Anika Sindhya: ನಾ ಮಾಡಿದ ಆ ಪಾತ್ರ ನನ್ನ ಜೀವನವನ್ನೇ ಬರ್ಬಾತ್ ಮಾಡಿತ್ತು, ನನಗೆ ಮದುವೆ ಸಂಬಂಧಗಳೇ ಬರಲಿಲ್ಲ! ರೋಚಕ ಅನುಭವಗಳನ್ನು ತೆರೆದಿಟ್ಟ ನಟಿ!

Actress Anika Sindhya: ಸಿನಿಮಾ, ದಾರವಾಹಿಗಳಂದ್ರೆ ಅದೊಂದು ಬಣ್ಣದ ಲೋಕ. ಅಲ್ಲೇನಿದ್ದರೂ ಬಣ್ಣ ಹಚ್ಚಿ, ನಟಿಸೋ ಪಾತ್ರಕ್ಕೆ ಜೀವತುಂಬಲಾಗುತ್ತದೆಯೇ ಹೊರತು ಅದೇ ಅವರ ನಿಜ ಜೀವನವಲ್ಲ. ಆದರೆ ಕೆಲವೊಮ್ಮೆ ತಾವು ನಟಿಸೋ ಪಾತ್ರಗಳೇ ಅನೇಕ ನಟ ನಟಿಯರಿಗೆ ಮುಳುವಾಗಿ ಬಿಡುತ್ತದೆ. ಎಷ್ಟೋ ಮಂದಿ ಈ ಬಗ್ಗೆ ಹಿಂದು ಮುಂದು ಯೋಚಿಸದೆ ತಾವೇ ಸ್ವತಃ ನಿರ್ಧರಿಸಿಬಿಡುತ್ತಾರೆ. ಅಂತೆಯೇ ಇಲ್ಲೊಬ್ಬರು ನಟಿಗೆ ತಾನು ನಟಿಸಿದ ಪಾತ್ರವೊಂದು ನಿಜ ಜೀವನದಲ್ಲಿ ನಿಜವಾಗಿಯೂ ಮುಳುವಾಗಿ ಪರಿಣಮಿಸಿದೆ.

ಹೌದು, ಈ ಸಿನಿಮಾ ಹಾಗೂ ದಾರವಾಹಿಗಳಲ್ಲಿ ಬರುವ ಖಳನಾಯಕರ ಪಾತ್ರಗಳೇ ಹಾಗೆ. ಈ ಪಾತ್ರಗಳಲ್ಲಿ ನಟಿಸೋರು ನಿಜ ಜೀವನದಲ್ಲೂ ಹಾಗೇ ಇರುತ್ತಾರೆ ಅನ್ನೋದು ಹಲವರ ನಂಬಿಕೆ. ಇದಕ್ಕೆ ದೊಡ್ಡ ಉದಾಹರಣೆ ಅಂದ್ರೆ ಕನ್ನಡದ ಮೇರು ನಟ, ವಿಲನ್ ಪಾತ್ರಗಳಿಂದಲೇ ಖ್ಯಾತಿ ಗಳಿಸಿದ ವಜ್ರಮುನಿ ಅವ್ರು. ಎಲ್ಲಾ ಮೂವಿಗಳಲ್ಲೂ ಖಳನಾಯಕನಾಗಿ, ಉಗ್ರವಾಗಿ, ಕೆಂಗಣ್ಣಿನಿಂದ ಕಾಣುತ್ತಿದ್ದ ವಜ್ರಮುನಿ, ನಿಜ ಜೀವನದಲ್ಲೂ ಹಾಗೇ ಅನ್ನೋ ಭಾವನೆ ಅನೇಕ ಕನ್ನಡಿಗರಲ್ಲಿ ಮನೆ ಮಾಡಿತ್ತು. ಆದರೆ ವಜ್ರ ಮುನಿ ಅವ್ರು ತಮ್ಮ ರೀಲ್ ಲೈಫಿಗೆ ತದ್ವಿರುದ್ಧವಾಗಿ ತಮ್ಮ ರಿಯಲ್ ಲೈಫ್ ನ ಲೀಡ್ ಮಾಡಿದವರು. ತಾವು ನಟಿಸೋ ಪಾತ್ರಗಳಿಗೆ ವಿರುದ್ಧವಾದ ಸ್ವಭಾವಗಳನ್ನು ಹೊಂದಿ ಅದರಂತೆ ಬದುಕಿದವರು.

ಅಂತೇಯೇ ನಟಿ ಅನಿಕ ಸಿಂಧ್ಯಾ (Actress Anika Sindhya) ಯಾರಿಗೆ ಗೊತ್ತಿಲ್ಲ ಹೇಳಿ?!ದಾರವಾಹಿ ಪ್ರಿಯರಿಗಂತೂ ಈಕೆಯ ಪರಿಚಯ ಇದ್ದೇ ಇರುತ್ತೆ. ದಶಕಗಳಿಂದಲೂ ಹಲವಾರು ಧಾರಾವಾಹಿಗಳಲ್ಲಿ ಖಳನಾಯಕಿ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ಈಕೆ ತಮ್ಮ ಅದ್ಬುತ ಅಭಿನಯಕ್ಕೆ ಹೆಸರುವಾಸಿ. ಹೌದು, ಹೆಚ್ಚು ಕಮ್ಮಿ 10 ವರ್ಷಗಳಿಂದಲೂ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿರುವ ಅನಿಕಾ ಖಳನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು.

ಅಂದಹಾಗೆ ಈ ಅನಿಕ ಸಿಂಧ್ಯಾಗೂ ಕೂಡ ಪರದೆ ಮೇಲೆ ತಾನು ಮಾಡೋ ಖಳನಾಯಕಿಯ ಪಾತ್ರ, ನಿಜ ಜೀವನದಲ್ಲೂ ಹೇಳಲಾಗದಷ್ಟು ಪ್ರಭಾವ ಬೀರಿದೆ. ರೀಲ್ ಲೈಫಿನಲ್ಲಿ ಜನರಿಗೆ ತಾನು ಹೇಗೆ ಕಾಣುತ್ತೇನೋ ಹಾಗೆಯೇ ರಿಯಲ್ ಲೈಫಿನಲ್ಲೂ ಜನ ಅಂತೆಯೇ ನೋಡುತ್ತಾರಂತೆ. ಇದು ತೀರ ವ್ಯತಿರಿಕ್ತವಾಗಿಯೇ ನನಗೆ ಪ್ರಭಾವ ಬೀರಿದೆ ಎಂದು ನಟಿ ಹೇಳುತ್ತಾರೆ.

ವರ್ಷಗಳ ಕಾಲ ಇಂತಹ ಖಳನಾಯಕಿ, ಕೆಟ್ಟ ರೋಲ್‌ಗಳನ್ನೇ ಮಾಡಿಕೊಂಡು ಬಂದಾಗ ನಿಜ ಜೀವನಕ್ಕೆ ಅದು ಬೇರೆ ರೀತಿಯಲ್ಲಿ ಪರಿಣಾಮವಾಗುವುದು ಸತ್ಯ. ಇದರಿಂದ ನಟಿ ಅನಿಕ ಅವರಿಗೆ ಆಗಾಗ ತಲೆನೋವು ಉಂಟಾಗುತ್ತಿತ್ತಂತೆ. ಅದೆಷ್ಟೋ ಬಾರಿ ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಬೇಸರ ಮಾಡಿಕೊಂಡಿದ್ದು ಇದೆಯಂತೆ.

ಯಾಕಂದರೆ, ಇವರ ಖಳನಾಯಕಿ ರೋಲ್‌ಗಳಿಗೆ ಇವರನ್ನು ತೆರೆ ಮೇಲೆ ದ್ವೇಷಿಸುವ ಕಿರುತೆರೆ ಪ್ರೇಕ್ಷಕರು ನಿಜ ಜೀವನದಲ್ಲಿ ಸಿಕ್ಕಾಗಲು ಇವರೊಂದಿಗೆ ಮಾತನಾಡಲು ಹೆದರುತ್ತಾರಂತೆ. ಅಥವಾ ಹಿಡಿ ಹಿಡಿ ಶಾಪವನ್ನು ಹಾಕಿದ್ದು ಉಂಟಂತೆ. ಅಷ್ಟೇ ಅಲ್ಲದೆ ಇವರ ಸ್ನೇಹಿತರು ಇವರೊಂದಿಗೆ ಮಾತನಾಡಲು ಹಿಂದೆ ಮುಂದೆ ನೋಡುತ್ತಿದ್ದರು ಎಂದರೆ ನಂಬಲು ಸಾಧ್ಯವೇ? ಜೊತೆಗೆ ಇಂತಹ ಪಾತ್ರಗಳು ಇವರ ವೈಯಕ್ತಿಕ ಜೀವನಕ್ಕೂ ಒಂದಷ್ಟು ಪರಿಣಾಮ ಬೀರಿದ್ದು ಎಷ್ಟೋ ವರ್ಷಗಳ ಕಾಲ ಈಕೆಗೆ ಮದುವೆ ಪ್ರಸ್ತಾಪಗಳೇ ಬರಲಿಲ್ಲವಂತೆ!

ತೆರೆ ಮೇಲೆ ಕಂಡಂತಹ ಸ್ವಭಾವವೇ ನಿಜವಾದ ಸ್ವಭಾವ ಎಂದು ತಿಳಿದ ಅದೆಷ್ಟೋ ಜನರು ಇವರಿಂದ ದೂರವೇ ಉಳಿದಿದ್ದಾರಂತೆ. ಅಷ್ಟೇ ಅಲ್ಲದೆ ಕೆಟ್ಟ ಕೆಟ್ಟ ಕಾಮೆಂಟ್‌ಗಳು ಸಿಕ್ಕಿದಾಗೆಲ್ಲ ಕೆಟ್ಟ ಕೆಟ್ಟದಾಗಿ ಪ್ರೇಕ್ಷಕರು ಮಾತನಾಡುವಾಗ ಈಕೆಗೆ ಮಾನಸಿಕವಾಗಿಯೂ ಬಹಳಷ್ಟು ಬೇಸರವಾಗುತ್ತಿತ್ತಂತೆ.

ಇಷ್ಟೇ ಅಲ್ಲದೆ ತಾನು ಮಾಡೋ ಪಾತ್ರ ತನಗೇ ಗೊತ್ತಿಲ್ಲದಂತೆ ಒತ್ತಡ ತಂದಿತ್ತು ಎಂದು ನಟಿ ಹೇಳುತ್ತಾರೆ. ಈ ಬಗ್ಗೆ ಮಾತನಾಡಿದ ಅನಿಕ ತನ್ನ ಮೊದಲ ಧಾರಾವಾಹಿ ಕಾದಂಬರಿಯಿಂದ ಹಿಡಿದು ಈಗಿನ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿವರೆಗೂ ಬಹಳಷ್ಟು ಖಳನಾಯಕಿ ಪಾತ್ರಗಳನ್ನು ಮಾಡಿಕೊಂಡು ಬಂದ ನನಗೆ ಇಂತಹ ಪಾತ್ರಗಳು ಮಾನಸಿಕವಾಗಿ ಬಹಳಷ್ಟು ಪರಿಣಾಮ ಉಂಟು ಮಾಡಿತ್ತು. ಶೂಟಿಂಗ್ ಸಮಯದಲ್ಲಿ ಸಹ ನಟರ ಮೇಲೆ ಸಿಟ್ಟು ಮಾಡಿಕೊಂಡಿದ್ದು ಅಥವಾ ಮನೆಗೆ ತೆರಳಿದ ಮೇಲೆ ಮನೆಯವರ ಮೇಲೆ ಕೂಗಾಡಿದ್ದು ಕೂಡಾ ಇದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ: Siddaramaiah : ‘ನಾನೇಕೆ ಬಿದ್ದೆ ಗೊತ್ತೇನ್ರಿ? ಯಾವ ಬಿಸ್ಲಿಗೂ ಜಗ್ಗಲ್ಲ ನಾನು’! ಕುಸಿದು ಬಿದ್ದ ಅಸಲಿ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ!

Leave A Reply

Your email address will not be published.