Home Karnataka State Politics Updates Nalin Kumar Kateel: ರಾಹುಲ್ ಗಾಂಧಿ ಯಾವ ಹೋರಾಟದವರು? : ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನೆ

Nalin Kumar Kateel: ರಾಹುಲ್ ಗಾಂಧಿ ಯಾವ ಹೋರಾಟದವರು? : ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನೆ

Nalin Kumar Kateel
Image source : The indian Express

Hindu neighbor gifts plot of land

Hindu neighbour gifts land to Muslim journalist

Nalin Kumar Kateel: ದೀನ ನಮಗೆ ರಾಹುಲ್‌ ಗಾಂಧಿ ರಕ್ತದ ಬಗ್ಗೆ ಸಂಶಯಗಳಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಯಾವ ಹೋರಾಟದವರು? ಗಾಂಧಿ ಅಂತ ಹೇಳುವಂಥದ್ದು ರಾಹುಲ್ ಗಾಂಧಿಗೆ ಹೇಗೆ (Nalin Kumar Kateel) ಬಂತು ಎಂಬುದನ್ನು ವಿವರಣೆ ನೀಡಲಿ. 224 ಕ್ಷೇತ್ರಕ್ಕೂ ರಾಹುಲ್ ಗಾಂಧಿ ಪ್ರವಾಸ ಮಾಡಬೇಕು. ಇಡೀ ದೇಶದಲ್ಲಿ ಎಲ್ಲೆಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿದ್ದಾರೋ, ಅಲ್ಲಲ್ಲಿ ಕಾಂಗ್ರೆಸ್ ಸೋತಿದೆ ಎಂದು ಟೀಕಿಸಿದ್ದಾರೆ.

ಇನ್ನು ಲಿಂಗಾಯತ ಸಿಎಂ ವಿಚಾರವಾಗಿ ಮಾತನಾಡಿ, ಈಗಾಗಲೇ ಬಿಜೆಪಿಯೇ 3 ಬಾರಿ ಲಿಂಗಾಯತ ಮುಖ್ಯಮಂತ್ರಿಗಳನ್ನು ಮಾಡಿದೆ. ಮುಂದೆಯೂ ಲಿಂಗಾಯತರನ್ನೇ ಸಿಎಂ ಮಾಡೋದು. ಇದನ್ನೇ ಸಿದ್ರಾಮಣ್ಣ ಅಥವಾ ಡಿಕೆಶಿ ಶಕ್ತಿ, ತಾಕತ್ತು ಇದ್ರೆ ಹೇಳಲಿ ಅಂತ ಸವಾಲು ಹಾಕಿದರು.ಶೆಟ್ಟರ್‌ಗೆ ಬಿಜೆಪಿ ಗೌರವ, ಅಧಿಕಾರ ಎಲ್ಲವನ್ನೂ ಕೊಟ್ಟಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರ ವಿರುದ್ಧ ಬಿಜೆಪಿ ಗೆಲ್ಲಲೇಬೇಕು. ಕೌರವರು ಮತ್ತು ಪಾಂಡವರ ಯುದ್ಧ ಮಾಡಲೇಬೇಕು. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಅನಿವಾರ್ಯ ಎಂದರು.
ಗದಗ ಮತಕ್ಷೇತ್ರದಲ್ಲೂ ಗುಂಡಾಗಿರಿ ರಾಜಕಾರಣ ನೋಡಿದ್ದೇವೆ. ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಅಭ್ಯರ್ಥಿ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡಾಗಿರಿಯಿಂದ ಈ ಕ್ಷೇತ್ರ ಗೆಲ್ಲಬಹುದೆಂದು ಪ್ರಯತ್ನ ಮಾಡಿದ್ದಾರೆ. ಆದ್ರೆ ನಮ್ಮ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಈ ಬಾರಿ ಇಲ್ಲಿ ಗೆಲ್ತಾರೆ ಎಂದರು.

 

ಇದನ್ನು ಓದಿ: Cholesterol in body: ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ಯಾ? ಎಂದಿಗೂ ಈ ತಪ್ಪುಗಳನ್ನು ಮಾಡದಿರಿ, ನಿರ್ಲಕ್ಷ್ಯಿಸದಿರಿ