UIDAI Jobs: ಆಧಾರ್‌ ಸಂಸ್ಥೆಯಲ್ಲಿ ಉದ್ಯೋಗ! ಉತ್ತಮ ಸಂಬಳ ಲಭ್ಯ, ಈ ಕೂಡಲೇ ಅರ್ಜಿ ಸಲ್ಲಿಸಿ!!!

UIDAI Recruitment-2023: ಉದ್ಯೋಗ ಹುಡುಕುವವರಿಗೆ ಸಿಹಿ ಸುದ್ದಿ ಒಂದನ್ನು ನೀಡಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ದಲ್ಲಿ (Unique Identification Authority of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ (UIDAI Recruitment-2023) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ(Bengaluru) ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

 

ಒಟ್ಟು 3 ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಕೌಂಟೆಂಟ್ ಹುದ್ದೆಗಳು ಖಾಲಿ ಇದ್ದು, ಜೂನ್ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಆಸಕ್ತರು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಲು ಮಾಹಿತಿ ನೀಡಲಾಗಿದೆ.

ಹುದ್ದೆಯ ಮಾಹಿತಿ:
ಪ್ರೈವೇಟ್ ಸೆಕ್ರೆಟರಿ- 1
ಅಕೌಂಟೆಂಟ್- 1
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-1

ವಯೋಮಿತಿ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ನಿಗದಿಪಡಿಸಿಲ್ಲ

ಉದ್ಯೋಗದ ಸ್ಥಳ:
ಭುವನೇಶ್ವರ
ಒಡಿಶಾ
ಬೆಂಗಳೂರು

ವಿದ್ಯಾರ್ಹತೆ:
ಕೆಳಗಿನ ನೋಟಿಫಿಕೇಶನ್ ಪರಿಶೀಲಿಸಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/04/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 5, 2023

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಪ್ರೈವೇಟ್ ಸೆಕ್ರೆಟರಿ, ಅಕೌಂಟೆಂಟ್ ಹುದ್ದೆ :
ನಿರ್ದೇಶಕರಿಗೆ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಪ್ರಾದೇಶಿಕ ಕಚೇರಿ, 3 ನೇ ಮಹಡಿ, ದಕ್ಷಿಣ ಭಾಗ, ಖನಿಜ ಭವನ, ನಂ-49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001.

ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಹುದ್ದೆ : ನಿರ್ದೇಶಕರಿಗೆ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಪ್ರಾದೇಶಿಕ ಕಚೇರಿ, 6 ನೇ ಮಹಡಿ, ಈಸ್ಟ್ ಬ್ಲಾಕ್, ಸ್ವರ್ಣ ಜಯಂತಿ ಕಾಂಪ್ಲೆಕ್ಸ್, ಮಾಟ್ರಿವನಂ ಪಕ್ಕದಲ್ಲಿ, ಅಮೀರ್‌ಪೇಟ್ ಹೈದರಾಬಾದ್-500038, ತೆಲಂಗಾಣ ರಾಜ್ಯ.

ಅರ್ಜಿ ಸಲ್ಲಿಕೆಯನ್ನು ಆಫ್​ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಜೂನ್ 5, 2023 ರ ಮೊದಲು ಕಳುಹಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. ನೋಟಿಫಿಕೇಶನ್‌ ಎರಡು ಇಲ್ಲಿದೆ.

 

ಇದನ್ನು ಓದಿ: Madhya Pradesh: ಬ್ಯೂಟಿ ಪಾರ್ಲರ್’ಗೆ ಹೋಗೋದು ಬೇಡ ಎಂದ ಪತಿ, ಪತ್ನಿ ಆತ್ಮಹತ್ಯೆ!

Leave A Reply

Your email address will not be published.