PM Modi: ಇಂದು ಮೋದಿಯ ವರ್ಚುವಲ್ ಸಭೆ: ಚಕ್ರಾಧಿಪತಿಯ ಅಂತಿಮ ಆರ್ಡರ್’ಗೆ ಕಾಯುತ್ತಿರುವ 50 ಲಕ್ಷ ಸೈನಿಕರು !!!
PM Modi: ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಘಟಾನುಘಟಿ ನಾಯಕರುಗಳು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇವತ್ತಿಂದ ಚಕ್ರಾಧಿಪತಿ ಪ್ರಧಾನಿ ನರೇಂದ್ರ ಮೋದಿಯವರು ಕದನ ಕಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಿಜೆಪಿಯ 50 ಲಕ್ಷ ಕಾರ್ಯಕರ್ತರ ಬೃಹತ್ ದಂಡು ತಮ್ಮ ಆರಾಧ್ಯ ದೈವದಂತಿರುವ ನರೇಂದ್ರ ದಾಮೋದರ ದಾಸ್ ಮೋದಿಯ ಅಂತಿಮ ಸಿಗ್ನಲ್ ಗೆ ಕಾಯುತ್ತಿದೆ. ‘ ಚಾರ್ಜ್ ‘ ಎಂದು ಮೋದಿ ಹೇಳೋದೇ ತಡ: ಅರ್ಧ ಕೋಟಿಯ ಅಕ್ಷೋಹಿಣಿ ಸೈನ್ಯ ಚುನಾವಣಾ ಕಣಕ್ಕೆ ಧುಮುಕಿ ರಣ ಕೆಕೆ ಹಾಕಲಿದೆ.
ಹೌದು, ನರೇಂದ್ರ ಮೋದಿಯವರೂ (PM Modi) ಸದ್ಯದಲ್ಲೇ ರಾಜ್ಯಕ್ಕೆ ಬರುತ್ತಿದ್ದು, ಅದಕ್ಕೂ ಮುನ್ನ ಇಂದು ಬಿಜೆಪಿ ಕಾರ್ಯಕರ್ತರ ಜೊತೆ ವರ್ಚುಯಲ್ ಸಭೆ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ 9:30ಕ್ಕೆ ನಡೆಯಲಿರುವ ಈ ವರ್ಚುಯಲ್ ಸಭೆಯಲ್ಲಿ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಲಿದ್ದು, 58,112 ಬೂತ್, 1,680 ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮವು ಪ್ರಸಾರವಾಗಲಿದೆ.
ನಮೋ ಆಪ್ ಬಳಸುವ ಮೂಲಕ ಪ್ರಧಾನಿ ಅವರ ಜೊತೆ ನೇರ ಮಾತುಕತೆ ನಡೆಸಬಹುದಾಗಿದ್ದು, 18002090920 ಟೋಲ್ ಫ್ರೀ ನಂಬರ್ ಗೆ ಮಿಸ್ಡ್ ಕಾಲ್ ಕೊಡುವ ಮೂಲಕವೂ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇಂದಿನ ಸಭೆಯಲ್ಲಿ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಮೋದಿಯವರು ಮಾತುಕತೆ ನಡೆಸಲಿದ್ದಾರೆ. ಎರಡು ಯೋಚಿಸದೆ, ಅಭ್ಯರ್ಥಿಯನ್ನು ಗಮನಿಸದೆ ರಾಷ್ಟ್ರೀಯ ವಿಚಾರಧಾರೆಯ ಪಕ್ಷ ಬಿಜೆಪಿಯನ್ನು ಬೆಂಬಲಿಸಿ ಎಂದು ಮೋದಿ ಸೂಚಿಸೋದು ಸ್ಪಷ್ಟ.
ಮೋದಿಯ ಬೆರಳ ಇಶಾರೆಗೆ ಕಾಯುತ್ತಿರುವ ಕಾಮ್ರೇಡ್ ಗಣ ಇವತ್ತಿನಿಂದ ಕದನಕ್ಕೆ ಎಂಟ್ರಿ ಕೊಡಲಿದ್ದು, ಆಯಾ ಕ್ಷೇತ್ರಗಳಲ್ಲಿ ದೊಡ್ಡಮಟ್ಟಿನ ಪರಿಣಾಮ ಉಂಟು ಮಾಡಲಿದೆ. ಇವತ್ತಿನ ಮಟ್ಟಿಗೆ ಬಿಜೆಪಿ ಸರಿಸುಮಾರು 10% ನಷ್ಟು ಹಿಂದೆ ಬಿದ್ದಿದೆ. ಈ ಹಿನ್ನಡೆ ಇತ್ತೀಚೆಗೆ ಪ್ರಕಟವಾದ ಚುನಾವಣಾ ಸಮೀಕ್ಷೆಗಳಲ್ಲಿಯೂ ಕಂಡು ಬಂದಿದೆ. ಹೆಚ್ಚು ಕಮ್ಮಿ ಪ್ರತಿ ಚುನಾವಣೆಗಳಲ್ಲೂ ಸ್ಲೋ ಸ್ಟಾರ್ಟ್ ತೆಗೆದುಕೊಳ್ಳುವ ಬಿಜೆಪಿಯು, ಕೊನೆಯ ಹಂತದಲ್ಲಿ ಮನೆ ಮನೆ ಭೇಟಿ ಮತ್ತು ಬಿರುಸಿನ ಪ್ರಚಾರ ರೋಡ್ ಶೋ ಮೂಲಕ ಹಂತ ಹಂತವಾಗಿ ಜನರ ಮನಸ್ಸನ್ನು ತಟ್ಟುತ್ತದೆ. ಯಾವಾಗ ಮೋದಿಯವರು ಖುದ್ದಾಗಿ ರಾಜ್ಯ ಪ್ರವಾಸ ಶುರುಮಾಡುತ್ತಾರೆಯೋ, ಆಗ ಹಲವಾರು ಕ್ಷೇತ್ರಗಳಲ್ಲಿ ಮತ್ತಷ್ಟು ಹೊಸ ಹುರುಪು ಮೂಡಿ, ಚುನಾವಣೆಯ ಫಲಿತಾಂಶದ ದಿಕ್ಕೆ ಬದಲಾದದ್ದನ್ನು ನಾವು ಹಲವು ಬಾರಿ ಗಮನಿಸಿದ್ದೇವೆ. ಈ ಸಲ ಅಂತಹ ಮ್ಯಾಜಿಕ್ ಅನ್ನು ಮೋದಿ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: S.Angara: ಸಚಿವ ಎಸ್.ಅಂಗಾರ ಅನಾರೋಗ್ಯ : ಮಂಗಳೂರಿನ ಆಸ್ಪತ್ರೆಗೆ ದಾಖಲು