New feature in whatsapp: ಮತ್ತೊಂದು ಅದ್ಭುತ ಫೀಚರ್ ಹೊರತಂದ ವಾಟ್ಸಪ್!

New feature in whatsapp: ದೂರದಲ್ಲಿ ಇರುವ ಸ್ನೇಹಿತರನ್ನು, ಸಂಬಂಧಿಕರನ್ನು ಕ್ಷಣಾರ್ಧದಲ್ಲಿ ಸೇರಿಸುವಂತಹ ಆಪ್ ವಾಟ್ಸಪ್. ಇಂತಹ ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸಪ್, (New feature in whatsapp) ಎಲ್ಲಾ ಬಳಕೆದಾರರ ಮನ ಗೆದ್ದಿದೆ. ಹೊಸ-ಹೊಸ ಆಫರ್ ಗಳನ್ನು ನೀಡುವುದರ ಮೂಲಕ ಮತ್ತಷ್ಟು ಗ್ರಾಹಕರ ಗಮನ ಸೆಳೆಯುತ್ತಿದೆ. ಇದೀಗ ವಾಟ್ಸಪ್ ಕಂಪನಿಯಿಂದ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ.

ಹೌದು. ವಾಟ್ಸಪ್ ಮಲ್ಟಿ ಡಿವೈಸ್ ನಲ್ಲಿ ಲಾಗಿನ್ ಮಾಡುವುದನ್ನು ಪರಿಚಯಿಸುತ್ತಿದೆ. ಮುಂದಿನ ಕೆಲವು ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುಲಿದ್ದು, ನಾಲ್ಕು ಫೋನ್ಗಳಲ್ಲಿ ಒಂದೇ ವಾಟ್ಸಾಪ್ ಖಾತೆಯನ್ನು ಲಾಗಿನ್ ಮಾಡುಲು ಸಾಧ್ಯವಾಗುತ್ತದೆ. ಒಂದು ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಸಹ ಇತರ ಡಿವೈಸ್ಗಳಲ್ಲಿ ಬಳಕೆದಾರರು ಅಪ್ಲಿಕೇಶನ್ ಅನ್ನು ಬಳಸಬಹುದು.

ಮೆಟಾದ CEO ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ‘ನೀವು ಈಗ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನ್ಗಳಿಂದ ಲಾಗ್ ಇನ್ ಮಾಡಬಹುದು’ ಎನ್ನುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಬಳಕೆದಾರರು ತಮ್ಮ ಮೆಸೇಜ್ಗಳನ್ನು ಇತರ ಫೋನ್ಗಳ ಜೊತೆಗೆ ಬೇರೆ ಡಿವೈಸ್ಗೂ ಸಿಂಕ್ ಮಾಡಬಹುದು.

ವಾಟ್ಸಾಪ್ ಶೀಘ್ರದಲ್ಲೇ ಡಿವೈಸ್ಗಳನ್ನು ಲಿಂಕ್ ಮಾಡಲು ಹೊಸ ಒನ್-ಟೈಮ್ ಕೋಡ್ ವ್ಯವಸ್ಥೆಯನ್ನು ಹೊರತರಲಿದೆ. ಸ್ಮಾರ್ಟ್ಫೋನ್ನೊಂದಿಗೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಬದಲು ವಾಟ್ಸಾಪ್ ವೆಬ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಒಂದು ಬಾರಿ ಬಳಕೆಯ ಕೋಡ್ ಅನ್ನು ಪಡೆದುಕೊಳ್ಳಬಹುದು. ಈ ಫೀಚರ್ನ ಸೌಲಭ್ಯವು ಮುಂದಿನ ದಿನಗಳಲ್ಲಿ ಹೆಚ್ಚು ಲಿಂಕ್ ಮಾಡಲಾದ ಡಿವೈಸ್ಗಳಿಗೆ ಲಭ್ಯವಿರುತ್ತದೆ.

2021 ರಿಂದ ಕಂಪನಿಯು ಬೀಟಾ ಬಳಕೆದಾರರೊಂದಿಗೆ ಮಲ್ಟಿ-ಡಿವೈಸ್ ಕಂಪ್ಯಾಟಿಬಿಲಿಟಿಯನ್ನು ಪರೀಕ್ಷಿಸುತ್ತಿದೆ. ಆದರೆ, ಕರೆಗಳು ಮತ್ತು ಚಾಟ್ಗಳಿಗಾಗಿ ವಾಟ್ಸಾಪ್ ನ ಪೂರ್ಣ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ನ ಫೀಚರ್ ಕಾರಣದಿಂದಾಗಿ ಈ ಫೀಚರ್ ಅನ್ನು ಪೂರ್ಣಗೊಳಿಸುವುದು ಕಷ್ಟಕರವಾಗಿತ್ತು.ಇದೀಗ ಟೆಲಿಗ್ರಾಮ್ ಮತ್ತು ಮೆಸೆಂಜರ್ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಹಿಂದಿಕ್ಕಿದೆ.

ಯಾಕೆಂದರೆ, ಟೆಲಿಗ್ರಾಮ್ ಮತ್ತು ಮೆಸೆಂಜರ್ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳು ಮಲ್ಟಿ-ಡಿವೈಸ್ ಮೆಸೇಜ್ ಸಿಂಕ್ರೊನೈಸೇಶನ್ ಅನ್ನು ಒದಗಿಸಿದ್ದರೂ ಅವುಗಳು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಒದಗಿಸುವುದಿಲ್ಲ. ಇದೀಗ ವಾಟ್ಸಾಪ್ ನ ಈ ಹೊಸ ಫೀಚರ್ನ ಸೇರ್ಪಡೆಯು ಕಂಪನಿಗೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಎಲ್ಲಾ ಅಪ್ಲಿಕೇಶನ್ ಗಳಿಗೆ ಪ್ರತಿ ಸ್ಪರ್ದಿಯಾಗಿದೆ.

 

ಇದನ್ನು ಓದಿ: Samantha-Chittibabu: ‘ ನನ್ನ ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲು ಇದೆ ಎಂದು ಆಕೆ ಅಧ್ಯಯನ ಮಾಡಲಿ ‘ ಸಮಂತಾ ಬಗ್ಗೆ ಈ ನಿರ್ಮಾಪಕ ಕಿಡಿ ಕಿಡಿ! 

Leave A Reply

Your email address will not be published.