Bank holiday may 2023: ಬ್ಯಾಂಕ್ ಗ್ರಾಹಕರೇ ಗಮನಿಸಿ! ಮೇ ತಿಂಗಳಲ್ಲಿ ಬ್ಯಾಂಕ್ ಬಾಗಿಲು ಎಷ್ಟು ದಿನ ಕ್ಲೋಸ್? ಇಲ್ಲಿದೆ ವಿವರ!
Bank Holidays May 2023: ಇಂದಿನ ಡಿಜಿಟಲ್( Digital) ಯುಗದಲ್ಲಿ ಮನೆಯಲ್ಲೇ ಕುಳಿತು ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಹೆಚ್ಚಿನ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಆದರೂ ಕೂಡ ಕೆಲವು ಕಾರಣಗಳಿಂದ ಬ್ಯಾಂಕಿಗೆ ಹೋಗಬೇಕಾಗುತ್ತದೆ. ಗ್ರಾಹಕರೇ ಗಮನಿಸಿ, ನೀವೇನಾದರೂ ಮೇ ತಿಂಗಳಿನಲ್ಲಿ ಬ್ಯಾಂಕಿಗೆ ಹೋಗಬೇಕು ಅಂದುಕೊಂಡಿದ್ದರೆ ಬ್ಯಾಂಕಿನ ರಜೆಯ ಮಾಹಿತಿ(Bank News)ತಿಳಿದಿರುವುದು ಅವಶ್ಯಕ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ದೇಶದಾದ್ಯಂತ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಪ್ರತಿ ತಿಂಗಳು, ಹಬ್ಬ ಹರಿದಿನಗಳಲ್ಲಿ ಮತ್ತು ವಾರಾಂತ್ಯದಲ್ಲಿ ಮುಚ್ಚಿರುತ್ತದೆ.
ಇನ್ನೇನು ಕೆಲವೇ ದಿನಗಳಲ್ಲಿ ಏಪ್ರಿಲ್ ಮುಗಿಯಲಿದ್ದು, ಬ್ಯಾಂಕಿನಲ್ಲಿ ಯಾವುದಾದರೂ ವಹಿವಾಟು ನಡೆಸಲು ಹೋಗುವುದಾದರೆ ರಜೆಯ ಬಗ್ಗೆ ಮೊದಲೇ ತಿಳಿದಿರುವುದು ಉತ್ತಮ. ಮುಂದಿನ ಮೇ ತಿಂಗಳಿನಲ್ಲಿ(Bank Holidays May 2023) ಒಟ್ಟು 12 ದಿನ ಬ್ಯಾಂಕ್ ರಜೆಯಿರಲಿದೆ. ಹೀಗಾಗಿ, ರಜೆಯ ಬಗ್ಗೆ ತಿಳಿಯದೇ ಬ್ಯಾಂಕಿಗೆ ಭೇಟಿ ನೀಡಿದರೆ ಸಮಯ ವ್ಯರ್ಥ ಆಗುವುದರ ಜೊತೆಗೆ ಅಂದುಕೊಂಡ ಕೆಲಸ ಮಾಡಿ ಮುಗಿಸಲು ಆಗುವುದಿಲ್ಲ. ಆಯಾ ರಾಜ್ಯದ ಪ್ರಾದೇಶಿಕ ಹಬ್ಬದ ಆಚರಣೆಗಳ ಅನುಸಾರ ರಜೆ ಇರುತ್ತದೆ.
ಮೇ ತಿಂಗಳ ರಜಾ ದಿನಗಳ ಪಟ್ಟಿ ಹೀಗಿದೆ:
ಮೇ1 – ಮೇ ದಿನ
ಮೇ 5 – ಬುದ್ಧ ಪೂರ್ಣಿಮೆ
ಮೇ 7- ಭಾನುವಾರ
ಮೇ 9- ರವೀಂದ್ರನಾಥ ಟ್ಯಾಗೋರ್ ಜಯಂತಿ
ಮೇ 13 – ಎರಡನೇ ಶನಿವಾರ
ಮೇ 14- ಭಾನುವಾರ
ಮೇ 16 – ರಾಜ್ಯ ದಿನ (ಸಿಕ್ಕಿಂನಲ್ಲಿ ಮಾತ್ರ)
ಮೇ 21- ಭಾನುವಾರ
ಮೇ 22- ಮಹಾರಾಣಾ ಪ್ರತಾಪ್ ಜಯಂತಿ
ಮೇ 24- ಕಾಜಿ ನಜ್ರುಲ್ ಇಸ್ಲಾಂ ಜಯಂತಿ (ತ್ರಿಪುರದಲ್ಲಿ)
ಮೇ 27- ನಾಲ್ಕನೇ ಶನಿವಾರ
ಮೇ 28- ಭಾನುವಾರ
ಇದನ್ನು ಓದಿ: PM Modi Road Show : ಏ.29ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ; ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ