Sleep Deprivation: ಪುರುಷರೇ ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವಾದರೆ ಇಂತಹ ಸಮಸ್ಯೆ ಖಂಡಿತಾ ಕಾಡುತ್ತೆ!

Sleep Deprivation : ಒಬ್ಬ ವ್ಯಕ್ತಿ ಆರೋಗ್ಯಕರವಾಗಿ ಎಲ್ಲಾ ಆಯಾಮದಲ್ಲೂ ಇರಬೇಕು ಎಂದರೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಆಗ ದೇಹದಲ್ಲಿ ಸಮರ್ಪಕ ಪ್ರಮಾಣದಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಅಧ್ಯಯನ ಪ್ರಕಾರ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಕಡಿಮೆ ನಿದ್ದೆ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಯಾವೆಲ್ಲ ಆರೋಗ್ಯ ಸಮಸ್ಯೆಗಳು ಕಡಿಮೆ ನಿದ್ರೆ ಬರುವಂತೆ (Sleep Deprivation) ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ. ಹೌದು, ಪುರುಷರು ಕಡಿಮೆ ನಿದ್ದೆ ಮಾಡುವುದರಿಂದ
ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ದೈಹಿಕ ಆರೋಗ್ಯ ತಜ್ಞರಾದ ಡಾ. ಸಂದೀಪ್ ಪಾಟೀಲ್ ಪ್ರಕಾರ ಪುರುಷರಿಗೆ ಲೈಂಗಿಕ ವಿಷಯದಲ್ಲಿ ಆಸಕ್ತಿ ಕಡಿಮೆಯಾಗುವುದು, ಉದ್ರೇಕ ಇಲ್ಲದೆ ಆಗುವುದು, ನಪುಂಸಕತ್ವ, ಶೀಘ್ರ ಸ್ಖಲನ ಇವೆಲ್ಲವೂ ಸಹ ಎದುರಾಗುವುದು ಎಂದು ಸರಿಯಾಗಿ ನಿದ್ರೆ ಮಾಡದೇ ಇರುವುದರಿಂದ ಎಂಬ ವಿಷಯವನ್ನು ತಿಳಿಸಿದ್ದಾರೆ.

ಅದಲ್ಲದೆ ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಹುತೇಕ ಮಂದಿಗೆ ಮಕ್ಕಳಾಗುವ ವಿಚಾರದಲ್ಲಿ ಸಮಸ್ಯೆ ಕಾಡುತ್ತದೆ. ಕೇವಲ ಒಬ್ಬರ ಮೇಲೆ ಒಬ್ಬರು ತಪ್ಪು ಹಾಕಿಕೊಳ್ಳುತ್ತಾ ಜೀವನ ನಡೆಸಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಪುರುಷರು ರಾತ್ರಿಯ ಹೊತ್ತು ಗುಣಮಟ್ಟದ ನಿದ್ರೆ ಮಾಡದ ಕಾರಣ ಫಲವತ್ತತೆಯ ಕೊರತೆ ಉಂಟಾಗುತ್ತದೆ ಎಂಬುದು ಸೂಕ್ಷ್ಮ ವಿಚಾರವಾಗಿರುತ್ತದೆ.

ಮುಖ್ಯವಾಗಿ ಉತ್ತಮ ಗುಣಮಟ್ಟದ ನಿದ್ದೆ ಮಾಡದ ಪುರುಷರಲ್ಲಿ ದೇಹದಲ್ಲಿ ಟೆಸ್ಟೋಸ್ಟಿರೋನ್ ಗುಣಮಟ್ಟ ಕಡಿಮೆ ಆಗುತ್ತದೆ. ಇದು ಪುರುಷರ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಪುರುಷರಿಗೆ ಶಿಶ್ನದ ನಿಮಿರುವಿಕೆಯಲ್ಲಿ ಸಹಾಯ ಮಾಡಲು ದೇಹದಲ್ಲಿ ಟೆಸ್ಟೋಸ್ಟಿರೋನ್ ಸರಿಯಾದ ಪ್ರಮಾಣದಲ್ಲಿ ಇರಬೇಕು.
ಟೆಸ್ಟೋಸ್ಟಿರೋನ್ ಹಾರ್ಮೋನ್ ಮಲಗಿ ನಿದ್ರಿಸುತ್ತಿದ್ದಾಗ ಮಾತ್ರ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಅದರಲ್ಲೂ ಉತ್ತಮ ನಿದ್ದೆ ಮಾಡಿದವರಲ್ಲಿ ಮಾತ್ರ ಈ ಹಾರ್ಮೋನ್ ಹೆಚ್ಚು ಉತ್ಪತ್ತಿ ಆಗಲು ಸಾಧ್ಯವಾಗುತ್ತದೆ.

ಅಧ್ಯಯನ ಪ್ರಕಾರ, ಯಾರು ಸರಿಯಾಗಿ ನಿದ್ರೆ ಮಾಡುವುದಿಲ್ಲ ಅವರಲ್ಲಿ ಟೆಸ್ಟೋಸ್ಟಿರೋನ್ ಗಣನೀಯವಾಗಿ ಶೇಕಡ 70% ಕಡಿಮೆಯಾಗುತ್ತದೆ. ಇದು ಕ್ರಮೇಣವಾಗಿ ಲೈಂಗಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ.

ಅದಲ್ಲದೆ ಯಾರು ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡುವುದಿಲ್ಲ ಅವರಿಗೆ ಮಾನಸಿಕ ಸ್ಥಿತಿ ಹದಗೆಟ್ಟಿರುತ್ತದೆ. ಜೊತೆಗೆ ಲೈಂಗಿಕವಾಗಿ ಸಹ ಹೆಚ್ಚು ಚುರುಕುತನವನ್ನು ಹೊಂದಲು ಸಾಧ್ಯವಿರುವುದಿಲ್ಲ.

ಇನ್ನು ಬೆಳಗಿನ ಸಂದರ್ಭದಲ್ಲಿ ಚಟುವಟಿಕೆಯಿಂದ ಕೂಡಿ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿರುವುದಿಲ್ಲ.
ಇದರಿಂದ ದೇಹದ ಶಕ್ತಿ ಸಹ ಕುಂಠಿತವಾಗಿರುತ್ತದೆ. ವೀರ್ಯಾಣುಗಳು ಸರಿಯಾಗಿ ಬಿಡುಗಡೆ ಕೂಡ ಆಗುವುದಿಲ್ಲ. ಇದರಿಂದ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಇನ್ನು ನಿದ್ರಾಹೀನತೆ ಸಮಸ್ಯೆ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ. ಇದರಿಂದ ಲೈಂಗಿಕವಾಗಿ ಮತ್ತಷ್ಟು ಕುಂಠಿತ ಜೀವನವನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಆರೋಗ್ಯ ತಜ್ಞರಾದ ಡಾ. ಸಂದೀಪ್ ಪಾಟೀಲ್ ಪ್ರಕಾರ ಒಂದು ವೇಳೆ ಇಂತಹ ಸಮಸ್ಯೆಗೆ ಒಳಗಾಗಿದ್ದರೆ ಮತ್ತು ನಿಮ್ಮ ಸಂಗಾತಿಯ ಜೊತೆ ಉತ್ತಮ ಲೈಂಗಿಕ ಸಂಬಂಧ ಹೊಂದಲು ಸಾಧ್ಯವಾಗದಿದ್ದರೆ, ಮೊದಲು ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ.

ಒಟ್ಟಿನಲ್ಲಿ ಸರಿಯಾಗಿ ನಿದ್ದೆ ಮಾಡಲು ದಿನನಿತ್ಯ ಕಾರ್ಯ ಚಟುವಟಿಕೆಗಳು ಸಮಯಕ್ಕೆ ಸರಿಯಾಗಿರಬೇಕು. ಜೊತೆಗೆ ನಿಯಮಿತವಾದ ವ್ಯಾಯಾಮ ಅಗತ್ಯ. ಮುಖ್ಯವಾಗಿ ಧೂಮಪಾನ (smoking ) ಮತ್ತು ಮಧ್ಯಪಾನ (alcohol ) ಅಭ್ಯಾಸವನ್ನು ನಿಲ್ಲಿಸಬೇಕು. ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು
ಆರೋಗ್ಯಕರವಾದ ಆಹಾರ ಸೇವನೆ ಮಾಡಬೇಕು. ಸೂರ್ಯನ ಬಿಸಿಲಿನಲ್ಲಿ ಬೆಳಗ್ಗೆ ಮತ್ತು ಸಂಜೆ ಓಡಾಡಬೇಕು
ಮೊಬೈಲ್ (mobile ) , ಕಂಪ್ಯೂಟರ್ (computer ) ಇವುಗಳಿಂದ ರಾತ್ರಿ ಮಲಗುವ ಹೊತ್ತು ದೂರ ಇದ್ದಾಗ ನಿದ್ರೆ ಬರಲು ಸಹಾಯ ಆಗುತ್ತವೆ.

ಇದನ್ನೂ ಓದಿ: Women Deadbody in Beach: ಕಡಲತೀರದಲ್ಲಿ ತುಂಬು ಗರ್ಭಿಣಿಯ ಶವ ಪತ್ತೆ!

Leave A Reply

Your email address will not be published.