BS Yediyurappa: ಶೆಟ್ಟರ್ ಸೋಲಿಸೋ ಜವಾಬ್ದಾರಿ ನನ್ನದು, ಅವರು ಸೋತ ದಿನ 1 ಲಕ್ಷ ಜನ ಸೇರಿಸಿ ವಿಜಯೋತ್ಸವ – ಯಡಿಯೂರಪ್ಪ ಫೀಲ್ಡ್’ಗೆ !

BS Yediyurappa: ಹುಬ್ಬಳ್ಳಿ: ಬಿಜೆಪಿ ತ್ಯಜಿಸಿ ಕಾಂಗ್ರೆಸಿಗೆ ಹೋದ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಮಧ್ಯ ದಿನ ವಾಕ್ ಸಮರ ಕಾಲಕಕ್ಕೆ ಏರಿದೆ. ಏನಕ್ಕೇನ ಪ್ರಕಾರ ಏನು ಶೆಟ್ಟರ್ ಅವರನ್ನು ಅವರ ಸ್ವಕ್ಷೇತ್ರದಲ್ಲಿ ಸೋಲಿಸಲು ಬಿಜೆಪಿಯಿಂದ ತಯಾರಿ ನಡೆದಂತಿದೆ. ಶೆಟ್ಟರ್ ಅವರನ್ನು ಸೋಲಿಸುವುದು ನನ್ನ ಜವಾಬ್ದಾರಿ ಎಂದು ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಜಗದೀಶ್ ಶೆಟ್ಟರ್ ಪ್ರತಿ ದಾಳಿ ನಡೆಸಿದ್ದಾರೆ.

‘ಒಬ್ಬ ಲಿಂಗಾಯತ ನಾಯಕನನ್ನು ಮುಗಿಸಲು ಮತ್ತೊಬ್ಬ ಲಿಂಗಾಯತ ನಾಯಕನ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸ ಇದೀಗ ಬಿಜೆಪಿಯಲ್ಲಿ ನಡೆಯುತ್ತಿದೆ. ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಮೇಲೆ ಒತ್ತಡ ಹೇರಿ, ನನ್ನ ವಿರುದ್ಧ ಹೇಳಿಕೆ ಕೊಡಿಸಿದ್ದಾರೆ. ಸಮಾಜದಲ್ಲಿ ಒಡಕು – ಡಿವೈಡ್‌ ಅಂಡ್ ರೂಲ್ – ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು.

ಈ ನಡುವೆ, ಶೆಟ್ಟರ್ ಅವರನ್ನು ಸೋಲಿಸಬೇಕೆಂದು ಲಿಂಗಾಯತ ಸಮಾಜ ಬಾಂಧವರಿಗೆ ಕರೆ ನೀಡಿದ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ‘ನನಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ ಎಂದಿದ್ದೆ. ಇದಕ್ಕೆ ಅವರು ಇದುವರೆಗೆ ಉತ್ತರಿಸಿಲ್ಲ. ಈಗ ಬೇರೆಯವರ ಮೂಲಕ ನನ್ನ ಮೇಲೆ ಟೀಕೆ ಮಾಡಿಸುತ್ತಿದ್ದಾರೆ. ಯುದ್ಧ ಮಾಡುವುದಿದ್ದರೆ ಬಹಿರಂಗವಾಗಿ ಬರಲಿ ‘ ಎಂದು ಜಗದೀಶ್ ಶೆಟ್ಟರ್ ಅವರು ಸವಾಲೆಸೆದರು.

ಈ ಸಂದರ್ಭ ಕರೆ ನೀಡಿದ ಯಡಿಯೂರಪ್ಪನವರು,’ ಜಗದೀಶ್ ಶೆಟ್ಟರ್ ಅವರು ಜೀವನದಲ್ಲಿ ಎಂದೂ ಮರೆಯಲಾಗದಂತಹಾ ಸೋಲು ಅನುಭವಿಸುವಂತಾಗಬೇಕು. ಅವರು ಮಾಡಿದ ವಿಶ್ವಾಸಘಾತುಕ ಕೆಲಸಕ್ಕೆ ಎಲ್ಲರೂ ಒಂದಾಗಿ ಅವರನ್ನು ಮನೆಗೆ ಕಳುಹಿಸಬೇಕು. ಫಲಿತಾಂಶದ ನಂತರ ಶೆಟ್ಟ‌ರ್ ಸಮಕ್ಷಮ ಒಂದು ಲಕ್ಷ ಜನ ಸೇರಿಸಿ ವಿಜಯೋತ್ಸವ ಆಚರಿಸಬೇಕು’ ಎಂದು ಸಾರಿದ್ದಾರೆ.

BJP ಯಲ್ಲಿ 40% ಕಮಿಷನ್ ಎಂಬ ಸವದಿ ಹೇಳಿಕೆ: ಬಿಜೆಪಿಯಲ್ಲಿದ್ದಾಗ ಏಕೆ ಹೇಳಲಿಲ್ಲ?

ಬಿಜೆಪಿ ಸರ್ಕಾರದಲ್ಲಿ ಶೇಕಡ 40 ರಷ್ಟು ಕಮಿಷನ್ ಇದೆ ಎಂಬ ಲಕ್ಷ್ಮಣ್ ಸವದಿ ಅವರ ಆರೋಪ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದರ ಬಗ್ಗೆ ತನಿಖೆ ನಡೆಸಲಾಗುವುದು ಎಂಬ ಬಿಜೆಪಿ ನಿರ್ಗಮಿತ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ‘ ಒಂದು ವೇಳೆ ಬಿಜೆಪಿಯಲ್ಲಿ ಆ ಮಟ್ಟಿನ ಕಮಿಷನ್ ವ್ಯವಹಾರ ಇದ್ದಿದ್ದರೆ ಅವರು ಬಿಜೆಪಿಯಲ್ಲಿದ್ದಾಗಲೇ ಹೇಳಬಹುದಿತ್ತಲ್ಲ? ಏಕೆ ಆಗ ಸುಮ್ಮನಿದ್ದರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Sumalatha ambreesh : ಆ ಒಂದು ಕುಟುಂಬ ಮಾತ್ರ ಈ ಚುನಾವಣೆಯಲ್ಲೂ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ : ಮತ್ತೆ ಎಚ್ಡಿಕೆ ವಿರುದ್ಧ ಹರಿಹಾಯ್ದ ಸುಮಲತಾ ಅಂಬರೀಷ್

 

Leave A Reply

Your email address will not be published.