House Rent: ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಬೇಕಾದ್ರೆ ಪಿಯುಸೀಲಿ 90 % ಅಂಕ ಕಡ್ಡಾಯ, ಮಾಲೀಕನ ಕಂಡೀಷನ್ ವೈರಲ್ !

House Rent: ಬೆಂಗಳೂರಲ್ಲಿ ಶಾಲಾ ತರಗತಿಗಳು ಪ್ರಾರಂಭವಾಗುವ ಆಸುಪಾಸಿನಲ್ಲಿ (Bengaluru) ಮನೆ ಬಾಡಿಗೆಗೆ (House Rent) ಮನೆಗಳು ಸಿಗುವುದು ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಇಲ್ಲೋರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೆ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ 90 % ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ.

ಅಪರಾಧಗಳು ಹೆಚ್ಚಿದಂತೆಲ್ಲ ಮನೆ ಮಾಲೀಕರು ಮನೆಯನ್ನು ಬಾಡಿಗೆ ಕೊಡಲು ಹಿಂದೆ ಮುಂದೆ ನೋಡುತ್ತಿದ್ದು, ನಾನಾ ವೆರಿಫಿಕೇಷನ್ ಶುರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಮನೆ ಮಾಲಿಕರು ಕೇಳುವ ಡಾಕ್ಯುಮೆಂಟ್ಸ್ ಮತ್ತು ಪ್ರಶ್ನೆಗಳನ್ನು ಕೇಳಿಸಿಕೊಂಡರೇ ಇದೇನು ಜಾಬ್ ಇಂಟರ್ವೀವ್ ಬಂದಿದ್ದೀನಾ ಎಂದನ್ನಿಸುವುದು ಸಹಜ. ಪರಿಸ್ಥಿತಿ ಹೀಗಿರುವಾಗ ನಗರದಲ್ಲಿ ಓರ್ವ ಮನೆ ಮಾಲಿಕ ಇನ್ನೊಂದು ಮೈಲು ದೂರ ಹೋಗಿದ್ದಾರೆ. ಮನೆ ಬಾಡಿಗೆಗೆ ಬೇಕಾದ್ರೆ, ಇಷ್ಟೇ ಸಾಲಲ್ಲ: ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ 90 ಶೇಕಡಾರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ.

ಹೌದು, ಇದು ವಿಚಿತ್ರವೆನಿಸಿದರು ಇದು ಸತ್ಯ. ಈ ಕುರಿತಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದನ್ನು ಶುಭ್ ಎಂಬುವರು ಟ್ವೀಟ್ ಮಾಡಿ ಮನೆ ಕೊಡಿಸುವ ಬ್ರೋಕರ್ ಜತೆ ತಾನು ನಡೆಸಿದ ವಾಟ್ಸಾಪ್ ಚಾಟ್ಸ್ ನ ಸ್ಕ್ರೀನ್ ಶಾಟ್ ಅನ್ನು ತೆಗೆದು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ.

ವಾಟ್ಸಪ್ ಚಾಟ್ ನಲ್ಲಿ ಮನೆ ಕೊಡಿಸುವ ಬ್ರೋಕರ್ ಏನು ಹೇಳಿದ್ದಾರೆ ಗೊತ್ತೇ ?

‘ ನೀವು ಲಿಂಕ್ಡಿನ್ ಮತ್ತು ಟ್ವಿಟರ್ ಪ್ರೋಫೈಲ್ ಕಳಸಿ ಅಂತ ಹೇಳಿದ್ದಾರೆ. ಜೊತೆಗೆ ನಿಮ್ಮ ಕಂಪನಿ ಜಾಯನಿಂಗ್ ಲೆಟರ್, ಅಂಕಪಟ್ಟಿ, ಮತ್ತು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ 150 ರಿಂದ 300 ಪದಗಳಲ್ಲಿ ನಿಮ್ಮ ಬಗ್ಗೆ ಬರೆದು ಪತ್ರವನ್ನು ಕಳುಹಿಸಿ’ ಎಂದು ಮನೆ ಮಾಲಿಕರು ಕಂಡೀಷನ್ಸ್ ಹಾಕಿದ್ದಾರೆ ಎಂದು ಮನೆ ಪಡೆಯಲುಬಯಸುವವರಿಗೆ ಬ್ರೋಕರ್ ಮೆಸೆಜ್ ಮಾಡಿದ್ದಾರೆ.

ನಂತರ ಮನೆ ಬಾಡಿಗೆಗೆ ಬೇಕಾದವರು ಎಲ್ಲಾ ಡಾಕ್ಯುಮೆಂಟ್ ಅನ್ನು ಮತ್ತು ಆ 300 ಪದಗಳ ಪತ್ರವನ್ನು ಬ್ರೋಕರ್’ಗೆ ಕಳಸಿದ್ದಾರೆ. ಕೆಲ ಕಾಲದ ನಂತರ ಕಡೆಯಿಂದ ಬ್ರೋಕರ್ ರಿಪ್ಲೈ ಬಂದಿದೆ. ” ಸಾರಿ ಬ್ರೋ ನೀವು ದ್ವಿತೀಯ ಪಿಯುಸಿಯಲ್ಲಿ ಶೇಕಡಾ 75 ರಷ್ಟು ಮಾತ್ರ ಅಂಕ ಪಡೆದಿದ್ದೀರಿ, ನಾವು ಮನೆ ನೀಡಲು ಕನಿಷ್ಠ 90 ಶೇ.ರಷ್ಟು ಅಂಕ ಪಡೆಯಬೇಕು. ಹೀಗಾಗಿ ನಿಮಗೆ ಮನೆ ಬಾಡಿಗೆ ಕೊಡಲು ಆಗುವುದಿಲ್ಲ ಎಂದು ಮನೆ ಮಾಲಿಕ ರಿಜೆಕ್ಟ್ ಮಾಡಿದ್ದಾರೆ ” ಎಂದು ಬ್ರೋಕರ್ ಹೇಳಿದ್ದಾರೆ. ಇದರಿಂದ ಆಶ್ಚರ್ಯಗೊಂಡ ಮನೆ ಬಾಡಿಗೆ ಪಡೆಯವ ವ್ಯಕ್ತಿ ” ಟೂ ಫನ್ನಿ ” ಎಂದು ಮರು ಉತ್ತರಿಸಿದ್ದಾರೆ.

ಇದೀಗ ಈ ‘ ಟೂ ಫನ್ನಿ ‘ ಸುದ್ದಿ ಬೆಂಗಳೂರಿನ ತುಂಬಾ ಓಡುತ್ತಿದ್ದು, ಮಕ್ಕಳ ಮೇಲೆ ಪೋಷಕರು ಹೀಗೆ ಒತ್ತಡ ಹೇರದೆ ಇದ್ರೆ ಸಾಕು: ” ಹೋಗೋ, ಓದ್ಕೊ ಹೋಗು: ಮಾರ್ಕು ಬಾರದೆ ಹೋದ್ರೆ ಅಪಾರ್ಟ್ಮೆಂಟ್ ಬಾಡಿಗೆಗೆ ಸಿಗಲ್ಲ ನೋಡು !”

 

ಇದನ್ನು ಓದಿ: Business Idea: ದಿನಕ್ಕೆ 4 ಗಂಟೆ ಕೆಲಸ ಮಾಡಿದ್ರೆ ಸಾಕು, ಒಂದೇ ವರ್ಷದಲ್ಲಿ ಕೋಟ್ಯಾಧಿಪತಿ ಆಗೋದು ಫಿಕ್ಸ್​! 

Leave A Reply

Your email address will not be published.