Home Karnataka State Politics Updates PM Modi Road Show: ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ; ವಾಹನ ಸವಾರರಿಗೆ...

PM Modi Road Show: ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ; ವಾಹನ ಸವಾರರಿಗೆ ಟ್ರಾಫಿಕ್‌ ಸಮಸ್ಯೆ

PM Modi Road Show
Image source: Hindustan Times

Hindu neighbor gifts plot of land

Hindu neighbour gifts land to Muslim journalist

PM Modi Road Show: ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಲು ಭರ್ಜರಿ ಕಸರತ್ತು ಮಾಡ್ತಿದ್ದಾರೆ.
ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಪದೇ ಪದೇ ರಾಜ್ಯಕ್ಕೆ ಆಗಮಿಸಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ, ಶಿವಮೊಗ್ಗ ಏರ್ಪೋರ್ಟ್, ಕೆಆರ್ ಪುರಂ ವೈಟ್ ಫೀಲ್ಡ್ ಮೆಟ್ರೋ ಸೇರಿದಂತೆ ಮಹತ್ವದ ಯೋಜನೆಗಳನ್ನು ಉದ್ಘಾಟನೆಗೆ ಪ್ರಧಾನಿ ಮೋದಿ ಚುನಾವಣೆ ಅಖಾಡಕ್ಕೆ ಇಳಿದಿದ್ದರು.

ಇದೀಗ ಮತ್ತೊಮ್ಮೆ ಏಪ್ರಿಲ್ 29 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಏಪ್ರಿಲ್ 29 ರಿಂದ ಮೇ 7ರ ವರೆಗೆ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಏ.29ರ ಸಂಜೆ 6.15ಕ್ಕೆ 45 ನಿಮಿಷ ಮೋದಿ ರೋಡ್ ​ಶೋ (PM Modi Road Show) ನಡೆಯಲಿದೆ. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ.
ನೈಸ್ ರೋಡ್ ಜಂಕ್ಷನ್​​ನಿಂದ ಸುಮನಹಳ್ಳಿವರೆಗೆ ರೋಡ್ ಶೋ ನಡೆಯಲಿದೆ. ಹಾಗೂ ಏಪ್ರಿಲ್ 30ರಂದು ಮೈಸೂರಿನಲ್ಲಿ ಸಂಜೆ 5.45ಕ್ಕೆ ವಿದ್ಯಾಪೀಠ ವೃತ್ತದಿಂದ ಎಲ್​​ಐಸಿ ಸರ್ಕಲ್​​ವರೆಗೆ ರೋಡ್ ಶೋ ನಡೆಯಲಿದೆ. ಇದರಿಂದ ವಾಹನ ಸವಾರರು ಅಂದೊಂದು ದಿನ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು ಬದಲಿ ಮಾರ್ಗದ ಮೂಲಕ ಸಂಚರಿಸುವುದು ಸೂಕ್ತ.

ಏಪ್ರಿಲ್ 29ರಿಂದ ಮೇ 7ರವರೆಗೆ 6 ದಿನ ಮೋದಿ ಪ್ರಚಾರ ಮಾಡಲಿದ್ದಾರೆ. 6 ದಿನಗಳಲ್ಲಿ ಮೋದಿ 21 ರ್ಯಾಲಿಗಳು ನಡೆಸಲಿದ್ದು, 180 ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿ ಬರುವಂತೆ ಪ್ಲ್ಯಾನ್ ಮಾಡಲಾಗಿದೆ. ಇನ್ನು 1 ರ್ಯಾಲಿವೇಳೆ 10 ಕ್ಷೇತ್ರಗಳನ್ನ ಕವರ್ ಮಾಡುವ ತಂತ್ರ ಹೆಣೆಯಲಾಗ್ತಿದೆ.

 

ಇದನ್ನು ಓದಿ: Bengaluru: ನೀರಿಗಾಗಿ ನೀರೆಯರ ಕಾದಾಟ, ಪ್ರಾಣ ಹೋಗುವವರೆಗೆ!!