Capital Punishment: ಭಾರತೀಯನಿಗೆ ಸಿಂಗಾಪುರದಲ್ಲಿ ಗಲ್ಲು ಶಿಕ್ಷೆ ; ಈತನ ಕೊನೆಯ ಆಸೆ ಏನು ಗೊತ್ತಾ?

Capital punishment: ಭಾರತೀಯ ವ್ಯಕ್ತಿಯೊಬ್ಬನಿಗೆ ಸಿಂಗಾಪುರದಲ್ಲಿ ಗಲ್ಲುಶಿಕ್ಷೆ ಜಾರಿಯಾಗಿದೆ. ತಮಿಳುನಾಡು (tamilnadu) ಮೂಲದ ತಂಗರಾಜು ಸುಪ್ಪಯ್ಯಗೆ (46) ಸಿಂಗಾಪುರದಲ್ಲಿ ಇಂದು ಗಲ್ಲುಶಿಕ್ಷೆ (Capital punishment) ವಿಧಿಸಲಾಗಿದೆ. ಗಲ್ಲು ಶಿಕ್ಷೆಗೂ ಮುನ್ನ ಕೈದಿಯ ಇಚ್ಛೆಯನ್ನು ಕೇಳಿ ಈಡೇರಿಸಲಾಗುತ್ತದೆ. ಈತನಿಗೂ ಕೇಳಿದ್ದು, ಈತ ತನ್ನ ಕೊನೆಯ ಆಸೆ ಏನೆಂದು ಹೇಳಿದ್ದಾನೆ ಗೊತ್ತಾ?

1 ಕೆಜಿ. ಗೂ ಹೆಚ್ಚು ಗಾಂಜಾ (drug) ಕಳ್ಳಸಾಗಾಣಿಕೆಯ ಆರೋಪದಡಿ ಅಲ್ಲಿನ ಪೊಲೀಸರು 2014ರಲ್ಲಿ ತಂಗರಾಜುವನ್ನು ಬಂಧಿಸಿದ್ದರು. 2018ರಲ್ಲಿ ಗಲ್ಲುಶಿಕ್ಷೆ ಪ್ರಕಟವಾಗಿದ್ದು, ಇಂದು ಸಿಂಗಾಪುರ ಜೈಲಿನಲ್ಲಿ ಶಿಕ್ಷೆ ಜಾರಿಯಾಗಿದೆ. ಸಾಯುವ ಮುನ್ನ ಈತ ತನ್ನ ಕೊನೆಯ ಆಸೆ ಹೇಳಿದ್ದು, ತನಗೆ ತಿನ್ನುವುದಕ್ಕೆ ಊಟ, ತಿಂಡಿ ಬೇಕು ಎಂದಿದ್ದು, ಇಷ್ಟವಾದ ತಿನಿಸುಗಳ ಲಿಸ್ಟ್ ಕೊಟ್ಟಿದ್ದಾನೆ.

ತಂಗರಾಜು (tangaraju) ತನಗೆ ಚಿಕನ್ ರೈಸ್ (chicken rice), ನಸಿ ಬಿರಿಯಾನಿ, ಐಸ್‌ಕ್ರೀಮ್ ಸೋಡಾ ಮತ್ತು ಮಿಲೋ ಸ್ವೀಟ್ಸ್ ಬೇಕು ಎಂದು ಕೊನೆಯ ಆಸೆ ತಿಳಿಸಿದ್ದಾನೆ. ಜೈಲಿನ ಅಧಿಕಾರಿಗಳು ಅಪರಾಧಿ ಕೇಳಿದ ಎಲ್ಲವನ್ನೂ ತಂದುಕೊಟ್ಟರು. ಆದರೆ, ಮಿಲೋ ಸ್ವೀಟ್‌ಗಳನ್ನು ಮಾತ್ರ ತಂದು ಕೊಡಲು ಸಾಧ್ಯವಾಗಲಿಲ್ಲ.

ಮರಣದಂಡನೆ ರದ್ದುಗೊಳಿಸುವಂತೆ ವಿಶ್ವ ಸಂಸ್ಥೆ ಮನವಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಈತನನ್ನು ಗಲ್ಲಿಗೇರಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದ್ಯ ತಂಗರಾಜುವನ್ನು ಕಳೆದುಕೊಂಡ ಅವರ ಕುಟುಂಬ ಕಣ್ಣೀರು ಸುರಿಸುತ್ತಿದೆ. ಆದರೆ, ಕೊನೆಗೂ ಆತನ ಆಸೆಯನ್ನು ಈಡೇರಿಸಲಾಗಲೇ ಇಲ್ಲ. ಇಷ್ಟಪಟ್ಟ ತಿನಿಸು ತಿನ್ನಲಾಗಲಿಲ್ಲ.

“ತಂಗರಾಜನನ್ನು ಗಲ್ಲಿಗೆ ಹಾಕುವ ಹಿಂದಿನ ದಿನ ತಾನು ಜೈಲಿನಲ್ಲಿ ಸಂಪಾದಿಸಿದ ಹಣದಲ್ಲಿ ಜೈಲಿನ ಸಹ ಕೈದಿಗಳಿಗೆ ಫಿಶ್ ಬರ್ಗರ್ಸ್, ಕರಿ ಪಫ್ ಮತ್ತು ಸಾಫ್ಟ್ ಡ್ರಿಂಕ್ಸ್‌ಗಳನ್ನು ತರಿಸಿಕೊಟ್ಟಿದ್ದಾನೆ” ಎಂದು ಸಿಂಗಾಪುರ ಮೂಲದ ಸಾಮಾಜಿಕ ಕಾರ್ಯಕರ್ತೆ ಕೊಕಿಲಾ ಹೇಳಿದ್ದಾರೆ.

 

ಇದನ್ನು ಓದಿ: PAN Card: ಎಷ್ಟು ಪ್ಯಾನ್ ಕಾರ್ಡ್‌ ಹೊಂದಬಹುದು? ಉಲ್ಲಂಘನೆಗೆ ದಂಡವೆಷ್ಟು ಗೊತ್ತಾ? ಇಲ್ಲಿದೆ ಓದಿ

Leave A Reply

Your email address will not be published.