Home Breaking Entertainment News Kannada Prabhu deva: ಮೊದಲ ಬಾರಿ 2ನೇ​ ಪತ್ನಿಯೊಡನೆ ಕಾಣಿಸಿಕೊಂಡ ಇಂಡಿಯನ್ ಮೈಕಲ್ ಜಾಕ್ಸನ್! ಇವರೇ ನೋಡಿ...

Prabhu deva: ಮೊದಲ ಬಾರಿ 2ನೇ​ ಪತ್ನಿಯೊಡನೆ ಕಾಣಿಸಿಕೊಂಡ ಇಂಡಿಯನ್ ಮೈಕಲ್ ಜಾಕ್ಸನ್! ಇವರೇ ನೋಡಿ ಪ್ರಭುದೇವರ ಎರಡನೇ ಪತ್ನಿ!

Prabhu deva
Image source- Kannada news- News 18

Hindu neighbor gifts plot of land

Hindu neighbour gifts land to Muslim journalist

Prabhu deva: ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ (Prabhu deva) ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೊರೋನಾ ವೇಳೆ ಪ್ರಭುದೇವ್ ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಸೀಕ್ರೆಟ್​ ಆಗಿ ಮತ್ತೊಂದು ಮದುವೆ ಆಗಿದ್ದರು. ಆದರೆ ಆ ಎರಡನೆ ಪತ್ನಿಯೊಂದಿಗೆ ಅವರು ಎಲ್ಲೂ ಸಾರ್ವಜನಿಕವಾಗಿ ಕಂಡಿರಲಿಲ್ಲ. ಆದರೀಗ ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಕನ್ನಡದ ಪ್ರತಿಭೆ ಸ್ಟಾರ್ ನಟ ಪ್ರಭುದೇವ ಅವರು ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ರಂಗದಲ್ಲಿ ಅದೆಷ್ಟೇ ನೇಮು ಫೇಮು ಇದ್ದರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡಿರಲಿಲ್ಲ. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಪ್ರಭುದೇವ ಅವರ 2ನೇ ಮದುವೆ ಬಗ್ಗೆ ರಿವೀಲ್ ಆಗಿತ್ತು. ಇದೀಗ, ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ಚಿತ್ರರಂಗದಲ್ಲಿ ನೃತ್ಯ ಸಂಯೋಜಕನಾಗಿ, ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪ್ರಭುದೇವ ವಿವಾಹ ಬಂಧನಕ್ಕೆ ಒಳಗಾಗಿದ್ದು 1995ರಲ್ಲಿ. ರಾಮ್‌ಲತ್ (ಲತಾ) ಎಂಬುವರನ್ನ 1995ರಲ್ಲಿ ಪ್ರಭುದೇವ ಮದುವೆಯಾದರು. ರಾಮ್‌ಲತ್ ಮತ್ತು ಪ್ರಭುದೇವ ದಂಪತಿಗೆ ಮೂವರು ಮಕ್ಕಳು. ಆದರೆ ಮೊದಲ ಮಗ ವಿಶಾಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. 2011ರಲ್ಲಿ ರಾಮ್‌ಲತ್ ಮತ್ತು ಪ್ರಭುದೇವ ವಿಚ್ಛೇದನ ಪಡೆದರು. ಇದಾದ ಮೇಲೆ ಈ ಖ್ಯಾತ ನಟನ ಪರ್ಸನಲ್​ ಲೈಫ್​ ಬಗ್ಗೆ ಅಭಿಮಾನಿಗಳಿಗೆ ಯಾವತ್ತೂ ಆಸಕ್ತಿ ಇದ್ದೇ ಇತ್ತು. ನಂತರ ಇವರು, ಹಿಮಾನಿ ಸಿಂಗ್ (Himani Singh) ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು.

ಇದುವರೆಗೂ ತಮ್ಮ ಎರಡನೇ ಹೆಂಡತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಪ್ರಭುದೇವ್ ಅವರು ಇದೀಗ ಪತ್ನಿ ಸಮೇತರಾಗಿ ಮೊದಲ ಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ (Balaji Temple) ಭೇಟಿ ಕೊಟ್ಟಿದ್ದಾರೆ. ವೈರಲ್ ಆದ ಫೋಟೋ ಕೂಡ ಇಲ್ಲಿಯದೇ ಆಗಿದೆ. ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹೋಗಿದ್ದ ಫೋಟೋ ವೈರಲ್​ ಆಗಿದೆ. ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷತೆಗಾಗಿ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಪ್ರಭುದೇವ ಅವರ ಎರಡನೇ ಮದುವೆ ಬಗ್ಗೆ ಅವರ ಅಣ್ಣನೇ ಮೊದಲ ಬಾರಿಗೆ ಮಾಹಿತಿ ಕೊಟ್ಟಿದ್ದರು. ರಾಜಾ ಸುಂದರಂ ಅವರು ತಮ್ಮನ ಎರಡನೇ ಮದುವೆ ಬಗ್ಗೆ ಮಾತನಾಡಿ ಅದನ್ನು ದೃಢಪಡಿಸಿದ್ದರು. ಸಂದರ್ಶನವೊಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು.

ಪ್ರಭುದೇವ ಅವರು ಕೊನೆಯಬಾರಿಗೆ ಭಗೀರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಆಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಆದರೆ ಸಿನಿಮಾ ನಿರೀಕ್ಷಿಸಿದ ಮಟ್ಟಿಗೆ ಸಕ್ಸಸ್ ಆಗಲಿಲ್ಲ. ಆದರೆ ನಟ ತನ್ನ ಸಿನಿಮಾ ಕೆರಿಯರ್​ನಲ್ಲಿಯೇ ಮೊದಲ ಬಾರಿಗೆ ಮೂವಿಗಾಗಿ ತಲೆ ಬೋಳಿಸಿಕೊಂಡು ಸುದ್ಧಿಯಾಗಿದ್ದರು.

 

ಇದನ್ನು ಓದಿ: Samantha: ಇಲ್ಲಿವೆ ನೋಡಿ ಟಾಲಿವುಡ್ ಬ್ಯೂಟಿ ಸಮಂತಾ ರಿಸ್ಕ್ ತಗೊಂಡು ಮಾಡಿದ ಸಿನಿಮಾಗಳು! ಅಷ್ಟಕ್ಕೂ ಸ್ಯಾಮ್ ತಗೊಂಡ ರಿಸ್ಕ್ ಏನು?