Pocket Fan: ಕರೆಂಟ್ ಇಲ್ಲದಿದ್ದರೂ ತಂಪಾದ ಗಾಳಿ ನಿಮಗೆ ಸದಾ ಲಭ್ಯ! ಇಲ್ಲಿದೆ ಅಗ್ಗದ ಬೆಲೆಯ ಕೂಲ್ ಕೂಲ್ ಫ್ಯಾನ್!!!

Pocket Fan : ಮನೆಯಿಂದ ಹೊರ ಹೋದಾಗ ಬಿಸಿಲ ಧಗೆ ತಡೆಯಲಾಗುವುದಿಲ್ಲ. ಹಾಗಂತ ಹೋದ ಕಡೆಗೆಲ್ಲಾ ಎಸಿ ಕೂಲರ್ ತೆಗೆದು ಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಇದುವರೆಗೆ ನೀವು ಸೆಕೆ ತಾಳಲಾರದೆ ಫ್ಯಾನ್ ಇದ್ದ ಕಡೆ ಒಡಬೇಕಿತ್ತು. ಇದೀಗ ನೀವು ಇದ್ದಕಡೆ ಫ್ಯಾನ್ ಬರಲಿದೆ. ಜೊತೆಗೆ ಕರೆಂಟ್ ಇಲ್ಲ ಅನ್ನೋ ಚಿಂತೆ ಕೂಡ ಇಲ್ಲ. ಹೌದು, ಈ ಫ್ಯಾನ್ ವಿದ್ಯುತ್ ಇಲ್ಲದೆಯೇ ಕಾರ್ಯನಿರ್ವಹಿಸಬಲ್ಲ ಫ್ಯಾನ್ ಆಗಿದೆ.

ಸದ್ಯ ಮಾರುಕಟ್ಟೆಗೆ ಮಿನಿ ಫ್ಯಾನ್ ಗಳು ಕಾಲಿಟ್ಟಿವೆ. ಇವುಗಳನ್ನು ನಾವು ಹೋದ ಕಡೆಗೆಲ್ಲಾ ತೆಗೆದುಕೊಂಡು ಹೋಗಬಹುದು. ಈ ಫ್ಯಾನ್ ಗಳನ್ನು ಪಾಕೆಟ್ ಫ್ಯಾನ್ (Pocket Fan ) ಗಳೆಂದು ಕರೆಯುತ್ತಾರೆ. ಯಾಕೆಂದರೆ ಈ ಫ್ಯಾನ್ ಗಳನ್ನು ಪಾಕೆಟ್ ನಲ್ಲಿಟ್ಟುಕೊಂಡು ಹೋಗಬಹುದು.

ಮುಖ್ಯವಾಗಿ ಇಂಡೋರ್ ಔಟ್ ಡೋರ್ ಎರಡೂ ಕಡೆ ಈ ಫ್ಯಾನ್ ಅನ್ನು ಆರಾಮಾಗಿ ಬಳಸಬಹುದು. ಇದನ್ನು ಚಾರ್ಜ್ ಮಾಡಲು USB ಪೋರ್ಟ್ ಕೂಡಾ ನೀಡಲಾಗುತ್ತದೆ.

Hasthip ಕಂಪನಿಯು ಹೊರ ತಂದಿರುವ ಮಿನಿ ಪಾಕೆಟ್ ಫ್ಯಾನ್ 3 ವೇಗಗಳೊಂದಿಗೆ ಬರುತ್ತದೆ. ಇದು ತಂಪು ಗಾಳಿ ನೀಡುವ ವಿಚಾರದಲ್ಲಿ ನಂಬರ್ ಆನ್ ಆಗಿದೆ.

ಇದು 2000 mAh ಬ್ಯಾಟರಿಯನ್ನು ಹೊಂದಿದೆ. ಈ ಕಾರಣದಿಂದಾಗಿ ಹಲವಾರು ಗಂಟೆಗಳ ಕಾಲ ಸುಲಭವಾಗಿ ಬ್ಯಾಕಪ್ ಮಾಡಬಹುದು. ಇದನ್ನು ಒಮ್ಮೆ ಫುಲ್ ಚಾರ್ಜ್‌ ಮಾಡಿದರೆ ಹಲವಾರು ಗಂಟೆಗಳವರೆಗೆ ಆರಾಮಾಗಿ ಬಳಸಬಹುದು. ಫ್ಯಾನ್ ಅನ್ನು ಸುಲಭವಾಗಿ ಹಿಡಿದಿಡಲು ಮತ್ತು 360 ಡಿಗ್ರಿ ತಿರುಗುವಿಕೆಗೆ ಸಹಾಯವಾಗಲು USB ಹ್ಯಾಂಡ್ಹೆಲ್ಡ್ ರಿಂಗ್‌ನೊಂದಿಗೆ ಬರುತ್ತದೆ. ಈ ಫ್ಯಾನ್ ಅಡಾಪ್ಟರ್‌ನೊಂದಿಗೆ ಬರುತ್ತದೆ ಇದರಿಂದ ಅದನ್ನು ಸುಲಭವಾಗಿ ಚಾರ್ಜ್ ಮಾಡಬಹುದು.

ಈ ಪೋರ್ಟಬಲ್ ಫ್ಯಾನ್ Amazonನಲ್ಲಿ ಲಭ್ಯವಿದೆ. ಪ್ರಸ್ತುತ ಈ ಫ್ಯಾನ್ ಮೇಲೆ 33% ವರೆಗೆ ರಿಯಾಯಿತಿ ನೀಡಲಾಗುತ್ತಿದ್ದು, ಹಾಗಾಗಿ ರಿಯಾಯಿತಿ ದರದ ನಂತರ ಈ ಫ್ಯಾನ್ ಅನ್ನು 899 ರೂಪಾಯಿಗೆ ಖರೀದಿಸಬಹುದು.

ಒಟ್ಟಿನಲ್ಲಿ ಈ ಫ್ಯಾನ್‌ನ ಗಾತ್ರವು ಅತ್ಯಂತ ಚಿಕ್ಕದಾಗಿದೆ. ಆದ್ದರಿಂದ ನೀವು ಎಲ್ಲಿಗೆ ಹೋಗಬೇಕಾದರೂ ಈ ಫ್ಯಾನ್ ಅನ್ನು ತೆಗೆದುಕೊಂಡು ಹೋಗಬಹುದು. ಇಂಡೋರ್ ಔಟ್ ಡೋರ್ ಎರಡೂ ಕಡೆ ಈ ಫ್ಯಾನ್ ಅನ್ನು ಆರಾಮಾಗಿ ಬಳಸಬಹುದು. ಅದಲ್ಲದೆ ಈ ಮಿನಿ ಪಾಕೆಟ್ ಫ್ಯಾನ್ ಗಳಿಗೆ ಈಗ ಬೇಡಿಕೆ ಕೂಡಾ ಹೆಚ್ಚುತ್ತಿದೆ.

ಇದನ್ನೂ ಓದಿ: Underarm : ಕಂಕುಳಲ್ಲಿ ಕೆಟ್ಟ ವಾಸನೆಯಿಂದ ಮುಜುಗರ ಆಗುತ್ತಿದೆಯೇ? ಕಾರಣ, ಪರಿಹಾರ ಎರಡೂ ಇಲ್ಲಿದೆ!

Leave A Reply

Your email address will not be published.