Narendra Modi: ಮೋದಿಗೆ ಕಾಂಗ್ರೆಸ್ ನಾಯಕರು ಎಷ್ಟು ಸಲ ಅವಾಚ್ಯ ಬೈಗುಳ ನೀಡಿದ್ದಾರೆ ಗೊತ್ತಾ ? ಲೆಕ್ಕ ಬಿಚ್ಚಿಟ್ಟ ಜಾಗತಿಕ ನಾಯಕ !
Narendra Modi: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕಾಂಗ್ರೆಸ್ ನಾಯಕರು ಬೈಗುಳ, ಟೀಕೆ ಮಾಡಿದ್ದು, ಇದೀಗ ಈ ಬಗ್ಗೆ ಮೋದಿ ಮಾತನಾಡಿದ್ದಾರೆ. ಟೀಕೆ ಮಾಡಿದ ಎಲ್ಲರಿಗೂ ಪ್ರತಿಯಾಗಿ ಉತ್ತರಿಸಿದ್ದಾರೆ. ಅಷ್ಟಕ್ಕೂ ಮೋದಿಗೆ ಕಾಂಗ್ರೆಸ್ ನಾಯಕರು ಎಷ್ಟು ಸಲ ಅವಾಚ್ಯ ಬೈಗುಳ ನೀಡಿದ್ದಾರೆ ಗೊತ್ತಾ ? ನೀವು ಬೆಚ್ಚಿ ಬೀಳ್ತೀರಾ!!. ಇದೇನು ಇಷ್ಟು ಸಲ ಬೈದಿದ್ದಾರೆ ಎಂದು.
ಹೌದು, ಕಾಂಗ್ರೆಸ್ (Congress) ಪಕ್ಷದ ನಾಯಕರು ಮೋದಿಗೆ 91 ಬಾರಿ ಬೈದಿದ್ದಾರಂತೆ ಹಾಗಂತ ಸ್ವತಃ ಮೋದಿಯವರು ಹೇಳಿದ್ದಾರೆ ಎಂದು ತಿಳಿಸಲಾಗಿದೆ. ವಿಧಾನಸಭಾ ಚುನಾವಣೆ (Election 2023) ಹಿನ್ನೆಲೆ ಬೀದರ್ ಜಿಲ್ಲೆ ಹುಮ್ನಾಬಾದ್‌ನಲ್ಲಿ ಬಿಜೆಪಿ ಬೃಹತ್ ರ್ಯಾಲಿ ನಡೆಸಿದ್ದು, ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಜೆಡಿಎಸ್ (Jds) ವಿರುದ್ಧ ಕಿಡಿಕಾರಿದ್ದು, ವಾಗ್ದಾಳಿ ನಡೆಸಿದರು.
“ಹಿಂದಿನ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರಗಳು ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ (kisan yojana) ಫಲಾನುಭವಿಗಳ ಪಟ್ಟಿಯನ್ನು ಕಳಿಸಿರಲಿಲ್ಲ. ಯಾಕಂದ್ರೆ ಇದರಲ್ಲಿ ಹಣ ಲೂಟಿ ಮಾಡಲು ಆಗುವುದಿಲ್ಲ ಎಂದು ಸುಮ್ಮನಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಲಕ್ಷಾಂತರ ರೈತರ ಖಾತೆಗೆ ಹಣ ಪಾವತಿ ಮಾಡಲಾಗಿದೆ. ರೈತರಿಗೆ ಆರ್ಥಿಕ ಬೆಂಬಲ ನೀಡಿದೆ. ಚುನಾವಣೆಯ ವೇಳೆ ಕಾಂಗ್ರೆಸ್ಸಿಗರು ಸಾಲ ಮನ್ನಾ ಹೆಸರಲ್ಲಿ ನಾಟಕವಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ ಆಗಿಲ್ಲ ” ಎಂದರು.
“ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಗಳ ಹಿನ್ನೆಲೆ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಮೋದಿ, ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ತೀವ್ರತರವಾದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಘಟಾನುಘಟಿ ನಾಯಕರು 91 ಬಾರಿ ಬೈಗುಳ ನಡೆಸಿದ್ದಾರೆ. ಈ ಬಾರಿಯ ಚುನಾವಣೆಯು ಕೇವಲ 5 ವರ್ಷದ ಸರ್ಕಾರ ರಚಿಸಲು ನಡೆದಿರುವ ಚುನಾವಣೆ ಅಲ್ಲ. ದೇಶದಲ್ಲೇ ಕರ್ನಾಟಕವನ್ನು (Karnataka) ನಂಬರ್ 1 ರಾಜ್ಯ ಮಾಡುವ ಚುನಾವಣೆ. ನಂಬರ್ 1 ರಾಜ್ಯ ಮಾಡಲು ಡಬಲ್ ಎಂಜಿನ್ ಸರ್ಕಾರದ ಅವಶ್ಯಕವಿದೆ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.