Priyanka Gandhi: ಮೈಸೂರು ಮೈಲಾರಿ ಹೋಟೆಲಿನಲ್ಲಿ ದೋಸೆ ಹುಯ್ದ ಪ್ರಿಯಾಂಕಾ ಗಾಂಧಿ | ಕರಟಿದ ದೋಸೆಯ ಕ್ವಾಲಿಟಿ ಹೇಳಿತ್ತು ಆಕೆಯ ಅನುಭವ – ವಿಡಿಯೋ ರಿಪೋರ್ಟ್ !

Priyanka Gandhi: ಮೈಸೂರು: ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಸುಪುತ್ರಿ, ಭಾರತದ ಮುಂದಿನ ಮಹಿಳಾ ಪ್ರಧಾನಮಂತ್ರಿ ಎಂದೇ ಬಿಂಬಿಸಿಕೊಳ್ಳುವ ಶ್ರೀಮತಿ ಪ್ರಿಯಾಂಕ ಗಾಂಧಿ (Priyanka Gandhi) ವಾದ್ರ ಅವರು ಮೈಸೂರಿನಲ್ಲಿ ದೋಸೆ ಹಾಕಿದ್ದಾರೆ. ಅವರು ತಯಾರಿಸಿದ ವಿಭಿನ್ನ ರುಚಿಯ ದೋಸೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

 

ಆಕೆ ದೋಸೆ ಹುಯ್ದ ಮತ್ತು ಆ ದೋಸೆಯ ಕ್ವಾಲಿಟಿ ಕಂಡವರು ಅಡುಗೆಯಲ್ಲಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರಿಗೆ ಎಷ್ಟು ಅನುಭವ ಇದೆ ಎಂಬುದು ಕಾಣುತ್ತಿದೆ ಎಂದು ತಮಾಷೆ ಮಾಡಿದ್ದಾರೆ. ಹೌದು, ಮೈಸೂರಿನ ಮೈಲಾರಿ ಹೋಟೆಲ್ ಗೆ ಇವತ್ತೇ ಈಗಲೇ ಹೋದರೆ ಬಿಕರಿ ಆಗದೆ ಉಳಿದ ಸೆಟ್ ದೋಸೆ ಸಿಗಬಹುದು !. ಯಾಕೆ ಅಂತದೇನಾಗಿತ್ತು ಪ್ರಿಯಾಂಕಾ ಗಾಂಧಿ ತಯಾರಿಸಿದ ದೋಸೆ ಅಂತೀರಾ ?

ಮೈಸೂರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ಪಕ್ಷದ ನಾಯಕರಾದ ಡಿಕೆ ಶಿವಕುಮಾರ್ (DK Shivakumar), ರಂದೀಪ್ ಸುರ್ಜೆವಾಲಾ ಮತ್ತು ಇತರ ಕೆಲವರೊಂದಿಗೆ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿಂದಿದ್ದಾರೆ. ಪ್ರಿಯಾಂಕಾ ಗಾಂಧಿ, ಇಂದು ಬುಧವಾರ ಮೈಸೂರಿನ ಅಗ್ರಹಾರದ ಬಳಿ ಇರುವ ಮೈಲಾರಿ ಅಗ್ರಹಾರ ಹೋಟೆಲ್ ಗೆ ಆಗಮಿಸಿ ಮಸಾಲೆ ದೋಸೆ, ಇಡ್ಲಿ ಸವಿದು ಸಂತಸಪಟ್ಟರು. ಪ್ರಿಯಾಂಕ ಗಾಂಧಿ ತದನಂತರ ಹೊಟೇಲ್ ನ ಕಿಚನ್ ಗೆ ತೆರಳಿ ದೋಸೆ ಹಾಕಲು ಪ್ರಯತ್ನಪಟ್ಟರು. ಹೋಟೆಲ್ ಮಾಲೀಕ ಮತ್ತು ಅವರ ಪತ್ನಿ ಪ್ರಿಯಾಂಕಾಗೆ ದೋಸೆ ಹುಯ್ಯವ ಬಗ್ಗೆ ಸಣ್ಣ ಟ್ರೈನಿಂಗ್ ನೀಡಿದ್ದಾರೆ. ಆದರೂ ದೋಸೆ ಸರಿಯಾಗಿ ಬಂದಿಲ್ಲ.

Image Source: News 18 Kannada

 

ಹೊಟೇಲ್ ಮಾಲೀಕರ ನೆರವಿನ ನಂತರ ಕೂಡಾ ದೋಸೆ ಸೀದು ಕರಕಲಾಗಿ ಹೋದವು. ಅವರು ದೋಸೆ ಹುಯ್ಯುವ ಮತ್ತು ಎಬ್ಬಿಸುವ ಸ್ಟೈಲ್ ನೋಡಿದವರು, ಬಹುಶಃ ಇವರು ಮೊದಲ ಬಾರಿಗೆ ದೋಸೆ ಮಾಡುವ ಸಾಹಸ ಮಾಡಿರಬಹುದು ಎಂದಿದ್ದಾರೆ. ಮೈಸೂರಿನಲ್ಲಿ ಮೈಲಾರಿ ಹೋಟೆಲ್ ತುಂಬಾ ಫೇಮಸ್ಸು. ಈಗ ಮೈಲಾರಿ ಹೋಟೆಲಿನ ಮೆನುವಿನಲ್ಲಿ ಇನ್ನೊಂದು ಹೊಸ ತಿನಿಸು ಸೇರ್ಪಡೆಗೊಂಡಿದೆ. ಅದು ‘ ಪ್ರಿಯಾಂಕ ಗಾಂಧಿ ಸ್ಪೆಷಲ್ ‘ ದೋಸೆ. ಪ್ರಿಯಾಂಕ ಗಾಂಧಿ ತಯಾರಿಸಿದ ದೋಸೆಯ ಕ್ವಾಲಿಟಿ ಚೆಕ್ ಮಾಡಲು ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ: Kichcha Sudeep:ಇಂದು ಬಿಜೆಪಿ ಪರ ಕಿಚ್ಚ ಸುದೀಪ್‌ ಮತಬೇಟೆ; ಎಲ್ಲೆಲ್ಲಿ ಪ್ರಚಾರ ಗೊತ್ತಾ?

Leave A Reply

Your email address will not be published.