Radhika pandit: ಮಕ್ಕಳ ಫೋಟೋ ಹಂಚಿಕೊಂಡ ರಾಧಿಕಾ ಯಶ್: ಒಂದೇ ವರ್ಷದಲ್ಲಿ 2 ಬಾರಿ ಹೆರಿಗೆ ಮಾಡ್ಕೊಂಡಿದ್ದು ಯಾಕಂತೆ ಗೊತ್ತಾ?!
Radhika Pandit: ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ (Radhika pandit) ತಮ್ಮ ಮಕ್ಕಳ ಜೊತೆಗೆ ರಜೆಯ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗ ಹಾಗೂ ಮಗಳ ಜೊತೆಗಿನ ಫೋಟೋಗಳನ್ನು ಇದೀಗ ಹಂಚಿಕೊಂಡಿದ್ದಾರೆ. ಅದರ ಜತೆ ಒಂದು ಇಂಟರೆಸ್ಟಿಂಗ್ ಸುದ್ದಿ ಕೂಡಾ ಹೊರಕ್ಕೆ ಬರ್ತಿದೆ.
ಚಂದನವನದಲ್ಲಿ ಮಿಂಚಿದ ಚೆಲುವೆ ರಾಧಿಕಾ ಪಂಡಿತ್, ನಟ ಯಶ್ ಅವರನ್ನು ಮದುವೆಯಾದ ಬಳಿಕ ಹೆಚ್ಚು ಸಿನಿಮಾ ಮಾಡಿಲ್ಲ. ಇದೀಗ ಮಕ್ಕಳ ಜೊತೆ ಬ್ಯುಸಿ ಆಗಿದ್ದಾರೆ. ಮೊದಲು – ನಂತರ ( Before – After ) ಎಂದು ಟೈಟಲ್ ಕೊಟ್ಟು ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ ರಾಧಿಕಾ. ಈ ನಡುವೆ ಮಕ್ಕಳ ವಯಸ್ಸು ಎಷ್ಟು ಎಂದು ಜನರು ಹುಡುಕಾಟ ಆರಂಭಿಸಿದ್ದಾರೆ. ಆಗ ವಿಶೇಷವಾದ ಮಾಹಿತಿ ಲಭ್ಯ ಆಗಿದೆ.
ಸ್ಟಾರ್ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಜೋಡಿಗೆ ಮತ್ತೆ ಒಂದೇ ವರ್ಷದಲ್ಲಿ ಎರಡನೆಯ ಮಗು ಜನಿಸಿದೆ. ಅಂದರೆ ಅಧಿಕಾರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಹೆರಿಗೆಯಾಗಿದೆ. ಮೊದಲ ಮಗು ಐರಾಳಿಗೆ ಮತ್ತು ಈಗಿನ ಅಥರ್ವ್ ನಿಗೆ ಕೇವಲ 11 ತಿಂಗಳ ಗ್ಯಾಪ್. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ನ ಪ್ರಕಾರ ಮೊದಲ ಮಗುವಿಗೂ ಎರಡನೆಯ ಮಗುವಿಗೂ ಅಂತರ 24 ತಿಂಗಳಾದರೂ ಇರಬೇಕು. ಕನಿಷ್ಠಾತಿ ಕನಿಷ್ಠ ಪಕ್ಷ 18 ತಿಂಗಳಾದರೂ ಬೇಕು.
ಮೊದಲ ಮಗು ಐರಾ ಮೊದಲು ಹುಟ್ಟಿದಳು. ಆಕೆಯ ಹೆರಿಗೆ ಆಗಿ ಕೇವಲ 2 ತಿಂಗಳ ಒಳಗೇ ಮತ್ತೆ ರಾಧಿಕಾ ಗರ್ಭವತಿ ಆಗಿದ್ದಾರೆ. ಆಕೆ ಹಾಗೆ ತರಾತುರಿಯಲ್ಲಿ ಗರ್ಭಧರಿಸಿದ್ದು ಮೊದಲ ಜನನವಾದ ನಂತರ ಕೇವಲ, 2 ತಿಂಗಳಿನಲ್ಲಿ. ಸಂಥಿಂಗ್ ಸ್ಟ್ರೇಂಜ್ ಮತ್ತು ಸಾಮಾನ್ಯವಾಗಿ ಅನ್ ಯೂಶ್ವಲ್. ಸಾಮಾನ್ಯವಾಗಿ ಇಷ್ಟು ಬೇಗ ಯಾರೂ ಮಕ್ಕಳು ಮಾಡಿಕೊಳ್ಳುವುದಿಲ್ಲ. ಆದರೆ ಸೈನ್ಸ್ ಓದಿ ತಿಳಿದ ಯಶ್ ದಂಪತಿ ಅದು ಯಾವ ಕಾರಣಕ್ಕಾಗಿ ತರಾತುರಿಯಲ್ಲಿ ಇನ್ನೊಂದು ಮಗುವನ್ನು ಹೇರಲು ಪ್ಲಾನ್ ಮಾಡಿದರು ಗೊತ್ತೇ ? ಅದಕ್ಕೆ ಒಂದು ಕಾರಣ ಇರಲೇಬೇಕು, ಅಲ್ಲವೇ ? ಹಾಗಾದರೆ ಅದ್ಯಾವ ಕಾರಣ ಅಂತ ನಾವು ನಿಮಗೆ ಹೇಳ್ತೇವೆ.
ಸಾಮಾನ್ಯವಾಗಿ ಮೊದಲ ಮಗು ಜನಿಸಿದ ನಂತರ ಸ್ತ್ರೀಯಲ್ಲಿ ಓವ್ಯೂಲೇಶನ್ ( ಅಂಡೋತ್ಪತ್ತಿ) ಆಗಲು ಕನಿಷ್ಟ ಒಂದೂವರೆ ತಿಂಗಳು ಬೇಕಾಗುತ್ತದೆ. ಆದರೆ, ಸರಾಸರಿ ಮಹಿಳೆಯರಲ್ಲಿ ಅರವತ್ತರಿಂದ ಎಪ್ಪತ್ತು ದಿನಗಳು ಬೇಕಾಗುತ್ತದೆ.
ಇದನ್ನು ಸ್ಟ್ರೇಂಜ್ ಅಂತ ಯಾಕೆ ಅಂದೆ ಅಂದರೆ, ಒಂದು ಮಗುವಿನ ನಂತರ ಆ ಕೂಡಲೇ ಇನ್ನೊಂದು ಮಗುವನ್ನು ಹೊಂದುವುದು ಸಾಮಾನ್ಯವಾಗಿ ಮಧ್ಯಮವರ್ಗದವರಲ್ಲಿ ಕಂಡುಬರುವುದಿಲ್ಲ. ಅತಿ ಶ್ರೀಮಂತ ಮತ್ತು ಸೆಲೆಬ್ರಿಟಿಗಳು, ಹೆರುವುದು ಒಂದು ತಮ್ಮ ಕರ್ತವ್ಯವೇನೋ ಎಂಬಂತೆ, ಪಟ ಪಟ ಎರಡು ಹೆರಿಗೆ ಆಗಿ ಮತ್ತೆ ತಮ್ಮ ಹಿಂದಿನ ಕೆರಿಯರ್ ಗೆ ವಾಪಸ್ಸಾಗುವ ಧಾವಂತದಲ್ಲಿರುತ್ತಾರೆ. ಅತ್ತ, ತೀರಾ ಬಡತನದಲ್ಲಿರುವ ಅನಕ್ಷಸ್ಥರು ತಮ್ಮ ಅಜ್ಞಾನದಿಂದ ಮತ್ತೆ ಮತ್ತೆ ಮಕ್ಕಳನ್ನು ಹೆರುತ್ತಾರೆ. ಅದು ಸೀಸನಲ್ ಡೆಲಿವರಿ !
ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿ ಆದಷ್ಟು ಬೇಗ ಇನ್ನೊಂದು ಮಗು ಮಾಡಿಕೊಂಡು ನಂತರ ರಾಧಿಕಾಳನ್ನು ಸಿನಿಮಾದಲ್ಲಿ ನಟಿಸಲು ರೆಡಿಯಾಗುವಂತೆ ಮಾಡುವುದೇ ‘ ಈ ಕ್ಷಿಪ್ರ ಪೇರೆಂಟಿಂಗ್’ ನ ಉದ್ದೇಶ ಎನ್ನಲಾಗಿತ್ತು. ಆದರೆ ರಾಧಿಕಾ ಯಶ್ ಪಂಡಿತ್ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಪ್ರವೇಶವೇ ಪಡೆದಿಲ್ಲ. ಹಾಗಾದರೆ ತಕ್ಷಣ ಮಗು ಮಾಡಿಕೊಳ್ಳುವ ಪ್ಲಾನ್ ಅವರಿಗೆ ಇರಲಿಲ್ಲ. ಹಾಗಾದ್ರೆ ಅಷ್ಟು ಬೇಗ ಅಥರ್ವ ಹುಟ್ಟಲು ಕಾರಣ ಏನಿರಬಹುದು ?
ಈಗ ಇದರ ಜೊತೆ ಇನ್ನೊಂದು ಸಾಧ್ಯತೆ ಬಗ್ಗೆ ಚರ್ಚೆ ಆಗುತ್ತಿದೆ. ಸಾಮಾನ್ಯವಾಗಿ ಪತ್ನಿಯ ಹೆರಿಗೆ ಆದ ನಂತರ ಯಾವುದೇ ಗರ್ಭ ನಿರೋಧಕಗಳ ಅವಶ್ಯಕತೆ ಇರುವುದಿಲ್ಲ. ಗಂಡು ಮತ್ತು ಹೆಣ್ಣು ಯಾವುದೇ ಕಾಂಟ್ರಾಸೆಪ್ಟಿವ್ ಇಲ್ಲದೆ ಆರಾಮವಾಗಿ ಸೇರಬಹುದು. ಮಗುವಿಗೆ ಹಾಲುಣಿಸುವ ತನಕ ಸಾಮಾನ್ಯವಾಗಿ ಅಂಡಾಣುವಿನ ಉತ್ಪತ್ತಿ ನಡೆಯೋದಿಲ್ಲ. ಹಾಗಾಗಿ ಮಗು ಆಗೋ ಸಂಭವ ತೀರಾ ಅಪರೂಪ. ಆದ್ರೆ ಆ ಸಮಯದಲ್ಲಿ ಆದ ಯಡವಟ್ಟಿನ ಕಾರಣದಿಂದ ಯಶ್ ರಾಧಿಕಾ ದಂಪತಿಗೆ ಇನ್ನೊಂದು ಗರ್ಭ ಮೂಡಿದೆ ಎನ್ನಲಾಗಿದೆ. ಆ ಎರಡನೆಯ ಗರ್ಭದಲ್ಲಿ ಜೂನಿಯರ್ ಯಶ್ ಅಥರ್ವ ಹುಟ್ಟಿದ್ದು.
ಬ್ಯಾಕ್ ಟು ಬ್ಯಾಕ್ ಮಗು ಬಗ್ಗೆ ಸೈನ್ಸ್ ಏನನ್ನುತ್ತೆ?:
ಕೆಲವು ಸಂಧರ್ಭಗಳಲ್ಲಿ ಇಬ್ಬರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಅಥವಾ ಪೌಷ್ಟಿಕಾಂಶಗಳ ಕೊರತೆ, ಅಥವಾ ಇಮ್ಮ್ಯೂನಿಟಿ ಸಮಸ್ಯೆಗಳಿಂದ ಬಳಲುತ್ತಾರೆ. ಶ್ರೀಮಂತರಿಗೆ ಮತ್ತು ಸೆಲೆಬ್ರಿಟಿ ಗಳಿಗೆ ಇದು ಗೊತ್ತಿಲ್ಲವಾ, ಅವರ ವೈದ್ಯರು ಅವರಿಗಿದನ್ನು ಹೇಳಲ್ವಾ? ಗೊತ್ತಿಲ್ಲ. ಬಹುಷಃ ವೈದ್ಯರು ಎಚ್ಚರಿಸಿರುತ್ತಾರೆ. ಆದರೆ ಆಯ್ಕೆಗಳ ಆಯ್ಕೆ ವೈದ್ಯರದಲ್ಲವಲ್ಲ? ಸೆಲೆಬ್ರಿಟಿಗಳು ಉತ್ತಮ ಪೌಷ್ಟಿಕಾಂಶಗಳ ಆಹಾರ ಸೇವಿಸುತ್ತಾರಾದ್ದರಿಂದ ತಾಯಿಗಾಗಲಿ ಮಗುವಿಗಾಗಲಿ ಏನೂ ಸಮಸ್ಯೆಯಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಸೈನ್ಸು ಅದನ್ನು ಒಪ್ಪುವುದಿಲ್ಲ.
ದೇಹಕ್ಕೆ, ತನ್ನದೇ ಆದ ಒಂದು ಕ್ಷಮತೆ ಇರುತ್ತದೆ. ಅದರ ಮೇಲೆ ಒತ್ತಡ ಹೇರಿ, ಇತ್ತ ಕಡೆಯಿಂದ ಏನೇ ಸಪ್ಲಿಮೆಂಟ್ ಕೊಟ್ಟರೂ ಅದು ನ್ಯಾಚುರಲ್ ಆಗಿ ಬ್ಯಾಲನ್ಸ್ ಆಗುವುದಿಲ್ಲ.
ಇತ್ತ, ತಮ್ಮಎರಡು ಮಗುವಿನ ಅಂತರ ನಿರ್ಧರಿಸೋದು ಯಶ್ ದಂಪತಿಗಳ ಪರ್ಸನಲ್ ವಿಷ್ಯ! ನಾವು ನಮ್ಮ ಭಾವೀ ತಾಯಂದಿರಿಗೆ ಒಂದಷ್ಟು ಸಲಹೆ ಹೇಳ ಹೊರಟದ್ದು.
ಎರಡು ಮಗುವಿನ ಅಂತರವು 2 ವರ್ಷವಾಗಿದ್ದರೆ ಅದು ಅತ್ಯಂತ ಸೂಕ್ತ. ಇತ್ತ ತಾಯಿಯೂ ಮೊದಲ ಹೆರಿಗೆಯಿಂದ ಪೂರ್ತಿ ಚೇತರಿಸಿಕೊಂಡು, ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡನೆಯ ಮಗುವನ್ನು ಸ್ವಾಗತಿಸಲು ಪೂರ್ತಿ ರೆಡಿಯಾಗಿರುತ್ತಾಳೆ. ಅಲ್ಲದೆ, ಎರಡು ಮಕ್ಕಳ ಅಂತರ 2 ವರ್ಷಗಳಿರುವುದರಿಂದ ಮಕ್ಕಳು ಒಬ್ಬರಿಗೊಬ್ಬರು ಪೂರಕ ಆಟಗಾರರಾಗಿ, ಗೈಡುಗಳಾಗಿ, ಸಂಗಾತಿಗಳಾಗಿ ಬೆಳೆಯುವುದರಿಂದ ಪರಸ್ಪರ ಭಾಂದವ್ಯ ಚೆನ್ನಾಗಿ ಬೆಳೆಯುತ್ತದೆ. ಮುಂದೆ ದೊಡ್ಡವರಾದ ಮೇಲೆ ಕೂಡ ಆ ಭಾಂದವ್ಯ ಹಾಗೆಯೇ ಉಳಿದುಕೊಳ್ಳುವ ಸನ್ನಿವೇಶ ಅಧಿಕ.
ಆದರೆ ಇಬ್ಬರು ಮಕ್ಕಳ ಅಂತರ 3 ರಿಂದ 4 ವರ್ಷಗಳಿಗಿಂತ ಹೆಚ್ಚು ಇರದಂತೆ ನೋಡಿಕೊಳ್ಳುವುದು ಸೂಕ್ತ. ಮದುಮೇಹ,ಬೊಜ್ಜು ಮತ್ತು ವಯಸ್ಸಿನ ಕಾರಣಗಳಿಂದ ಎರಡನೆಯ ಗರ್ಭಕಟ್ಟಿಕೊಳ್ಳದೆಯೂ ಇರಬಹುದು. ಆಯ್ಕೆಗಳ ಮತ್ತು ವೈದ್ಯ ವಿಜ್ಞಾನಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಯಾವತ್ತೂ ಒಳ್ಳೆಯದು.
ಈಗ ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿರುವ ರಾಧಿಕಾ ಪಂಡಿತ್, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮಕ್ಕಳ ಜೊತೆಗಿನ ಫೋಟೋಗಳು ಹಂಚಿಕೊಳ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ ರಾಧಿಕಾ ಪಂಡಿತ್. ಅವರನ್ನು ಮತ್ತೆ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ರಾಧಿಕಾ ಪಂಡಿತ್ ಮತ್ತೆ ಯಾವಾಗ ಬಣ್ಣ ಹಚ್ಚಲಿದ್ದಾರೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ.