Bengaluru: ಊರಿಗೆ ಹೋಗಲು ರಜೆ ನೀಡದ ಸಂಸ್ಥೆ : ಮನನೊಂದು ಕಟ್ಟಡದಿಂದಹಾರಿ ಯುವತಿ ಆತ್ಮಹತ್ಯೆ
Bengaluru: ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಊರಿಗೆ ಹೋಗಲು ರಜೆ ನೀಡುತ್ತಿಲ್ಲ ಎಂದು ಮನನೊಂದು ಹಾಸ್ಟೆಲ್‌ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ರೀಮಾ ಕುಮಾರಿ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.
ರೀಮಾ ಕುಮಾರಿ ಅವರು ಪಾಟ್ನಾದಲ್ಲಿ ಟೈಲರಿಂಗ್ ತರಬೇತಿ ಪಡೆದುಕೊಂಡಿದ್ದು ಕಳೆದ 8 ತಿಂಗಳಿನಿಂದ ಚೊಕ್ಕಸಂದ್ರದಲ್ಲಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲಿ ಸರಿಯಾಗಿ ರಜೆ ನೀಡದಿದ್ದರಿಂದ ಬಿಹಾರದಲ್ಲಿರುವ ಆಕೆಯ ಊರಿಗೂ ಹೋಗಲು ಅಸಾಧ್ಯವಾಗುತ್ತಿತ್ತು.ಇದರಿಂದ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ರೀಮಾ, ಬುಧವಾರ ಬೆಳಗ್ಗೆ ವಾಸವಿದ್ದ ಹಾಸ್ಟೆಲ್‌ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಆದರೆ ಘಟನೆ ನಡೆದು ಎರಡು ದಿನ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು,ಬಳಿಕ ಗಾರ್ಮೆಂಟ್ ನೌಕರರ ಒಕ್ಕೂಟದ ಒತ್ತಾಯದ ಬಳಿಕ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: Kadaba: ಬೈಕ್ ಸ್ಕಿಡ್ ಸವಾರ ಸ್ಥಳದಲ್ಲೇ ಮೃತ್ಯು