Home Remedies: ಹಳದಿ ಹಲ್ಲಿನ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಹೋಗಲಾಡಿಸಿ, ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ!

Yellow Teeth: ಹಲ್ಲುಗಳು ಕೂಡ ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಬಿಳಿ ಹೊಳೆಯುವ ಹಲ್ಲುಗಳು ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುವುದರ ಜೊತೆಗೆ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಹಲ್ಲುಗಳ ಪಾತ್ರ ಪ್ರಮುಖವಾಗಿದೆ.

ಮುಖದಲ್ಲಿ ಮಂದಹಾಸ ಬಿರುವಾಗ ಮೆಲ್ಲಗೆ ಇಣುಕುವ ಹಲ್ಲುಗಳು ನೋಡಲು ಚೆನ್ನಾಗಿರಬೇಕು ಮತ್ತು ಆರೋಗ್ಯವಾಗಿ ಇರಬೇಕು ತಾನೇ. ಹೌದು, ಹಲ್ಲು ಹುಳುಕು ಮತ್ತು ಹಳದಿ ಬಣ್ಣ (Yellow Teeth) ಇದ್ದಾಗ ನಮಗೆ ಮಾತನಾಡಲು ಬಿಡಿ ಮುಗುಳ್ನಗೆ ಬೀರಲು ಸಹ ಮುಜುಗರ ಆಗುತ್ತದೆ . ಕೆಲವರು ಬಿಳಿ ಹಳ್ಳುಗಳನ್ನು ಹೊಂದಲು ಹಲವು ಪ್ರಯತ್ನ ಸಹ ಮಾಡುವುದು ಉಂಟು. ಸದ್ಯ ನಿಮ್ಮ ಹಲ್ಲು ಶುಭ್ರವಾಗಿ ಮುತ್ತಿನಂತ ಹೊಳಪು ಪಡೆಯಲು( Teeth home remedies) ಈ ಕೆಳಗಿನ ಸಲಹೆ ಖಂಡಿತವಾಗಲು ಅನುಸರಿಸಿ.

ಬಾಯಿಯಲ್ಲಿ ಇರುವ ಹಲ್ಲುಗಳ ಬಗ್ಗೆ ನಾವು ಪ್ರತಿನಿತ್ಯವೂ ಎರಡು ಬಾರಿ ಹಲ್ಲುಜ್ಜಿ ಕಾಳಜಿ ವಹಿಸುತ್ತೇವೆ ಎಂದರೆ ಸಾಕಾಗುವುದಿಲ್ಲ . ಇದರ ಜೊತೆಗೆ ಈ ಕ್ರಮ ಅನುಸರಿಸಿ.

ವಿನೆಗರ್:
ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ವಿನೆಗರ್ ಅನ್ನು ಸಹ ಬಳಸಬಹುದು. ಒಂದು ಲೋಟ ನೀರಿನಲ್ಲಿ ಸ್ವಲ್ಪ ವಿನೆಗರ್ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತದೆ ಮತ್ತು ಮುತ್ತಿನಂತೆ ಹೊಳೆಯುತ್ತದೆ.

ಬಾಳೆಹಣ್ಣಿನ ಸಿಪ್ಪೆ :
ಹಲ್ಲುಗಳನ್ನು ಬಾಳೆಹಣ್ಣಿನ ಸಿಪ್ಪೆಗಳಿಂದ ಬಿಳಿಯಾಗಿಸಿಕೊಳ್ಳಬಹುದು. ಒಂದೆರಡು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ಉಜ್ಜಿ ಆನಂತರ 15 ನಿಮಿಷ ಕಳೆದ ಮೇಲೆ ಸಾಧಾರಣ ಟೂಥ್ ಪೇಸ್ಟ್ ನಿಂದ ಹಲ್ಲು ಉಜ್ಜಿದರೆ ಸಾಕು. ಎರಡರಿಂದ ಮೂರು ಬಾರಿ ವಾರದಲ್ಲಿ ಹೀಗೆ ಮಾಡಿ ಹಲ್ಲುಗಳನ್ನು ಕೆಲವು ವಾರದಲ್ಲಿ ಬಿಳಿಯಾಗಿಸಬಹುದು.

ಕಿತ್ತಳೆ ಸಿಪ್ಪೆ :
ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಸುಮಾರು 2 ನಿಮಿಷಗಳ ಕಾಲ ಅದನ್ನು ಉಜ್ಜಿಕೊಳ್ಳಿ, ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ತೊಳೆದು ಹಲ್ಲುಜ್ಜಿಕೊಳ್ಳಿ. ಇದು ಬಿಳಿ ಹಲ್ಲುಗಳಿಗೆ ಸಹಾಯವಾಗುತ್ತದೆ.

ನಿಂಬೆ ಸಿಪ್ಪೆ :
ಹಳದಿ ಹಲ್ಲುಗಳ ಸಮಸ್ಯೆ ಇದ್ದವರು ನಿಂಬೆ ಸಿಪ್ಪೆಯನ್ನು ಹಲ್ಲುಗಳ ಮೇಲೆ ಉಜ್ಜಬೇಕು. ವಾರದಲ್ಲಿ 2 ದಿನ ಈ ಟಿಪ್ಸ್ ಫಾಲೋ ಮಾಡಿದರೆ ಸಾಕು ನಿಮ್ಮ ಹಲ್ಲುಗಳು ತುಂಬಾ ಹೊಳೆಯುತ್ತವೆ.

ಬೇವಿನ ಕಡ್ಡಿ:
ಹಲ್ಲಿನ ಹಳದಿ ಬಣ್ಣವನ್ನು ತೆಗೆದುಹಾಕುವಲ್ಲಿ ಬೇವಿನ ಕಡ್ಡಿಗಳು ಸಹಾಯ ಮಾಡುತ್ತದೆ . ಬ್ರಷ್ ಬದಲು ಈ ಕಡ್ಡಿಗಳನ್ನು ಬಳಸಿದರೆ ಹಲ್ಲುಗಳು ಬೇಗ ಸ್ವಚ್ಛವಾಗಿ ಹೊಳೆಯುತ್ತವೆ.

ಶುಂಠಿ ಮತ್ತು ಉಪ್ಪು:
ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸಲು ಉಗುರುಬೆಚ್ಚಗಿನ ನೀರಿನಲ್ಲಿ ಶುಂಠಿ ಮತ್ತು ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸುವುದರಿಂದಲೂ ಸಾಧ್ಯವಾಗುತ್ತದೆ. ಜೊತೆಗೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.

ಸ್ಟ್ರಾಬೆರಿ ಮತ್ತು ಉಪ್ಪು:
ಹಳದಿ ಹಲ್ಲುಗಳ ಸಮಸ್ಯೆಯಿರುವವರು, ಸ್ಟ್ರಾಬೆರಿ ಮತ್ತು ಉಪ್ಪನ್ನು ಒಟ್ಟಿಗೆ ಮ್ಯಾಶ್ ಮಾಡಿ ಬ್ರಶ್ ಸಹಾಯದಿಂದ ಹಲ್ಲುಗಳ ಮೇಲೆ ಹಚ್ಚಬೇಕು. ನಂತರ ಹಲ್ಲುಜ್ಜಬೇಕು.

ತೆಂಗಿನ ಎಣ್ಣೆ :
ತೆಂಗಿನ ಎಣ್ಣೆಯಲ್ಲಿ ಚೆನ್ನಾಗಿ ಬಾಯಿ ಮುಕ್ಕಳಿಸಿ ನಂತರ ಪೇಸ್ಟ್ ಹಚ್ಚಿ ಹಲ್ಲುಜ್ಜಿದಾಗ ಹಲ್ಲಿನಲ್ಲಿ ಸಿಲುಕಿಕೊಂಡ ಜಿಡ್ದುಗಳು ಮಾಯವಾಗಲು ಸಹಾಯ ಮಾಡುತ್ತದೆ. ಜೊತೆಗೆ ಹಲ್ಲುಗಳು ಹೊಳಪನ್ನು ಪಡೆಯಲು ಸಹಾಯವಾಗುತ್ತದೆ.

ಇದನ್ನೂ ಓದಿ: Hair care: ನಿಮ್ಮ ಕೂದಲಿಗೆ ಎಣ್ಣೆ ಹಚ್ಚುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ

Leave A Reply

Your email address will not be published.