CM Bommai: ಮುಖ್ಯಮಂತ್ರಿ ಬೊಮ್ಮಾಯಿ ಲಿಂಗಾಯತರಲ್ಲ – ಸುರ್ಜೇವಾಲ: ಹಾಗಾದ್ರೆ ರಾಹುಲ್ ಗಾಂಧಿ ಲಿಂಗಾಯತರಾ ? – ಬೊಮ್ಮಾಯಿ

Chief minister Bommai : ಬೆಳಗಾವಿ, ಹಿರೇಬಾಗೇವಾಡಿ: ” ಬೊಮ್ಮಾಯಿ ಲಿಂಗಾಯತರಲ್ಲ ಎನ್ನುವ ವಿಶೇಷ ಹೇಳಿಕೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ. ಇದೀಗ ಈ ಸುದ್ದಿ ಚರ್ಚೆಯಾಗುತ್ತಿದೆ. ” ನಾನು ಲಿಂಗಾಯತ ಅಲ್ಲ ಎಂದಾದರೆ, ಹಾಗಾದ್ರೆ ಯಾರು ರಾಹುಲ್ ಗಾಂಧಿ- ಸುರ್ಜೇವಾಲಾ ಲಿಂಗಾಯತರಾ? “ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief minister Bommai ) ಪ್ರಶ್ನಿಸಿದ್ದಾರೆ.

 

ನಿನ್ನೆ ಮಂಗಳವಾರ ಬೆಳಗಾವಿಯ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳಕರ ಪರವಾಗಿ ಹಿರೇಬಾಗೇವಾಡಿಯಲ್ಲಿ ಪ್ರಚಾರ ನಡೆಸಿ ಬೊಮ್ಮಾಯಿ ಅವರು ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಬೊಮ್ಮಾಯಿಯವರು, ” ಕಾಂಗ್ರೆಸ್ ಒಂದು ಬಾರಿ ಧರ್ಮ ಒಡೆಯುವ ಹುನ್ನಾರ ನಡೆಸಿ ಸರಿಯಾಗಿ ಪೆಟ್ಟು ತಿಂದಿದ್ದಾರೆ. ಆದರೂ ಈ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ. ನೀವು ನಮ್ಮ ಸ್ವಾಭಿಮಾನ ಕೆಣಕಿದ್ದೀರಿ. ಎಚ್ಚರ, ಅದು ಜ್ವಾಲೆಯಾಗಿ ನಿಮ್ಮ ವಿರುದ್ಧ ಬರಲಿದೆ ” ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

” ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಅಲ್ಲದೆ, ನಾಗೇಶ ಮನ್ನೋಳಕರ ಪರ ರಮೇಶ್ ಜಾರಕಿಹೊಳಿ ಕೂಡ ನಿಂತಿದ್ದಾರೆ. ರಮೇಶ್ ಜಾರಕಿಹೊಳಿಯವರ ಪ್ರತಿಜ್ಞೆ ಎಂದೂ ತಪ್ಪಿಲ್ಲ. ಅದರಲ್ಲೂ ಮುಖ್ಯವಾಗಿ ಮಾಜಿ ಶಾಸಕ ಸಂಜಯ ಪಾಟೀಲರ ಭಾಷಣ ಕೇಳುವುದೇ ರೋಮಾಂಚಕ ” ಎಂದರು.

” ಈ ರಮೇಶ ಜಾರಕಿಹೊಳಿಯದ್ದು ವಿಚಿತ್ರ ರಾಜಕೀಯ ಜೀವನ. 25 ವರ್ಷಗಳು ಶಾಸಕರಾಗಿದ್ದರೂ ಸಚಿವರಾಗಿದ್ದು ಎರಡೇ ವರ್ಷ. ಉಳಿದ ಜೀವನವನ್ನು ಅವರನ್ನು ಶಾಸಕರಾಗಿಯೇ ಕೆಲಸ ಮಾಡಿದ್ದಾರೆ. ಇತರರ ಗೆಲುವಿಗೆ ಅವರು ಓಡಾಡಿದ್ದಾರೆ. ಇದರಿಂದ ಜಿಲ್ಲೆಯ ಜನರು ಅವರ ಮೇಲೆ ವಿಶ್ವಾಸ ವ್ಯಕ್ತಡಿಸಿದ್ದಾರೆ.” ಎಂದು ಚುನಾವಣಾ ಪ್ರಚಾರ ನಡೆಸುತ್ತಾ ರಮೇಶ್ ಜಾರಕಿಹೊಳಿ ಅವರನ್ನು ಹೊಗಳಿದ್ದಾರೆ.

ಇದನ್ನೂ ಓದಿ: K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ

Leave A Reply

Your email address will not be published.