Special Casual Leave: ಸರ್ಕಾರದಿಂದ ಹೊಸ ರಜಾ ನೀತಿ ಜಾರಿ! ಸರ್ಕಾರಿ ನೌಕರರಿಗೆ ಸಿಗಲಿದೆ Special Casual Leave!

Special Casual Leave: ಸರ್ಕಾರಿ ಉದ್ಯೋಗಿಗಳಿಗೆ ಮಹತ್ವ ಮಾಹಿತಿ ಒಂದನ್ನು ಇಲ್ಲಿ ತಿಳಿಸಲಾಗಿದೆ. ಈಗಾಗಲೇ ಸರ್ಕಾರಿ ನೌಕರರಿಗೆ ಸರ್ಕಾರವು ರಜೆಯ ಬಗೆಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಸರ್ಕಾರಿ ನೌಕರರಿಗೆ ಸರ್ಕಾರ ಹೊಸ ರಜೆ ನೀತಿಯನ್ನು (Special Casual Leave) ಜಾರಿಗೆ ತಂದಿದೆ.

ಅಂಗಾಂಗ ದಾನ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರ ಹೊಸ ರಜೆ ನೀತಿಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ, ಕೇಂದ್ರ ನೌಕರರು ಮೊದಲಿಗಿಂತ ಹೆಚ್ಚು ರಜಾದಿನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಮುಖ್ಯವಾಗಿ ಅಂಗಾಂಗ ದಾನ ಮಾಡಿದ ಕೇಂದ್ರ ಉದ್ಯೋಗಿ ಈಗ 42 ದಿನಗಳ ವಿಶೇಷ ಕ್ಯಾಶುಯಲ್ ರಜೆ ಪಡೆಯುವುದು ಸಾಧ್ಯವಾಗುತ್ತದೆ.
DOPT ನೀಡಿದ ಅಧಿಕೃತ ಜ್ಞಾಪಕ ಪತ್ರದಲ್ಲಿ ನೌಕರ ದೇಹದ ಯಾವುದೇ ಭಾಗವನ್ನು ದಾನ ಮಾಡಿದರೆ ಅದನ್ನು ಬಹು ದೊಡ್ಡ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುವುದಕ್ಕೆ ಸಮಯಾವಕಾಶ ಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಿದ ಉದ್ಯೋಗಿಗೆ ಗರಿಷ್ಠ 42 ದಿನಗಳ ವಿಶೇಷ ರಜೆ ನೀಡಬೇಕು. ಇದಕ್ಕಾಗಿ ನಿಯಮಗಳನ್ನು ಕೂಡ ನಿಗದಿಪಡಿಸಲಾಗಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಅಂಗಾಂಗ ದಾನ ಮಾಡುವ ಶಸ್ತ್ರ ಚಿಕಿತ್ಸೆಗೆ ಒಳಪಡುವ ಉದ್ಯೋಗಿಗಳಿಗೆ ಗರಿಷ್ಠ 42 ದಿನ ರಜೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕಾಗಿ ಸರಕಾರದಿಂದ ನೋಂದಾಯಿತ ವೈದ್ಯರ ಶಿಫಾರಸಿನ ಮೇರೆಗೆ ರಜೆ ನೀಡಲಾಗುವುದು. ಆಸ್ಪತ್ರೆಗೆ ದಾಖಲಾಗುವ ಒಂದು ವಾರದ ಮೊದಲು ಈ ರೀತಿಯ ರಜೆಯನ್ನು ಪಡೆಯಬಹುದು.
ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ 30 ದಿನಗಳ ರಜೆಯನ್ನು ಕ್ಯಾಶುಯಲ್ ಲಿವ್ ಆಗಿ ಮಂಜೂರು ಮಾಡಲಾಗುತ್ತದೆ. ಹೊಸ ನಿಯಮವು ಏಪ್ರಿಲ್ 25, 2023 ರಿಂದ ಜಾರಿಗೆ ಬಂದಿದೆ. ಆದರೆ ಡಿಒಪಿಟಿ ನೀಡಿದ ಜ್ಞಾಪಕ ಪತ್ರದಲ್ಲಿ, ಈ ಆದೇಶವು ಸಿಸಿಎಸ್ ನಿಯಮದ ಅಡಿಯಲ್ಲಿ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ .ಆಯ್ಕೆ ಮಾಡಲಾದ ನೌಕರರ ಮೇಲೆ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಸದ್ಯ ರೈಲ್ವೆ ನೌಕರರು, ಅಖಿಲ ಭಾರತ ಸೇವೆಗಳ ನೌಕರರಿಗೆ ರಜಾದಿನಗಳಿಗೆ ಸಂಬಂಧಿಸಿದ ಹೊಸ ನಿಯಮ, ಹೊಸ ರಜಾ ನೀತಿ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.
ಇದನ್ನು ಓದಿ: Operation: ಆಸ್ಪತ್ರೆಯಲ್ಲಿ ಆಪರೇಶನ್ ವೇಳೆ ಹೋದ ಕರೆಂಟ್! ಸಿನಿಮೀಯ ಮಾದರಿಯಲ್ಲಿ ಜೀವ ಕಾಪಾಡಿದ ವೈದ್ಯರ ತಂಡ!