Supreme court: ಆಯುರ್ವೇದ ಡಾಕ್ಟರ್ Vs MBBS ಸಂಬಳ: ಇಬ್ಬರೂ ಸಮಾನ ವೇತನಕ್ಕೆ ಅರ್ಹರಲ್ಲ ಎಂದ ಸುಪ್ರೀಂ, ಯಾರಿಗೆ ಜಾಸ್ತಿ ?!

Share the Article

Ayurvedic Doctor Vs MBBS Salary: ವೈದ್ಯಕೀಯ ವಿಷಯದ ಕುರಿತು ಮಹತ್ವದ ತೀರ್ಪು ನೀಡಿದ ಸುಪ್ರಿಂ ಕೋರ್ಟ್ (Supreme Court), ಆಯುರ್ವೇದ ಡಾಕ್ಟರ್ ಮತ್ತು ಎಂಬಿಬಿಎಸ್ ವೈದ್ಯರು ಸಮಾನ ವೇತನಕ್ಕೆ (Ayurvedic Doctor Vs MBBS Salary) ಅರ್ಹರಲ್ಲ ಎಂದು ಸುಪ್ರೀಂ ಹೇಳಿದೆ.

ಆಯುರ್ವೇದ ವೈದ್ಯರು (Ayurvedic Doctor) ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡಲು ಸಾಧ್ಯವಿಲ್ಲ, ಆದರೆ, ಎಬಿಬಿಎಸ್ ವೈದ್ಯರು (MBBS doctor) ಸಹಾಯ ಮಾಡಬಹುದು. ಶಸ್ತ್ರಚಿಕಿತ್ಸಾ ವಿಧಾನಗಳ ವಿಷಯದಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮಾನರಲ್ಲ, ಹಾಗಾಗಿ ಸಮಾನ ವೇತನಕ್ಕೂ ಅರ್ಹರಲ್ಲ ಎಂದು ಹೇಳಿದೆ.

“ಅಲೋಪತಿ ವೈದ್ಯರು ತುರ್ತು ಕರ್ತವ್ಯಗಳನ್ನು ನಿರ್ವಹಿಸಬೇಕು. ಮತ್ತು ಡ್ರಾಮಾ ಕೇರ್ ಒದಗಿಸಬೇಕು. ಅವರು ಅಭ್ಯಾಸ ಮಾಡುವ ವಿಜ್ಞಾನದ ಸ್ವರೂಪದಿಂದ ಮತ್ತು ವಿಜ್ಞಾನ ಹಾಗೂ ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯೊಂದಿಗೆ ಅಲೋಪತಿ ವೈದ್ಯರು ನಿರ್ವಹಿಸಲು ಸಮರ್ಥರಾಗಿರುವ ತುರ್ತು ಕರ್ತವ್ಯ ಮತ್ತು ಅವರು ನೀಡುವ ಸಾಮರ್ಥ್ಯವಿರುವ ಆಘಾತ ಆರೈಕೆಯನ್ನು ಆಯುರ್ವೇದ ವೈದ್ಯರಿಂದ ನಿರ್ವಹಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ಪೀಠವು, ಎರಡೂ ವರ್ಗದ ವೈದ್ಯರು ಸಮಾನ ವೇತನಕ್ಕೆ ಅರ್ಹರಾಗಿಲ್ಲ. ಯಾಕೆಂದರೆ, ಅವರು ಸಮಾನ ಕೆಲಸವನ್ನು ಮಾಡುತ್ತಿಲ್ಲ. ಇಬ್ಬರು ಕೆಲಸಗಳು ವಿಭಿನ್ನ ಎಂದು ಹೇಳಿದೆ.

ಇದನ್ನೂ ಓದಿ: Bank Customers: ಈ ಬ್ಯಾಂಕ್‌ನ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಸಲು ಎರಡು ಹೊಸ ಯೋಜನೆ ಪರಿಚಯಿಸಿದ ದೊಡ್ಡ ಬ್ಯಾಂಕ್‌!!!

Leave A Reply