Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ!

Post Office Scheme: ಕಿಸಾನ್ ವಿಕಾಸ್ ಪತ್ರ ಅಥವಾ KVP ಭಾರತ ಸರ್ಕಾರವು ಉತ್ತೇಜಿಸಿದ ಸಣ್ಣ ಉಳಿತಾಯ ಸಾಧನಗಳಲ್ಲಿ ಒಂದಾಗಿದೆ. ದೀರ್ಘಾವಧಿಯ ಅವಧಿಗೆ ಸಣ್ಣ ಪ್ರಮಾಣದ ಉಳಿತಾಯವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜೊತೆಗೆ ಹೂಡಿಕೆಯ ಅವಧಿಯಲ್ಲಿ ಹೂಡಿಕೆಯನ್ನು ದ್ವಿಗುಣಗೊಳಿಸುವುದು ಕಿಸಾನ್ ವಿಕಾಸ್ ಪತ್ರದ ಉದ್ದೇಶವಾಗಿದೆ. ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆಯಾದ (Post Office Scheme) ‘ಕಿಸಾನ್ ವಿಕಾಸ್ ಪತ್ರ’ವು ಗ್ಯಾರಂಟಿಯೊಂದಿಗೆ ಹಣ ದ್ವಿಗುಣಗೊಳಿಸುವ ಏಕೈಕ ಸರ್ಕಾರಿ ಯೋಜನೆಯಾಗಿದೆ.

 

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನೀವು ಕನಿಷ್ಠ 1,000 ರೂ.ಗಳಿಂದ ಹೂಡಿಕೆ ಮಾಡಬಹುದು. ಇದರಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಪ್ರಸ್ತುತ ‘ಕಿಸಾನ್ ವಿಕಾಸ್ ಪತ್ರ’ಕ್ಕೆ ಶೇ.7.5ರ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಇದರ ಮೇಲಿನ ಬಡ್ಡಿಯನ್ನು ಸಂಯುಕ್ತ ರೂಪದಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಯೋಜನೆಯಡಿ ನೀವು 100 ರೂ. ರಂತೆ ಹೂಡಿಕೆ ಮಾಡಬೇಕು. ಪೋಸ್ಟ್ ಆಫೀಸ್ ಪ್ರಕಾರ ಈ ಸಮಯದಲ್ಲಿ ಲಭ್ಯವಿರುವ ಬಡ್ಡಿದರದ ಪ್ರಕಾರ ಹೂಡಿಕೆದಾರರ ಹಣವು 115 ತಿಂಗಳುಗಳಲ್ಲಿ ಅಂದರೆ 9 ವರ್ಷ ಮತ್ತು 7 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಅದಲ್ಲದೆ ಯಾವುದೇ ವ್ಯಕ್ತಿ ಕೆವಿಪಿ ಕಿಸಾನ್ ವಿಕಾಸ್ ಪತ್ರವನ್ನು ಎಷ್ಟಾದರೂ ಖರೀದಿಸಬಹುದು . ನೀವು KVP ಪ್ರಮಾಣಪತ್ರಗಳನ್ನು ಸಣ್ಣ ಮೊತ್ತಕ್ಕೆ ಖರೀದಿಸಬಹುದು. ಏಕೆಂದರೆ ಅಗತ್ಯವಿದ್ದಲ್ಲಿ ಅವುಗಳನ್ನು ಅಕಾಲಿಕವಾಗಿ ಪಡೆದುಕೊಳ್ಳಲು ಸುಲಭವಾಗುತ್ತದೆ. ಇದರಲ್ಲಿ ಕೆವಿಪಿಯನ್ನು 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಲ್ಲೂ ಹೂಡಿಕೆ ಮಾಡಬಹುದು.

ಒಂದು ವೇಳೆ ಹಣದ ಅವಶ್ಯಕತೆ ಇದ್ದಲ್ಲಿ ಈ ಪ್ರಮಾಣ ಪತ್ರಗಳನ್ನೂ ಅಡಮಾನ ಇಡಬಹುದು. KVPಯ ಬಡ್ಡಿ ಪ್ರತಿ 3 ತಿಂಗಳಿಗೊಮ್ಮೆ ಬದಲಾಗುತ್ತದೆ, ಆದರೆ ಹೂಡಿಕೆದಾರರು ಅವುಗಳನ್ನು ಖರೀದಿಸಿದಾಗ ಆ ಸಮಯದಲ್ಲಿನ ಬಡ್ಡಿಯು ಮುಕ್ತಾಯದವರೆಗೆ ಲಭ್ಯವಿರುತ್ತದೆ.

ಪೋಸ್ಟ್ ಆಫೀಸ್ ನ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಡಬಲ್ ಹಣ ಮರಳಿ ಪಡೆಯುತ್ತೀರಿ. ನಿಮ್ಮ ಹತ್ತಿರದ ಅಂಚೆ ಕಚೇರಿಯಿಂದ ನೀವು ಕಿಸಾನ್ ವಿಕಾಸ್ ಪತ್ರವನ್ನು (KVP) ಖರೀದಿಸಬಹುದು. ಒಟ್ಟಿನಲ್ಲಿ ಕಡಿಮೆ-ಅಪಾಯದ ಉಳಿತಾಯದ ಆಯ್ಕೆಯಾಗಿರುವುದರಿಂದ, ಹೆಚ್ಚುವರಿ ಹಣವನ್ನು ಹೊಂದಿರುವ ಅಪಾಯ-ವಿರೋಧಿ ವ್ಯಕ್ತಿಗಳು ತಮ್ಮ ಹಣವನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲು ಈ ಯೋಜನೆ ಸೂಕ್ತವಾಗಿದೆ.

 

ಇದನ್ನು ಓದಿ: Narendra Modi: ಮೋದಿಗೆ ಕಾಂಗ್ರೆಸ್ ನಾಯಕರು ಎಷ್ಟು ಸಲ ಅವಾಚ್ಯ ಬೈಗುಳ ನೀಡಿದ್ದಾರೆ ಗೊತ್ತಾ ? ಲೆಕ್ಕ ಬಿಚ್ಚಿಟ್ಟ ಜಾಗತಿಕ ನಾಯಕ ! 

Leave A Reply

Your email address will not be published.