ!

Leave A Reply