Operation: ಆಸ್ಪತ್ರೆಯಲ್ಲಿ ಆಪರೇಶನ್ ವೇಳೆ ಹೋದ ಕರೆಂಟ್! ಸಿನಿಮೀಯ ಮಾದರಿಯಲ್ಲಿ ಜೀವ ಕಾಪಾಡಿದ ವೈದ್ಯರ ತಂಡ!

Operation Theater: ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ (Calcutta Medical College) ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಆಸ್ಪತ್ರೆಯಲ್ಲಿ ಕತ್ತಲು ಆವರಿಸಿದೆ. ಆಸ್ಪತ್ರೆಯ ಆಪರೇಷನ್(Operation Theater) ಥಿಯೇಟರ್ ನಲ್ಲಿಯೂ ಕತ್ತಲು ಆವರಿಸಿ ಕೆಲ ಸಮಯ ಗೊಂದಲದ ವಾತಾವರಣ ಕಂಡುಬಂದಿದೆ. ಈ ಸಂದರ್ಭ ಸಿನಿಮೀಯ ಮಾದರಿಯಲ್ಲಿ ವೈದ್ಯ ತಂಡ ರೋಗಿಯ ಚಿಕಿತ್ಸೆ ನಡೆಸಿ ಜೀವ ಉಳಿಸಿದ ಘಟನೆ ನಡೆದಿದೆ.

ಹಾಸ್ಪಿಟಲ್ ನಲ್ಲಿ ವೈದ್ಯರ ತಂಡ ರೋಗಿಯೊಬ್ಬನಿಗೆ ಮೂತ್ರಪಿಂಡದಲ್ಲಿದ್ದ ಗಡ್ಡೆಯನ್ನು (Tumor in the patient’s kidney) ತೆಗೆಯಲು ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ. ಹೀಗೆ ಆಪರೇಷನ್​ ಮಾಡುವ ಸಂದರ್ಭ ಗುಡುಗು ಸಿಡಿಲಿನ ಅಬ್ಬರಕ್ಕೆ ಇಡೀ ಆಸ್ಪತೆಯಲ್ಲಿ ವಿದ್ಯುತ್ ಕಡಿತವಾಗಿ ಕೊಠಡಿಯಿಂದ ಹೊಗೆ ಬರಲಾರಂಭಿಸಿದೆ. ಇದರಿಂದ ಸುರಕ್ಷತೆಯನ್ನು ಗಮನದಲ್ಲಿರಿಸಿ ವಿದ್ಯುತ್ ಕಡಿತ ಮಾಡಲಾಗಿದೆ. ಈ ಸಂದರ್ಭ ಆಪರೇಶನ್ ಥಿಯೇಟರ್ ನಲ್ಲಿದ್ದ ರೋಗಿಯ ಶಸ್ತ್ರಚಿಕಿತ್ಸೆ ಮಾಡಲು ವಿದ್ಯುತ್ ಇಲ್ಲದೆ ವೈದ್ಯರು ಪರದಾಡಬೇಕಾದ ಸ್ಥಿತಿ ಎದುರಾಗಿದೆ.

ತ್ರೀ ಈಡಿಯಟ್ಸ್​ ಸಿನಿಮಾ ಕ್ಲೈಮ್ಯಾಕ್ಸ್​ ಮಾದರಿಯಲ್ಲಿ ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ವೈದ್ಯರು ಮೊಬೈಲ್ ಟಾರ್ಚ್​ ಬಳಸಿ ಆಪರೇಷನ್​ ಮುಂದುವರೆಸುವ ಮೊದಲು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದು ಜೀವದ ಪ್ರಶ್ನೆಯಾಗಿರುವ ಹಿನ್ನೆಲೆ ಅನಿವಾರ್ಯ ಸಂದರ್ಭಗಳಲ್ಲಿ ಸಿನಿಮಾ ಮಾದರಿಯಲ್ಲಿ ಮೊಬೈಲ್ ಟಾರ್ಚ್ ಬಳಸಿ ವೈದ್ಯರ ತಂಡ 41 ವರ್ಷದ ಮಹಿಳೆಯ ಜೀವವನ್ನು ಉಳಿಸಿದ್ದಾರೆ.

ವೈದ್ಯರ ತಂಡ ರೋಗಿಯ ಮೂತ್ರಪಿಂಡದ ಜೊತೆಗೆ ಗೆಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ಬಹುತೇಕ ಮುಗಿಸಿದ್ದರಂತೆ. ಆದರೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿಯಿಂದಾಗಿ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತವಾಗಿದ್ದರಿಂದ ಈ ಸಂದರ್ಭ ರೋಗಿಯನ್ನು ಆ ಸ್ಥಿತಿಯಲ್ಲಿ ಹಾಗೆ ಬಿಡಲು ಸಾಧ್ಯವಿಲ್ಲದೇ ಇದ್ದ ಹಿನ್ನೆಲೆ 45 ನಿಮಿಷಗಳ ಶಸ್ತ್ರಚಿಕಿತ್ಸೆಯನ್ನು ಮೊಬೈಲ್ ಬೆಳಕಿನ ಮೂಲಕ ವೈದ್ಯರು ಮಾಡಿ ಮುಗಿಸಿದ್ದು, ಸದ್ಯ ರೋಗಿ ಆರೋಗ್ಯವಾಗಿರುವ ಕುರಿತು ವೈದ್ಯ ಸುನಿರ್ಮಲ್ ಚೌಧರಿಯವರು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Martin Teaser deleted from YouTube: ಯ್ಯೂಟೂಬ್‌ನಿಂದ ‘ಮಾರ್ಟಿನ್’ ಟೀಸರ್ ಡಿಲೀಟ್! ರಷ್ಯಾ ಹ್ಯಾಕರ್ಸ್‌ಗಳದ್ದೇ ಕೈವಾಡ? ಧ್ರುವ ತಂಡಕ್ಕೆ ಸಿಕ್ಕಿದ್ದೆಷ್ಟು ಹೋಗಿದ್ದೆಷ್ಟು?

Leave A Reply

Your email address will not be published.