Sukanya Samriddhi Yojan: 63ಲಕ್ಷ ರೂಪಾಯಿಯನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಪಡೆಯಲು ಈ ನಿಯಮ ಖಂಡಿತ ಪಾಲಿಸಿ!
Sukanya Samriddhi Yojan: ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojan) ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ರೂಪಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಸರ್ಕಾರ ಹೆಣ್ಣು ಮಕ್ಕಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅವುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದಾಗಿದ್ದು, ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಇದು ಅತ್ಯುತ್ತಮ ಹಣ ಉಳಿತಾಯ(girl child saving Scheme) ಮಾಡಲು ಪ್ರೇರೇಪಿಸುತ್ತದೆ. ಈ ಯೋಜನೆಯು ಪೋಷಕರಿಗೆ ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಅಧಿಕೃತ ಬ್ಯಾಂಕ್ ಮೂಲಕ ಇಲ್ಲವೇ ಪೋಸ್ಟ್ ಆಫೀಸ್ (Post Office) ಶಾಖೆಯ ಮೂಲಕ ಉಳಿತಾಯ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಖಾತೆ ತೆರೆಯುವುದು ಹೇಗೆ? ಏನೆಲ್ಲ ಅರ್ಹತೆಗಳಿರಬೇಕು? ಈ ಕುರಿತ ಡೀಟೈಲ್ಸ್ ಇಲ್ಲಿದೆ ನೋಡಿ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವುದು ಹೇಗೆ?
ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಕೇವಲ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಣ್ಣು ಮಗುವಿಗೆ ಅವಕಾಶವಿದ್ದು, ಎಸ್ಎಸ್ವೈ ಖಾತೆ ತೆರೆಯುವಾಗ, ಹೆಣ್ಣು ಮಗುವಿನ ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ) (Birth Certificate) ಕಡ್ಡಾಯವಾಗಿ ಬೇಕಾಗುತ್ತದೆ. ಇದಕ್ಕಾಗಿ,ಆಯಾ ಸರ್ಕಾರಿ ಪೋರ್ಟಲ್ನಿಂದ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಫಾರ್ಮ್ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿಕೊಂಡು ಹೆಣ್ಣು ಮಗು ಮತ್ತು ಪೋಷಕರ ಫೋಟೋ, ಗುರುತಿನ ಪುರಾವೆ, ವಿಳಾಸ ಪುರಾವೆ , ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಈ ಎಲ್ಲ ದಾಖಲೆಗಳ ಮೂಲಕ ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಬಹುದು.
ಪೋಷಕರು ಹೆಣ್ಣು ಮಗು ಹುಟ್ಟಿದಾಗಿನಿಂದ ಮಗುವಿಗೆ 10 ವರ್ಷ ತುಂಬುವವರೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಎಸ್ಎಸ್ವೈ ಖಾತೆಯನ್ನು ತೆರೆಯಬಹುದಾಗಿದೆ. ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಧಿಕೃತ ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್ ಗಳಲ್ಲಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ.ಇದರ ಜೊತೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಮಾತ್ರ ಠೇವಣಿದಾರರಿಂದ ಖಾತೆಯನ್ನು ತೆರೆಯಬಹುದಾಗಿದ್ದು, ಹೆಣ್ಣು ಮಗುವಿನ ನೈಸರ್ಗಿಕ ಪೋಷಕರು ಅಥವಾ ಕಾನೂನು ಪಾಲಕರಿಗೆ ಎರಡು ಹೆಣ್ಣು ಮಕ್ಕಳಿದ್ದರೆ ಆ ಇಬ್ಬರ ಹೆಸರಿನಲ್ಲೂ ಖಾತೆಯನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ.
ಎಸ್ಎಸ್ವೈ ಖಾತೆಯಲ್ಲಿ ವಾರ್ಷಿಕವಾಗಿ ಶೇ 8.1 ರಷ್ಟು ಬಡ್ಡಿದರ ಲಭ್ಯವಾಗಲಿದೆ. ಕೇಂದ್ರ ಸರಕಾರದ ‘ಬೇಟಿ ಬಚಾವೊ ಬೇಟಿ ಪಡಾವೊ’ ಅಭಿಯಾನದ ಅಂಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ) ಆರಂಭಿಸಿದೆ. ಅಷ್ಟೇ ಅಲ್ಲದೆ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ಕಡಿತದ ಮೂಲಕ ಆದಾಯ ತೆರಿಗೆಯ ಪ್ರಯೋಜನ ಕೂಡ ಪಡೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಗರಿಷ್ಠ 1.5 ಲಕ್ಷ ರೂ. ವರಗೆ ಠೇವಣಿ ಮಾಡಲು ಅನುವು ಮಾಡಿಕೊಡಲಾಗಿದೆ. ಹಣ ಹಿಂಪಡೆಯುವ ಸಮಯದಲ್ಲಿ ಈ ಖಾತೆಯಲ್ಲಿ ಠೇವಣಿ ಮಾಡಿದ ಹಣಕ್ಕೆ ಶೇ.7.6 ರಷ್ಟು ಬಡ್ಡಿ ಎಂದು ಭಾವಿಸಿದರೆ, ಹುಡುಗಿಗೆ 18 ವರ್ಷ ತುಂಬಿದಾಗ ಭಾಗಶಃ ಹಿಂತೆಗೆದುಕೊಳ್ಳಬಹುದಾಗಿದ್ದು, 21ನೇ ವಯಸ್ಸಿನಲ್ಲಿ ಸಂಪೂರ್ಣ ಹಣವನ್ನು ತೆಗೆದುಕೊಳ್ಳಬಹುದು.
ಮೆಚ್ಯುರಿಟಿ ಸಮಯದಲ್ಲಿ ಬಡ್ಡಿದರ ಶೇಕಡ 7.6ರಷ್ಟು ಇದ್ದರೆ, ಒಬ್ಬ ವ್ಯಕ್ತಿಯು ತಿಂಗಳಿಗೆ 12,500 ರೂಪಾಯಿಯಂತೆ ವರ್ಷದಲ್ಲಿ ಹನ್ನೆರಡು ಕಂತು ಕಟ್ಟಬೇಕಾಗುತ್ತದೆ. ಆ ಬಳಿಕ ಹೂಡಿಕೆದಾರರು ಆದಾಯ ತೆರಿಗೆಯ 80ಸಿಸಿಯಡಿ 1.5 ಲಕ್ಷ ರೂ.ವರೆಗೆ ತೆರಿಗೆ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಮಗಳಿಗೆ 21 ವರ್ಷ ವಯಸ್ಸಾದಾಗ ಹೂಡಿಕೆದಾರರು ಪೂರ್ತಿ ಹಣವನ್ನು ಪಡೆಯಲು ಇಚ್ಚಿಸಿದರೆ ಆ ಮೊತ್ತ 63,79,634 ರೂ. ಆಗಿರುತ್ತದೆ.
ಇದನ್ನೂ ಓದಿ: Karnataka Rain: ಸೈಕ್ಲೋನ್ ಎಫೆಕ್ಟ್! ಬರಲಿದೆ ಬಿರುಸಾದ ಮಳೆ, 2 ದಿನ ಎಲ್ಲೋ ಅಲರ್ಟ್!