Hair Care: ಕೂದಲಿನ ತುದಿ ಕತ್ತರಿಸಿದರೆ ಕೂದಲು ಉದ್ದ ಬೆಳೆಯುವುದೇ?

Hair Care: ಸುಂದರವಾದ ದಪ್ಪ ಕಪ್ಪು ಕೂದಲು ಪಡೆಯಲು ಪ್ರತಿಯೊಬ್ಬರು ಬಯಸುವುದು ಸಹಜ. ಉದ್ದವಾದ ದಪ್ಪ ಕೇಶರಾಶಿ ಪಡೆಯಲು ನಾರಿಯರು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಅದೇ ರೀತಿ ಕೂದಲು ಟ್ರಿಮ್ ಮಾಡಬೇಕು ಎಂದು ಹೇಳುವುದನ್ನು ಕೇಳಿರಬಹುದು. ಟ್ರಿಮ್ ಮಾಡಿದರೆ ಕೂದಲು ಉದ್ದ ಬರುತ್ತಾ? ಕೂದಲನ್ನು ಯಾವಾಗ ಟ್ರಿಮ್ ಮಾಡಿದರೆ ಒಳ್ಳೆಯದು? ಎಂಬ ಅನುಮಾನ ಹೆಚ್ಚಿನವರನ್ನು ಕಾಡದಿರದು.

ಕೂದಲು(Hair Care) ಚೆನ್ನಾಗಿ ಬೆಳೆಯಲು ಅದರ ಆರೈಕೆ ಮಾಡುವುದು ಕೂಡ ಅವಶ್ಯಕ. ಕೂದಲಿಗೆ ಅಗತ್ಯವಾದ ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ಸತು, ಕಬ್ಬಿಣ ಮತ್ತು ಇತರ ಜೀವಸತ್ವಗಳಿಂದ. ಕೂದಲು ಉದುರುವುದು ಕಡಿಮೆಯಾಗುವ ಜೊತೆಗೆ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಕೂದಲಿಗೆ ನಿಯಮಿತವಾಗಿ ಎಣ್ಣೆ ಮಸಾಜ್ ಮಾಡುವುದನ್ನು ರೂಡಿಸಿಕೊಳ್ಳಬೇಕು. ವಾರದಲ್ಲಿ ಒಂದೆರಡು ಬಾರಿ ಮಸಾಜ್ ಮಾಡಿ ಕೂದಲನ್ನು ಬಾಚುವುದರಿಂದ ಕೂದಲಿನ ಬುಡದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ. ಇದರ ಜೊತೆಗೆ ಆಹಾರ ಕ್ರಮಗಳ ಮೂಲಕ ಕೂಡ ಕೂದಲು ಉದುರುವ ಸಮಸ್ಯೆ ಯಿಂದ ಪಾರಾಗಬಹುದು.

ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಬಹಳ ಮುಖ್ಯವಾಗಿದ್ದು, ಮೊಟ್ಟೆಯ ಪ್ರೋಟೀನ್ ಮತ್ತು ಬಯೋಟಿನ್ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ನಿಮಗೆ ಸಪ್ಲಿಮೆಂಟ್ಸ್ ಹಾಗೂ ಶ್ಯಾಂಪೂ, ಕಂಡೀಷನರ್ ಸೂಚಿಸುತ್ತದೆ. ಇದರಿಂದ ಕೂದಲು ಉದುರುವುದನ್ನು ತಡೆಯಬಹುದು. ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಪಾಲಕ್ ಸೊಪ್ಪಿನ ಸೇವನೆಯಿಂದ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ ಮತ್ತು ಫೋಲೇಟ್ ಅನ್ನು ಹೊಂದಿರುತ್ತದೆ.

ಕೂದಲು ಟ್ರಿಮ್ ಮಾಡಿದಾಗ ಕೂದಲು ಉದ್ದ ಬೆಳೆಯುವುದೇ ಎಂಬ ಪ್ರಶ್ನೆ ಸಹಜವಾಗಿ ಹೆಚ್ಚಿನವರನ್ನು ಕಾಡಬಹುದು. ಟ್ರಿಮ್ ಮಾಡುವುದರಿಂದ ಕೂದಲು ಉದ್ದ ಬೆಳೆಯುವುದಿಲ್ಲ ಆದರೆ ಕೂದಲಿನ ಬುಡ ಬಲವಾಗಿದ್ದರೆ ಮಾತ್ರ ಕೂದಲು ಉದ್ದ ಬೆಳೆಯುತ್ತದೆ. ಕೂದಲನ್ನು ಕತ್ತರಿಸಬೇಕು. ಸೀಳು ಕೂದಲು ಉಂಟಾದಾಗ ಅಥವಾ ಕೂದಲು ಕವಲೊಡೆದರೆ ಕೂದಲು ಉದ್ದ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ಸಂದರ್ಭ ಕೂದಲಿನ ತುದಿ ಕತ್ತರಿಸಿದರೆ ಕೂದಲು ಉದ್ದ ಬೆಳೆಯುತ್ತದೆ. ಕೂದಲಿನ ಆರೋಗ್ಯ ಹಾನಿಯಾಗಿದ್ದ ಸಂದರ್ಭ ಕೂದಲು ಬುಡದಿಂದಲೇ ಉದುರುತ್ತದೆ. ಕೆಲವರಿಗೆ ಮಾನಸಿಕ ಒತ್ತಡದಿಂದ ಕೂದಲು ಉದುರುತ್ತದೆ. ಧೂಳು, ಪೋಷಕಾಂಶವಿರುವ ಆಹಾರಗಳ ಕೊರತೆ, ಹಾರ್ಮೋನ್‌ಗಳ ಬದಲಾವಣೆ, ಕೆಲವೊಂದು ಆರೋಗ್ಯ ಸಮಸ್ಯೆಯಿದ್ದಾಗ ಕೂದಲ ಆರೈಕೆಯ ನಿರ್ಲಕ್ಷ್ಯ ಧೋರಣೆಯಿಂದ ಕೂದಲು ಉದುರುತ್ತದೆ. ಹೆಚ್ಚು ಕೂದಲು ಉದುರುತ್ತಿದ್ದರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

 

ಇದನ್ನು ಓದಿ: Dantewada Attack: ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿ, 11 ಯೋಧರು ಹುತಾತ್ಮ

Leave A Reply

Your email address will not be published.