Grave: ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕುವ ಪೋಷಕರು! ಕಾರಣ ತಿಳಿದರೆ ಖಂಡಿತ ಬೆಚ್ಚಿಬೀಳ್ತೀರ!!!

Parents locking the Grave: ದಿನಂಪ್ರತಿ ಅದೆಷ್ಟೋ ಅಪರಾಧ(Crime News) ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಪುಟ್ಟ ಹೆಣ್ಣು ಮಕ್ಕಳಿಂದ ಹಿಡಿದು ಕಾಮುಕರು ತಮ್ಮ ಕಾಮತೃಷೆ ತೀರಿಸಿಕೊಂಡು ಭೀಭತ್ಸ ವಾಗಿ ಹತ್ಯೆ ಮಾಡಿದ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣಗಳು ಇತ್ತೀಚೆಗಂತೂ ಕೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲೊಂದು ಕಡೆ ಸಮಾಧಿಯನ್ನು (Parents locking the Grave) ಕೂಡ ಬೀಗ ಹಾಕಿ ಭದ್ರ ಪಡಿಸುತ್ತಾರೆ ಗೊತ್ತಾ? ಅದರ ಹಿಂದಿನ ಅಸಲಿ ಕಾರಣ ಮಾತ್ರ ಭಯಾನಕವಾಗಿದೆ.

 

ಜನರ ಕಾಮುಕತೆಯ ಪರಾಕಾಷ್ಟತೆಯ ಬಗ್ಗೆ ಅದೆಷ್ಟೋ ಭೀಕರ ನಿದರ್ಶನಗಳನ್ನ ನಾವೆಲ್ಲ ಕೇಳಿದ್ದೇವೆ. ಮನುಷ್ಯರಷ್ಟೇ ಅಲ್ಲದೆ, ಪ್ರಾಣಿಗಳ ಮೇಲೆ ಕೂಡ ದೌರ್ಜನ್ಯವೆಸಗಿರುವ ಪ್ರಕರಣಗಳು ಕೂಡ ಇವೆ. ಆದರೆ ಸಮಾಧಿಯೊಳಗಿನ ಹೆಣ್ಣಿನ ಮೃತದೇಹವನ್ನ (Deadbody)ಹೊರತೆಗೆದು ಅದರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತಹ ಹೀನ ಮನಸ್ಥಿತಿಯವರು ಕೂಡ ಇದ್ದಾರೆ ಎಂಬುದು ವಿಪರ್ಯಾಸ.

2013 ರಲ್ಲಿ ಗುಜ್ರಾನ್‌ವಾಲಾದ ಕಿಲಾ ದಿದರ್ ಸಿಂಗ್‌ನಲ್ಲಿರುವ ಸ್ಮಶಾನದ ಹೊರಗೆ ಹದಿನೈದು ವರ್ಷದ ಬಾಲಕಿ(Girl) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ. ಹೀಗಾಗಿ, ಬಾಲಕಿಯ ಕುಟುಂಬದವರು ಮರುದಿನ ರಾತ್ರಿ ಆಕೆಯನ್ನ ಸಮಾಧಿ ಮಾಡಿದ್ದರಂತೆ. ಇದಾದ ಬಳಿಕ ಸ್ಮಶಾನದ ಹೊರಗೆ ಬಾಲಕಿಯ ಶವ ಪತ್ತೆಯಾಗಿದೆ. ಇದನ್ನು ಕಂಡ ಬಾಲಕಿಯ ಕುಟುಂಬದವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಬಯಲಾದ ಬಳಿಕ ಅಂದಿನ ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ತಕ್ಷಣದ ತನಿಖೆ ಮಾಡಲು ಸೂಚಿಸಿದ್ದಾರೆ. ತನಿಖೆ ನಡೆಸುವ ವೇಳೆ ಬಾಲಕಿಯ ಶವವನ್ನು ಲೈಂಗಿಕ ದಾಹ ತೀರಿಸಲು ಹೊರ ತೆಗೆಯಲಾಗಿತ್ತು ಎಂಬ ಸತ್ಯ ಬಹಿರಂಗವಾಗಿದೆ.

ಕಿಲಾ ದಿದರ್ ಸಿಂಗ್ ಪೊಲೀಸರು ಶಂಕಿತನನ್ನು ಬಂಧಿಸಿ ತನಿಖೆ ನಡೆಸಿದಾಗ ಶವದ ಮೇಲೆಯೇ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಮಾಡಿದ್ದು ತಿಳಿದಿದೆ.ಈ ರೀತಿಯ ಘಟನೆ ಪಾಕಿಸ್ತಾನದಲ್ಲಿ ವರದಿಯಾದ ನಂತರ ತಮ್ಮ ಹೆಣ್ಣುಮಕ್ಕಳ ಸಮಾಧಿಯನ್ನ ಬೀಗ ಹಾಕಿ ರಕ್ಷಿಸುತ್ತಾರಂತೆ. ಇದನ್ನು ಕೇಳಿದಾಗ ವಿಚಿತ್ರ ಎಂದೆನಿಸದೆ ಇರದು. ಬದುಕ್ಕಿದಾಗ ನಿಶ್ಚಿಂತೆಯಿಂದ ಓಡಾಡುವುದು ಬಿಡಿ! ಈ ದೇಶದಲ್ಲಿ ಸತ್ತ ಮೇಲೂ ಕೂಡ ಜೀವಕ್ಕೆ ನೆಮ್ಮದಿ ಇಲ್ಲ ಎನ್ನುವುದೇ ಅಚ್ಚರಿ ಹಾಗೂ ಬೇಸರದ ಸಂಗತಿ. ಇದರಿಂದಾಗಿಯೇ ಪಾಕಿಸ್ತಾನದಲ್ಲಿ ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಬೀಗ ಹಾಕಿ ಅವರ ಶವಗಳನ್ನು ಲೈಂಗಿಕ ಶೋಷಣೆಯಿಂದ ಪಾರು ಮಾಡುತ್ತಾರಂತೆ.

 

ಇದನ್ನು ಓದಿ: Special Casual Leave: ಸರ್ಕಾರದಿಂದ ಹೊಸ ರಜಾ ನೀತಿ ಜಾರಿ! ಸರ್ಕಾರಿ ನೌಕರರಿಗೆ ಸಿಗಲಿದೆ Special Casual Leave! 

Leave A Reply

Your email address will not be published.