Home Breaking Entertainment News Kannada Anushka Shetty MeToo: #MeToo ಬಿಸಿ ಅನುಷ್ಕಾ ಶೆಟ್ಟಿಗೂ ತಾಗಿತ್ತಾ ? ಪೊನ್ನಿಯನ್ ಸೆಲ್ವಂನಲ್ಲಿ ಐಶ್ವರ್ಯಾ...

Anushka Shetty MeToo: #MeToo ಬಿಸಿ ಅನುಷ್ಕಾ ಶೆಟ್ಟಿಗೂ ತಾಗಿತ್ತಾ ? ಪೊನ್ನಿಯನ್ ಸೆಲ್ವಂನಲ್ಲಿ ಐಶ್ವರ್ಯಾ ನಟಿಸಿದ್ದು ಅದಕ್ಕಾ ?!

Anushka Shetty - Ponniyin Selvan
Image source : filme shilmy

Hindu neighbor gifts plot of land

Hindu neighbour gifts land to Muslim journalist

Anushka Shetty – Ponniyin Selvan: ಸೆಪ್ಟೆಂಬರ್​ 2022ರಲ್ಲಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ತೆರೆಗೆ ಬಂದಿದ್ದು, ಕನ್ನಡದ ಕಾಂತಾರ ಸಿನಿಮಾ ಜೊತೆಗೆ ಪೊನ್ನಿಯಿನ್ ಸೆಲ್ವನ್ 1 ರಿಲೀಸ್‌ ಆಗಿ ಉತ್ತಮ ಫೈಟ್ ನೀಡಿದೆ. ಆದರೆ ಸ್ಯಾಂಡಲ್‌ವುಡ್‌ನ ಬಿಗ್ ಸಕ್ಸಸ್ ಸಿನಿಮಾದ ಜೊತೆ ರಿಲೀಸ್ ಆದ ಪೊನ್ನಿಯಿನ್ ಸೆಲ್ವನ್ 1 ದೊಡ್ಡಮಟ್ಟದಲ್ಲಿ ಹಿಟ್ ಆಗಲಿಲ್ಲ. ಆದರೆ ಫ್ಲಾಪ್ ಕೂಡ ಆಗಲಿಲ್ಲ. ತಕ್ಕ ಮಟ್ಟಿನ ಯಶಸ್ಸನ್ನು ಕಂಡಿತು.

ಏಪ್ರಿಲ್ 28ರಂದು ಪೊನ್ನಿಯಿನ್ ಸೆಲ್ವನ್ 2 ರಿಲೀಸ್‌ ಆಗಿದ್ದು, ಸಿನಿಪ್ರಿಯರ ಮನಗೆಲ್ಲುತ್ತಿದೆ. ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಬಗ್ಗೆ ಪಾಸಿಟಿವ್‌ ರಿಸ್ಪಾನ್ಸ್‌ ಕೂಡ ಬರುತ್ತಿದೆ. ಪೊನ್ನಿಯಿನ್ ಸೆಲ್ವನ್ ಐತಿಹಾಸಿಕ ಚಲನಚಿತ್ರವಾಗಿದ್ದು, ಇದರಲ್ಲಿ ಚೋಳರ ಆಳ್ವಿಕೆಯ ಅನೇಕ ಕಥೆಗಳನ್ನು ತೋರಿಸಲು ಪ್ರಯತ್ನಿಸಲಾಗಿದೆ.

ಈ ನಡುವೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿದ ನಟಿಯ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಹೌದು, ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸಿರುವ ಪಾತ್ರದ ಅವಕಾಶ ಮೊದಲು ಸಿಕ್ಕಿದ್ದು ಅನುಷ್ಕಾ ಶೆಟ್ಟಿಗೆ, ಆದರೆ ಪ್ರಬಲ ಕಾರಣವೊಂದಕ್ಕಾಗಿ ಆ ಅವಕಾಶ ತಪ್ಪಿದೆ. ಅನುಷ್ಕಾ ಶೆಟ್ಟಿ (Anushka Shetty) ದಕ್ಷಿಣ ಭಾರತದ ಚಿತ್ರರಂಗ ಕಂಡ ಅದ್ಭುತ ನಟಿಯರಲ್ಲೊಬ್ಬರು. ಆದರೆ ಬಾಹುಬಲಿ (Bahubali) ಸಿನಿಮಾದ ಬಳಿಕ ಅನುಷ್ಕಾ ಮೌನವಾಗಿಯೇ ಉಳಿದಂತಿದೆ.

ಪೊನ್ನಿಯಿನ್ ಸೆಲ್ವನ್‌ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ನಟಿಸಿದ್ದಾರೆ. ಆದರೆ ಮಣಿರತ್ನಂ ಅವರ ಜನಪ್ರಿಯ ಚಿತ್ರ ಪೊನ್ನಿಯಿನ್ ಸೆಲ್ವನ್‌ಗೆ ಐಶ್ವರ್ಯಾ ರೈ ಮೊದಲ ಆಯ್ಕೆಯಾಗಿರಲಿಲ್ಲ. ಅಂದರೆ ಅದಕ್ಕೂ ಮೊದಲು ಅನುಷ್ಕಾ ಶೆಟ್ಟಿಗೆ ‘ಪೊನ್ನಿಯಿನ್ ಸೆಲ್ವನ್’ (Anushka Shetty – Ponniyin Selvan) ಆಫರ್ ನೀಡಲಾಗಿತ್ತು. ಆದರೆ #MeToo ಚಳುವಳಿಯಿಂದಾಗಿ ನಟಿ ಚಿತ್ರವನ್ನು ನಿರಾಕರಿಸಿದರು ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, ಅನುಷ್ಕಾ ನಂದಿನಿ ಪಾತ್ರ ಮಾಡಲು ನಿರಾಕರಿಸಿದರಂತೆ. ಇದಕ್ಕೆ ಕಾರಣ ಪಿಎಸ್ ಚಿತ್ರದ ಸಂಗೀತಗಾರ ವೇರಮುತ್ತು ಎಂದು ಹೇಳಲಾಗ್ತಿದೆ. ಅನೇಕ ಮಹಿಳೆಯರು ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರಿಂದ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸಲು ನಟಿ ಅನುಷ್ಕಾ ಶೆಟ್ಟಿ ತಿರಸ್ಕರಿಸಿದರೆಂದು ಹೇಳಲಾಗುತ್ತಿದೆ.

ಇನ್ನು ಅನುಷ್ಕಾ ಶೆಟ್ಟಿ ಫಿಲ್ಮ್ಸ್ ಮತ್ತು ತಯಾರಕರ ನಡುವೆ ಹಣದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ವೈರಮುತ್ತು ವಿರುದ್ಧ ಮೀ ಟೂ ಆರೋಪಗಳ ಕಾರಣಕ್ಕೆ ನಟಿ ಅನುಷ್ಕಾ ಶೆಟ್ಟಿ ಬ್ಲಾಕ್ ಬಸ್ಟರ್ ಹಿಟ್ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಶಾ, ಜಯಂ ರವಿ, ಐಶ್ವರ್ಯ ಲಕ್ಷ್ಮಿ ಮತ್ತು ಸೋಭಿತಾ ಧೂಳಿಪಾಲ ಮುಂತಾದವರು ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

 

ಇದನ್ನು ಓದಿ: Wrestlers Protest: ಪ್ರತಿಭಟನೆ ಮಾಡಿದರೆ ದೇಶಕ್ಕೆ ಕಳಂಕ ಎಂದ ಪಿಟಿ ಉಷಾ!!!