Phonepe: ಫೋನ್ ಪೇ ಆಪ್ ಕಡೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್!

Phonepe: ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ವಹಿವಾಟುಗಳು ಆನ್ ಲೈನ್ ಮೂಲಕವೇ ನಡೆಯುತ್ತಿದ್ದು, ಕೆಲಸಗಳೆಲ್ಲ ಸುಲಭವಾಗಿ ಕೂತಲ್ಲಿಂದಲೇ ನಡೆಯುವಂತೆ ಆಗಿದೆ. ಇಂತಹ ವಹಿವಾಟಿಗಾಗಿಯೇ ಹಲವು ಯುಪಿಐ ಪೆಮೆಂಟ್ ಆಪ್(payment app) ಗಳು ಚಾಲ್ತಿಯಲ್ಲಿದ್ದು, ಇವುಗಳಲ್ಲಿ ಫೋನ್ ಪೇ ಕೂಡ ಸೇರಿದೆ.

ಇದೀಗ ಅತೀ ಹೆಚ್ಚು ಜನರು ಬಳಸುತ್ತಿರುವ ಫೋನ್ ಪೇ(phonepe) ಆಪ್ ಕಡೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್ ವೊಂದಿದ್ದು, ಶೀಘ್ರದಲ್ಲೇ ಭಾರತದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಹೊಸ ಆಪ್‌ಸ್ಟೋರ್‌ ಪರಿಚಯಿಸಲಿದೆ. ಈ ಆಪ್‌ ಸ್ಟೋರ್‌ನಲ್ಲಿ ಗ್ರಾಹಕರಿಗೆ ಸಂದರ್ಭಕ್ಕೆ ತಕ್ಕಂತೆ ಹೈಪರ್‌ ಲೋಕಲೈಸ್ಡ್‌ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎನ್ನಲಾಗಿದೆ.

ಈ ಆಯಪ್‌ ಸ್ಟೋರ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು, ಭಾರತದ ಹಲವು ಭಾಷೆಗಳಲ್ಲಿ ಲಭ್ಯವಾಗಲಿದೆ. ಇದರಿಂದ ಗುಣಮಟ್ಟದ ಬಳಕೆದಾರರನ್ನು ಪಡೆದುಕೊಳ್ಳಲು ಡೆವಲಪರ್‌ಗಳಿಗೆ ಸಹಾಯ ಮಾಡಲಿದೆ ಎಂದು ವರದಿಯಾಗಿದೆ. ಇದರಲ್ಲಿ ಫೋನ್‌ಪೇ ಆಂತರಿಕ ಡಾಕ್ಯುಮೆಂಟ್‌ಗೆ ಪ್ರವೇಶ ಸಿಗಲಿದೆ. ಹಾಗೆಯೇ ಗುಣಮಟ್ಟದ ಜಾಹೀರಾತುಗಳು, ವೈಯಕ್ತೀಕರಿಸಿದ ಗ್ರಾಹಕರ ಗುರಿ, 12 ಭಾಷೆಗಳಿಗೆ ಬೆಂಬಲ ಹಾಗೂ ದಿನದ ಲೈವ್ ಚಾಟ್ ಬೆಂಬಲವನ್ನು ಈ ಡಾಕ್ಯುಮೆಂಟ್ ಬಹಿರಂಗಪಡಿಸಲಿದೆ.

ಫೋನ್‌ಪೇ ಮೂಲಕ ಒಬ್ಬ ವ್ಯಕ್ತಿಯು ಪ್ರತಿದಿನ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾತ್ರ ನಡೆಸಬಹುದಾಗಿದ್ದು, ಫೋನ್‌ಪೇ ನಲ್ಲಿಯೂ ಕೂಡ ಎರಡು ಸಾವಿರ ರೂ.ವರೆಗೆ ಮನಿ ರಿಕ್ವೆಸ್ಟ್‌ ಕಳುಹಿಸಬಹುದಾಗಿದೆ. ಫೋನ್‌ಪೇ ದೈನಂದಿನ UPI ವಹಿವಾಟಿನ ಮಿತಿಯನ್ನು 1,00,000ರೂ.ವರೆಗೂ ನೀಡಿದೆ. ಈ ಮೂಲಕ ಫೋನ್ ಪೇ ಗೂಗಲ್ ಪೇ ಯನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: Pickles: ಖಾರ ಖಾರ ಅಂತ ಹೆಚ್ಚಾಗಿ ಉಪ್ಪಿನಕಾಯಿ ತಿಂತೀರಾ? ಹಾಗದ್ರೆ ಹುಷಾರ್!

 

Leave A Reply

Your email address will not be published.