Mann Ki Baat 100: ಮನ್ ಕೀ ಬಾತ್ ಅನ್ನು ಮನಸಾರೆ ಹೊಗಳಿದ ಅಮೀರ್ ಖಾನ್ – ಇದು ವಿಶ್ವ ನಾಯಕರು ಮಾಡೋ ಕೆಲ್ಸ ಎಂದ ನಟ !
Mann Ki Baat@100 : ಪ್ರಧಾನಿಯವರ ಮನ್ ಕೀ ಬಾತ್ (Mann Ki Baat@100)ಕಾರ್ಯಕ್ರಮವನ್ನು ಬಾಲಿವುಡ್ ನಟ ಆಮಿರ್ ಖಾನ್ ಹೊಗಳಿ ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಪ್ರತಿ ತಿಂಗಳ ಕೊನೇ ಭಾನುವಾರ ನಡೆಸಿಕೊಡುವ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ ಶತಕದ ದಾಖಲೆ ಬರೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 30ರಂದು ಮನ್ ಕೀ ಬಾತ್ನ 100ನೇ ಸಂಚಿಕೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾನುಲಿ ಕಾರ್ಯಕ್ರಮ ಮನ್ ಕೀ ಬಾತ್ ಕಾರ್ಯಕ್ರಮದ ಸಂದರ್ಭ ಒಟ್ಟು 700 ಗಣ್ಯರ/ಸಾಧಕರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಕಲೆ, ಸಂಸ್ಕೃತಿ, ವ್ಯಾಪಾರ, ಕ್ರೀಡೆ, ಸಾಮಾಜಿಕ ಕೆಲಸ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದ್ದರು. ಸಿನಿಮಾ ರಂಗದ ಬಾಲಿವುಡ್ ನಟಿ ರವೀನಾ ಟಂಡನ್, ಕ್ರೀಡಾ ಪಟುಗಳಾದ ಅಥ್ಲೀಟ್ ದೀಪಿಕಾ ಮಲಿಕ್ , ಪತ್ರಕರ್ತರು, ರೇಡಿಯೋ ಜಾಕಿಗಳು, ಉದ್ಯಮಿಗಳು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮನ್ ಕೀ ಬಾತ್@100 ರಾಷ್ಟ್ರೀಯ ಸಮಾವೇಶ ಜರುಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಡೆಸಿದ ಮನ್ ಕೀ ಬಾತ್ ರಾಷ್ಟ್ರೀಯ ಸಮಾವೇಶದಲ್ಲಿ( National Conclave on Mann Ki Baat@ 100 ) ಪ್ರಧಾನಿ ಮೋದಿಯವರು ನಡೆಸಿಕೊಡುವ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮ (Mann Ki Baat@100) ಚಾರಿತ್ರಿಕವಾಗಿದ್ದು, ಪ್ರಧಾನಿಯವರಿಗೆ ಜನರ ಜತೆ ಸಂವಹನ ಮಾಡಲು ಉತ್ತಮ ವೇದಿಕೆಯಾಗಿದೆ ಎಂದು ನಟ ಆಮಿರ್ ಖಾನ್ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ, ದೇಶದ ಪ್ರಧಾನಿ ಜನರೊಂದಿಗೆ ಮಹತ್ವದ ವಿಷಯಗಳನ್ನು ಚರ್ಚಿಸಲು, ತಮ್ಮ ಚಿಂತನೆ ಅಭಿಪ್ರಾಯ ವ್ಯಕ್ತಪಡಿಸಲು ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮವನ್ನು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಹೀಗಾಗಿ, ಈ ಕಾರ್ಯಕ್ರಮ ಭಾರತೀಯರ ಮೇಲೆ ದೊಡ್ದ ಪ್ರಮಾಣದಲ್ಲಿ ಪ್ರಭಾವ ಬೀರಿದ್ದು, ಈ ಕಾರ್ಯಕ್ರಮ ಪ್ರಶಂಸನೀಯವೆಂದು ಅಮೀರ್ ಖಾನ್ ಬುಧವಾರ ಮೋದಿ ಅವರ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: PM Modi: ಇಂದು ಮೋದಿಯ ವರ್ಚುವಲ್ ಸಭೆ: ಚಕ್ರಾಧಿಪತಿಯ ಅಂತಿಮ ಆರ್ಡರ್’ಗೆ ಕಾಯುತ್ತಿರುವ 50 ಲಕ್ಷ ಸೈನಿಕರು !!!