Mastigudi Accident: ಹೆಲಿಕಾಪ್ಟರ್’ನಿಂದ ನೀರಿಗೆ ಜಿಗಿದು ನಟರ ಸಾವಿಗೆ ಅವರೇ ಕಾರಣ, ಅವರು ಈಜು ಬರ್ತಿತ್ತು ಎಂದು ಹೇಳಿದ್ದರು – ಕೋರ್ಟ್ ಮುಂದೆ ವಕೀಲರ ವಾದ !

Mastigudi : ನಟ ದುನಿಯಾ ವಿಜಯ್ (Duniya Vijay) ನಟನೆಯ ಮಾಸ್ತಿಗುಡಿ (Mastigudi) ಚಿತ್ರದ ಸಾಹಸ ಸನ್ನಿವೇಶ ಶೂಟಿಂಗ್ ಸಂದರ್ಭದಲ್ಲಿ ಖಳ ನಟರಾದ ಉದಯ್ (Uday) ಮತ್ತು ಅನಿಲ್ (Anil)  emba ಇಬ್ಬರು ನೀರಿಗೆ ಬಿದ್ದು ಮರಣವನ್ನಪ್ಪಿದ್ದರು. ಈ ಸಾವಿನ ಪ್ರಕರಣದ ವಿಚಾರಣೆ ಬೆಂಗಳೂರು ನಗರದ 9 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ನಡೆಸಿದೆ. ಈ ಸಂದರ್ಭದಲ್ಲಿ ಆಪಾದಿತ ಸಾಹಸ ನಿರ್ದೇಶಕ ರವಿವರ್ಮ (Ravi Varma)  ಪರ ವಕೀಲರು ಕೆಲವು ವಿಷಯವನ್ನು ಹೇಳಿದ್ದಾರೆ.

Mastigudi Fight master Ravivarma lawer says that actors are sole responsible tor their death.as it was an accident.

ಅಂದು 2016ರ ನವೆಂಬರ್ 7 ರಂದು ನಡೆದ ಅವಘಡದಲ್ಲಿ ಸಾಹಸ ನಿರ್ದೇಶಕ ರವಿವರ್ಮ ವಿರುದ್ಧ ಕೊಲೆಯ ಪ್ರಕರಣ ದಾಖಲಾಗಿತ್ತು. ಅವರೂ ಸೇರಿದಂತೆ ಹಲವರ ಮೇಲೆ ಅಂದು ಎಫ್.ಐ.ಆರ್ ದಾಖಲಾಗಿತ್ತು. ಈಗ ರವಿವರ್ಮ ವಿಚಾರಣೆ ವೇಳೆ ರವಿವರ್ಮ ಪರ ವಕೀಲರಾದ ಸಿ.ಎಚ್. ಹನುಮಂತರಾಯ ವಾದ ಮಂಡಿಸಿದ್ದು, ಆ ನಟರ ಸಾವಿಗೆ ಅವರೇ ಕಾರಣ ಎಂದಿದ್ದಾರೆ. ” ಅದೊಂದು ಆಕಸ್ಮಿಕ ಸಾವು. ತಮ್ಮದೇಹದ ಸಿಕ್ಸ್ ಪ್ಯಾಕ್ ತೋರಿಸಲು ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಅಭಿಮಾನಿಗಳು ನೋಡಲಿ ಎನ್ನುವುದಕ್ಕಾಗಿ ಅವರು ಸೇಫ್ಟಿ ಜಾಕೆಟ್ ಧರಿಸಲು ಒಪ್ಪಲಿಲ್ಲ. ಅಲ್ಲದೆ ತಮಗೆ ಈಜು ಬರುತ್ತದೆ ಎಂದೂ ಅವರು ಹೇಳಿದ್ದರು ” ಎಂದು ಕೋರ್ಟಿಗೆ ಹೇಳಿದ್ದಾರೆ ವಕೀಲರು.

ಘಟನೆ ನಡೆದು ಪೊಲೀಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮೇಲೆ ತಿಳಿಸಿದ ಎಲ್ಲವನ್ನೂ ಉಲ್ಲೇಖಿಸಲಾಗಿದೆ ಎಂದ ವಕೀಲರು, ಆ ಇಬ್ಬರು ನಟರ ಒಪ್ಪಿಗೆ ಪಡೆದುಕೊಂಡೇ ಹೆಲಿಕಾಫ್ಟರ್ ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ಮಾಡಿಸಲಾಯಿತು. ಹಾಗಾಗಿ ಇದನ್ನು ಆಕಸ್ಮಿಕ ಘಟನೆ ಎಂದು ಭಾವಿಸಬೇಕು ಎಂದು ಖ್ಯಾತ ಕ್ರಿಮಿನಲ್ ವಕೀಲ ಸಿ.ಎಚ್.ಹನುಮಂತರಾಯ ಅವರು ಮನವಿ ಮಾಡಿಕೊಂಡಿದ್ದಾರೆ. ವಕೀಲರ ವಾದ ಆಲಿಸಿದ ನ್ಯಾಯಾಮೂರ್ತಿಗಳಾದ ಎಸ್. ಶ್ರೀಧರ್ ಅವರು ಹೆಚ್ಚಿನ ವಾದ ಮಂಡನೆಗೆ ಮತ್ತು ವಿಚಾರಣೆಗೆ ಮೇ 30 ಕ್ಕೆ ವಿಚಾರಣೆ ನಿಗದಿಪಡಿಸಿದ್ದಾರೆ.

ಘಟನೆಯ ಸಂಕ್ಷಿಪ್ತ ವಿವರ

ಅವತ್ತು 2016 ರ ನವೆಂಬರ್ 7. ಅಂದು ದುನಿಯಾ ವಿಜಿ ನಾಯಕತ್ವದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಮೊದಲೇ ನಿರ್ಧರಿಸಿದಂತೆ  ಹೆಲಿಕಾಪ್ಟರ್ ನಿಂದ ಬರುವ ಪ್ರತಿಭಾನ್ವಿತ ಖಳನಟನಾದ ಅನಿಲ್ ಮತ್ತು ಉದಯ್ ಹೆಲಿಕಾಪ್ಟರ್ ನ ಬಾಗಿಲು ತೆಗೆದು ಜಲಾಶಯಕ್ಕೆ ಹಾರುವ ಸೀನ್ ಕ್ರಿಯೇಟ್ ಮಾಡಲಾಗಿತ್ತು. ಅದರಂತೆ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಅನಿಲ್ ಮತ್ತು ಉದಯ್ ಧುಮುಕಿದ್ದರು. ಹಾಗೆ ಮೇಲಿನಿಂದ ಧುಮುಕುವಾಗ ಯಾವುದೇ ಜೀವ ರಕ್ಷಕ ಜಾಕೆಟ್ ಧರಿಸದೆ ಸಿಕ್ಸ್ ಪ್ಯಾಕ್ ತೋರಲು ಬರಿಯ ಮೇಲೆ ನೀರಿಗೆ ಹಾರಿದ್ದರು. ಅವರು ನೀರಿಗೆ ಧುಮುಕಿದ ನಂತರ ಅವರನ್ನು ರಕ್ಷಿಸಲು ಬೋಟ್ ಒಂದನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಇಬ್ಬರೊಂದಿಗೆ ದುನಿಯಾ ವಿಜಯ್ ಕೂಡಾ ನೀರಿಗೆ ಧುಮುಕಿದ್ದರು. ಆದರೆ ಹೆಲಿಕಾಪ್ಟರ್ ನಿಂದ ನೀರುಕ್ಕೆ ಬದುಕಿದ ತಕ್ಷಣ ಸಹಾಯಕ್ಕೆ ಬರಬೇಕಾದ ಬೂಟ್ ಕೆಟ್ಟ ನಿಂತಿತು. ಆದ್ದರಿಂದ ಈಜು ಬಾರದ ಕಳಲೆಟ ಅನಿಲ್ ಮತ್ತು ಉದಯ್ ಅವರನ್ನು ರಕ್ಷಣೆ ಮಾಡುವುದು ಸಾಧ್ಯವಾಗಲಿಲ್ಲ. ಆದರೆ ನಟ ದುನಿಯಾ ವಿಜಯ್ ಅವರಿಗೆ ಈಜು ಬರುತ್ತಿದ್ದು ಅವರು ಈಜಾಡಿ ಬಚಾವಾಗಿದ್ದರು. ಸಲ್ಪ ಸಮಯದ ನಂತರ ದುನಿಯಾ ವಿಜಯ್ ಅವರನ್ನು ರಕ್ಷಣೆ ಮಾಡಲಾಗಿತ್ತು. ಅಂದು ನಡೆದ ದುರ್ಘಟನೆಗೆ ಇಡೀ ಚಿತ್ರರಂಗ ಮರುಗಿತ್ತು. ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಸಾಹಸ ನಿರ್ದೇಶಕರ ಮೇಲೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಸಾಹಸ ನಿರ್ದೇಶಕ ರವಿವರ್ಮ ಮತ್ತು ಇತರ ಐದು ಜನರ ಮೇಲೆ ಮೇಲೆ ಎಫ್ಐಆರ್ ದಾಖಲಿಸಿದ್ದರು.

 

ಇದನ್ನು ಓದಿ: Narendra Modi – Mallikarjuna Kharge: ಮೋದಿ ವಿರುದ್ಧ ಖರ್ಗೆ ಸರ್ಪದ ಹೇಳಿಕೆ: ಬಿಜೆಪಿಗೆ ಮತ್ತಷ್ಟು ಲಾಭ ಆಗಲಿದೆ – ಸಚಿವ ಸುಧಾಕರ್‌ ! 

Leave A Reply

Your email address will not be published.