Home Interesting Nita Ambani Richness: ನೀತಾ ಅಂಬಾನಿಯ ಮೇಕಪ್ ಮ್ಯಾನ್ ಪಡ್ಯೋ ಸಂಭಾವನೆ ಕೇಳಿದ್ರೆ ಇನ್ನು ಬೇರೆ...

Nita Ambani Richness: ನೀತಾ ಅಂಬಾನಿಯ ಮೇಕಪ್ ಮ್ಯಾನ್ ಪಡ್ಯೋ ಸಂಭಾವನೆ ಕೇಳಿದ್ರೆ ಇನ್ನು ಬೇರೆ ಉದ್ಯೋಗ ನಾ ಮಾಡಲ್ಲ ಅಂತೀರ !

Nita Ambani Richness
Image source: Newscrab

Hindu neighbor gifts plot of land

Hindu neighbour gifts land to Muslim journalist

Nita Ambani Richness: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಕೇವಲ ಭಾರತ ದೇಶದ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ದೇಶದಾದ್ಯಂತ ಅಲ್ಲದೆ, ಏಷ್ಯಾ ಖಂಡದಲ್ಲಿಯೂ ನಂ.1 ಶ್ರೀಮಂತ ಎಂಬ ಪಟ್ಟವನ್ನು ಅವರು ಪಡೆದುಕೊಂಡಿದ್ದಾರೆ. 6.83 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ ಅಂಬಾನಿ ಕುಟುಂಬ ಐಷಾರಾಮಿ ಜೀವನ ಶೈಲಿಯ ಜೊತೆಗೆ ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಕೂಡ ಹೆಸರು ಪಡೆದಿದ್ದಾರೆ.

ಅಂಬಾನಿಯ ಆಂಟಿಲಿಯಾ ಮನೆ ಇದೀಗ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಈ ಭವ್ಯ ಬಂಗಲೆಯ ವೆಚ್ಚ ಸುಮಾರು 12,000 ಕೋಟಿ ರೂ. ಎನ್ನಲಾಗಿದೆ. ಇನ್ನು ಪತ್ನಿ ನೀತಾ ಅಂಬಾನಿಯ (Nita Ambani richness) ಕೇವಲ ಓರ್ವ ಮೇಕಪ್ ಮ್ಯಾನ್ ಪಡ್ಯೋ ಸಂಭಾವನೆ ಎಷ್ಟು ಗೊತ್ತಾ? ಆತ ಒಂದು ಸಲ ಮಾಡೋ ಮೇಕಪ್ ಗೆ ಎಣಿಸೋ ದುಡ್ಡು ನೋಡಿದ್ರೆ, ನಮಗೆ ನಮ್ಮ ಮೇಲೇ ಬೇಸರ ಬರೋದು ಸಹಜ.

ಪ್ರತಿ ಕಾರ್ಯಕ್ರಮದಲ್ಲೂ ನೀತಾ ಅಂಬಾನಿ ತನ್ನ 60ನೇ ವಯಸ್ಸಿಗೆ ಸುಂದರಿ ಯುವತಿಯಂತೆ ಕಾಣುತ್ತಾರೆ. ಅವರ ಮುಖ ಹೊಳೆಯುತ್ತಿರುತ್ತದೆ. ಇದಕ್ಕೆ ಕಾರಣ ನೀತಾ ಅಂಬಾನಿಯ ಮೇಕಪ್ ಮ್ಯಾನ್. ಆತನ ಕೈಚಳಕದಿಂದ ನೀತಾ ಅಂಬಾನಿ ಮುಖ ಯುವತಿಯಂತೆ ಕಾಣುತ್ತದೆ. ಯಾರು ಆತ? ಆತ ಪಡೆಯುವ ಸಂಭಾವನೆ ಎಷ್ಟು?

ಭಾರತದಲ್ಲಿನ ಜನಪ್ರಿಯ ಮೇಕಪ್ ಕಲಾವಿದರಾದ ಮಿಕ್ಕಿ ಕಂಟ್ರಾಕ್ಟರ್ (Mickey Contractor) ನೀತಾ ಅಂಬಾನಿಯ ಮೇಕಪ್ ಮ್ಯಾನ್. ಈತನ ಸಂಭಾವನೆ ತಿಳಿದರೆ ಬೆರಗಾಗ್ತೀರಾ!! ಹೌದು, ಸಾಕಷ್ಟು ಬಾಲಿವುಡ್ ನಟ ನಟಿಯರಿಗೆ ಇವರೇ ಮೇಕಪ್ ಮ್ಯಾನ್. ಮಿಕ್ಕಿ ಒಬ್ಬರಿಗೆ ಮೇಕಪ್ (makeup) ಮಾಡಲು 75,000 ರಿಂದ 1 ಲಕ್ಷ ರೂ. ಪಡೆಯುತ್ತಾರೆ. ಇವರು ಭಾರತದ ಅತ್ಯಂತ ದುಬಾರಿ ಮೇಕಪ್ ಕಲಾವಿದರಾಗಿದ್ದು, ತಿಂಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಾರೆ ಎನ್ನಲಾಗಿದೆ.

ಅಂಬಾನಿ ವಿಶೇಷ ಸರ್ಟಿಫೈಡ್ ಚೆಫ್ ಅನ್ನು ತಮ್ಮ ಮನೆಯ ಅಡುಗೆ ಬಟ್ಟನಾಗಿ (chef) ನೇಮಿಸಿದ್ದಾರೆ. ನೀವೇನಾದರೂ ಇವನು ಪಡೆಯೋ ಸಂಬಳ ಕೇಳಿದ್ರೆ, ಬೇರೆ ಕಡೆ ಮಾಡುತ್ತಿರುವ ನೌಕರಿ ತೊರೆದು ಅಲ್ಲಿಗೆ ಹೋಗಿ ಅಡುಗೆ ಮನೆ ಸೇರಿಕೊಳ್ಳೋಣ ಎನಿಸಬಹುದು. ಯಾಕೆಂದ್ರೆ ಈತ ಕೇವಲ ಅಡುಗೆ ಮಾಡುವುದಕ್ಕಾಗಿ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಾವನೆಯನ್ನು ತೆಗೆದುಕೊಳ್ಳುತ್ತಾನಂತೆ. ಈ ಲೆಕ್ಕಚಾರದಲ್ಲಿ ನೋಡಿದರೆ ವರ್ಷಕ್ಕೆ 24 ಲಕ್ಷ ಸಂಭಾವನೆಯನ್ನು ಆತ ಪಡೆಯುತ್ತಾನೆ.

ನೀತಾ ಅಂಬಾನಿಯವರ ದುಬಾರಿ ಹ್ಯಾಂಡ್‌ಬ್ಯಾಗ್‌ (hand bag) ಸಂಗ್ರಹವನ್ನು ನೋಡಿದ್ರೆ ನಿಮಗೂ ಶಾಕ್ ಆಗೋದು ಪಕ್ಕಾ!!. ನೀತಾ ಅವರ ಒಂದು ಹ್ಯಾಂಡ್‌ಬ್ಯಾಗ್‌ ಬೆಲೆ ಸರಾಸರಿ 5 ಲಕ್ಷ ಅಥವಾ ಅದಕ್ಕಿಂತ (Nita Ambani hand bag price) ಹೆಚ್ಚಿದೆ ಎನ್ನಲಾಗಿದೆ. ಅಲ್ಲದೆ, ನೀತಾ ಅಂಬಾನಿ ಪ್ರಪಂಚದ ಅತ್ಯಂತ ದುಬಾರಿ ಸೀರೆಗಳನ್ನು (Nita ambani saree collections) ಧರಿಸುತ್ತಾರೆ. 100 ಕೋಟಿ ರೂಪಾಯಿ ಮೌಲ್ಯದ ನೈಜ ಡೈಮಂಡ್ ನೆಕ್ಲೇಸ್ ಗಳನ್ನು ಧರಿಸುತ್ತಾರೆ.

ಇದನ್ನೂ ಓದಿ: ನಟಿ ‘ಆರತಿ’ ತಟ್ಟೆಗೆ ಕೈ ಹಾಕಿ, ಕೈ ಸುಟ್ಟುಕೊಂಡ ಮಹನೀಯರು ಯಾರೆಲ್ಲ, ಹದ್ದಾದ ಗಿಣಿ ಯಾರನ್ನೆಲ್ಲಾ ಕುಕ್ಕಿತು ಗೊತ್ತಾ ?!