Andhra Pradesh: 14 ದಿನದಲ್ಲಿ ಮದುವೆಯಾಗಬೇಕಿದ್ದ ಜೋಡಿ ಸಾವು! ಕಾರಣವಾಯ್ತೇ ಆ ಅನಿರೀಕ್ಷಿತ ಘಟನೆ?!

Share the Article

Andhra Pradesh: 14 ದಿನದಲ್ಲಿ ಮದುವೆಯಾಗಬೇಕಿದ್ದ ಜೋಡಿ ದುರಂತ ಅಂತ್ಯ ಕಂಡ ಘಟನೆ ಆಂಧ್ರಪ್ರದೇಶದ (Andhra Pradesh) ರಾಜಮಂಡ್ರಿಯಲ್ಲಿ ನಡೆದಿದೆ. ಮೃತರನ್ನು ಮನೆಪಲ್ಲಿ ರಾಜ್‌ಕುಮಾರ್ (25) ಮತ್ತು ಮಲಿರೆಡ್ಡಿ ದುರ್ಗಾಭವಾನಿ (18) ಎಂದು ಹೇಳಲಾಗಿದೆ.

ರಾಜ್‌ಕುಮಾರ್ ಇಲ್ಲಿನ ಕಾಕಿನಾಡ ಜಿಲ್ಲೆಯ ಜಗ್ಗಂಪೇಟ ಮಂಡಲದ
ನಿವಾಸಿಯಾಗಿದ್ದು, ಆತನಿಗೆ ಅದೇ ಜಿಲ್ಲೆಯ ನಿವಾಸಿಯಾದ ದುರ್ಗಾಭವಾನಿ ಜೊತೆಗೆ ನಿಶ್ಚಿತಾರ್ಥವಾಗಿತ್ತು. ಇನ್ನೇನು ಮದುವೆಯಾಗಲು 14 ದಿನಗಳು ಬಾಕಿ ಇರುವಾಗಲೇ ಅಪಘಾತದಲ್ಲಿ ಜೋಡಿಗಳು ಮೃತಪಟ್ಟಿದ್ದಾರೆ (died).

ಈ ಜೋಡಿಗಳಿಬ್ಬರು ಮಂಗಳವಾರ ಪಶ್ಚಿಮ ಗೋದಾವರಿ ಜಿಲ್ಲೆಯ ಗೌರಿಪಟ್ಟಣದ ಮೇರಿ ಮಾತಾ ದೇವಸ್ಥಾನಕ್ಕೆ (Temple) ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಜಮಂಡ್ರಿಯ ಕೊಟ್ಟೂರು ಬಳಿ ಹಿಂದಿನಿಂದ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಘಟನೆ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಮೃತದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗಳ ಮದುವೆಯ ಖುಷಿಯಲ್ಲಿದ್ದ ದುರ್ಗಾಭವಾನಿ ಪೋಷಕರು
ಮದುವೆಯ ಆಮಂತ್ರಣ ಪತ್ರವನ್ನು ಹಂಚುವುದರಲ್ಲಿ ನಿರತರಾಗಿದ್ದರು. ನಂತರ ವಿಷಯ ತಿಳಿದ ಪೋಷಕರಿಗೆ ಭಾರೀ ಆಘಾತವಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.

 

ಇದನ್ನು ಓದಿ: Mohini Ekadashi: ಈ ಕಥೆ ಓದಿದರೆ ಸಾಕು 1,000 ಗೋವುಗಳನ್ನು ಸಾಕಿದಷ್ಟೇ ಪುಣ್ಯ ನಿಮಗೆ ಬರುತ್ತದೆ, ಹಲವು ಸಮಸ್ಯೆಗಳು ದೂರವಾಗುತ್ತವೆ! 

 

Leave A Reply